ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿಇತಿಹಾಸ ಸೃಷ್ಟಿಸಿದ 7 ತಿಂಗಳ ಗರ್ಭಿಣಿ

ಪ್ಯಾರಿಸ್ : ಒಲಿಂಪಿಕ್​ನ ನಾಲ್ಕನೇ ದಿನವಾದ ಇಂದು 7 ತಿಂಗಳ ಗರ್ಭಿಣಿ ಈಜಿಪ್ಟ್​ನ ಫೆನ್ಸರ್ ನಾಡಾ ಹಫೀಜ್​ ವೈಯಕ್ತಿಕ ಫೆನ್ಸಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಇತಿಹಾಸ ಸೃಷ್ಟಿ ಮಾಡಿದ್ದಾರೆ. ನಾಡಾ ಹಫೀಜ್ ಅವರು 7 ತಿಂಗಳ ಗರ್ಭಿಣಿಯಾಗಿದ್ದರೂ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಿ, 16ನೇ ಸುತ್ತಿನಲ್ಲಿ ಸೋಲನ್ನು ಕಂಡಿದ್ದಾರೆ. ಆದರೇ ಗರ್ಭಿಣಿಯಾಗಿದ್ದರೂ ಕೂಡ ದೇಶವನ್ನು ಪ್ರತಿನಿಧಿಸಿ ಜನರ ಹೃದಯವನ್ನು ಗೆದ್ದಿದ್ದಾರೆ. 26ನೇ ವಯಸ್ಸಿನ ನಾಡಾ ಹಫೀಜ್ ತನ್ನ ಮೂರನೇ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ ವೈಯಕ್ತಿಕ ಸೇಬರ್ ಸ್ಪರ್ಧೆಯಲ್ಲಿ ತನ್ನ ಮೊದಲ ಪಂದ್ಯವನ್ನು ಗೆದ್ದಿದ್ದರು. … Continue reading ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿಇತಿಹಾಸ ಸೃಷ್ಟಿಸಿದ 7 ತಿಂಗಳ ಗರ್ಭಿಣಿ