ಮುಂಬೈ : ಡಿಸೆಂಬರ್ 3ರಂದು ಮತಯಂತ್ರಗಳ ಪರಿಶೀಲನೆ ಹಾಗು ವಿವಿ ಪ್ಯಾಟ್ ಮತಪತ್ರಗಳನ್ನು ಎಣಿಕೆ ಮಾಡಿ ತಾಳೆ ಹಾಕಲು ಚುನಾವಣಾ ಆಯೋಗ ನಿರ್ಧರಿಸಿದೆ. ಈ ಪ್ರಕ್ರಿಯೆಯನ್ನು ಸಾಕ್ಷೀಕರಿಸಲು ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ನಿಯೋಗಕ್ಕೂ ಸಹ ಆಹ್ವಾನ ನೀಡಲಾಗಿದೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಓಟಿಂಗ್ ಮಷಿನ್ ಬಗ್ಗೆ ಕಾಂಗ್ರೆಸ್ ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ವಿ ಪ್ಯಾಟ್ ಮತಪತ್ರಗಳನ್ನು ಎಣಿಕೆ ಮಾಡಿ ತಾಳೆ ಹಾಕಲು ಚುನಾವಣಾ ಆಯೋಗ ನಿರ್ಧರಿಸಿದೆ.
ಈಗಾಗಲೇ ಮತದಾನದ ಪ್ರಮಾಣ ಕುರಿತಂತೆ ತಾನು ನೀಡಿರುವ ಅಂಕಿ ಅಂಶಗಳು ನಿಖರವಾಗಿವೆ. ಸಂಜೆ 5 ಗಂಟೆಯ ವೇಳೆಗೆ ಮತದಾನದ ಅಂಕಿ ಅಂಶಗಳು ಬರುವುದು ಸ್ವಲ್ಪ ತಡವಾಗಿದ್ದು ಗೊಂದಲಗಳಿಗೆ ಕಾರಣವಾಗಿತ್ತು.
ಈ ಗೊಂದಲವನ್ನು ನಿವಾರಿಸಲು ಈಗಾಗಲೇ ಆಯೋಗ ಪ್ರಯತ್ನಿಸಿದೆ. ಹಾಗಿದ್ದೂ ಸಹ ಕಾಂಗ್ರೆಸ್ ಸೇರಿದಂತೆ ಕೆಲವು ರಾಜಕೀಯ ಪಕ್ಷಗಳು ಇವಿಎಂಗಳ ಕಾರ್ಯ ದಕ್ಷತೆಯ ಮೇಲೆ ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಅವರ ಸಮ್ಮುಖದಲ್ಲೇ ಇವಿಎಂಗಳ ಪರಿಶೀಲನೆ ನಡೆಸಲಾಗುವುದು ಎಂದು ಮಹಾರಾಷ್ಟ್ರದ ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.
ಈಗಾಗಲೇ ಕಾಂಗ್ರೆಸ್ ಪಕ್ಷದ ನಾಯಕರು ಇವಿಎಂ ಕುರಿತು ರಾಷ್ಟ್ರದಾದ್ಯಂತ ಅಭಿಯಾನ ಆರಂಭಿಸಲು ಯೋಜನೆ ರೂಪಿಸಿದ್ದು. ಇದಕ್ಕೆ ನೆನ್ನೆ ನಡೆದ ಕಾಂಗ್ರೆಸ್ ಕಾರ್ಯಕಾರಣಿ ಸಭೆಯು ಒಪ್ಪಿಗೆ ಸೂಚಿಸಿದೆ.