ನವದೆಹಲಿ: ಮುಡಾ ಹಗರಣ ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಜಾರಿ ನಿರ್ದೇಶನಾಲಯ ಇಸಿಐಆರ್ ದಾಖಲಿಸಿದೆ. ನಾಲ್ವರನ್ನು ಆರೋಪಿಗಳನ್ನಾಗಿಸಿ ಜಾರಿ ನಿರ್ದೇಶನಾಲಯ ಇಸಿಐಆರ್ ದಾಖಲು ಮಾಡಿದೆ. ಹೀಗಾಗಿ ನಾಲ್ವರ ವಿಚಾರಣೆಗೆ ಸಮನ್ಸ್ ನೀಡಲಿದೆ. ಲೋಕಾಯುಕ್ತ ಎಫ್‌ಐಆರ್‌ನಲ್ಲಿ ಉಲ್ಲೇಖವಾದ ಹೆಸರುಗಳ ಮೇಲೆ ಇ.ಡಿ ಇಸಿಐಆರ್ ದಾಖಲಿಸಿದೆ. ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಸಿದ್ದರಾಮಯ್ಯ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಮತ್ತು ದೇವರಾಜು ಅವರ ಹೆಸರುಗಳ ಉಲ್ಲೇಖವಾಗಿದೆ.
ದೂರನ್ನು ಸ್ವೀಕರಿಸಿ PMLA 2001 ಅಡಿಯಲ್ಲಿ ತನಿಖೆ ಮಾಡಲಿದ್ದಾರೆ.ಇಡಿ ದಾಖಲಿಸಿರುವ ಇಸಿಐಆರ್ ನಲ್ಲಿ ಸಿದ್ದರಾಮಯ್ಯ ಮೊದಲ, ಪತ್ನಿ ಪಾರ್ವತಿ ಎರಡನೇ, ಭಾಮೈದ ಮಲ್ಲಿಕಾರ್ಜುನಸ್ವಾಮಿ ಮೂರನೇ ಹಾಗೂ ಜಮೀನು ಮಾಲೀಕ ದೇವರಾಜು ನಾಲ್ಕನೇ ಆರೋಪಿಯಾಗಿದ್ದಾರೆ.
ಯಾವುದೇ ಸಂದರ್ಭದಲ್ಲಿ ಇಡಿಯಿಂದ ದಾಳಿಯಾಗುವ ಸಾಧ್ಯತೆ ಇದೆ. ದಾಖಲೆಗಳ ಪರಿಶೀಲನೆಗೆ ದಾಳಿ ಮಾಡಬಹುದು. ಪ್ರಕರಣದ ಪ್ರಮುಖ ಕೇಂದ್ರವಾಗಿರುವ ಮುಡಾ ಕಚೇರಿ ಹಾಗೂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ಸಂಬಂಧಿಸಿದ ನಿವಾಸದ ಮೇಲೆ ಸಾಧ್ಯತೆಯಿದೆ.
59 ಕೋಟಿ ರೂ. ಮೌಲ್ಯದ 14 ಸೈಟುಗಳ ಹಗರಣದಲ್ಲಿ ತನಿಖೆ ನಡೆಸಬೇಕು ಅಂತ ಜಾರಿ ನಿರ್ದೇಶನಾಲಯಕ್ಕೆ ಇ-ಮೇಲ್ ಮೂಲಕ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ದೂರು ನೀಡಿದ್ದರು.

