ಶೆಟ್ರು ಮತ್ತೆ ದೈವದ ಮೊರೆ ಹೋಗಿದ್ದು ಯಾಕೆ?
ಶೆಟ್ರಿಗೆ ದೈವ ಈ ಸಲ ಅಭಯ ನೀಡ್ತಾ ಇಲ್ಲ ಎಚ್ಚರಿಕೆ ಕೊಡ್ತಾ
ಶೆಟ್ರು ಕಾಂತಾರ ಸಿನಿಮಾ ತೆಗೆದಿದ್ದೆ ಅವರಿಗೆ ಮುಳುವಾಯಿತಾ ?
5 ತಿಂಗಳ ಗಡುವಲ್ಲಿ ಒಳ್ಳೆಯದು ಮಾಡುತ್ತೇನೆಂದು ಎಂದು ದೈವ ಅಭಯ
ಪಂಜುರ್ಲಿ ದೈವದಲ್ಲಿ ಕಷ್ಟ ಹೇಳಿಕೊಂಡ ರಿಷಬ್ ಶೆಟ್ಟಿ ತಮ್ಮ ನೋವನ್ನು ತಿಳಿಸಿದ್ದಾರೆ. ಜಗತ್ತಿನೆಲ್ಲೆಡೆ ನಿನಗೆ ದುಶ್ಮನ್ ಗಳಿದ್ದಾರೆ, ನಿನ್ನ ಸಂಸಾರ ಹಾಳು ಮಾಡಲು ಯತ್ನಿಸುತ್ತಿದ್ದಾರೆ. ನಿನ್ನ ಕಾರ್ಯ ಫಲ ನೀಡದಂತೆ ಹಾಳು ಮಾಡಲು ಭಾರೀ ಸಂಚು ನಡೆದಿದೆ.
ಈಗ ಗಂಡಾಂತರ ಬಂದಿದೆಯೆಂದು ಬಂದಿದ್ದೀಯಾ? ನೀನು ನಂಬಿದ ದೈವ ಕೈಬಿಡಲ್ಲ ಎಂದು ದೈವ ಆಶ್ವಾಸನೆ ನೀಡಿದೆ.ಯಾರೋ ನಿನಗೆ ಕೇಡು ಬಗೆದಿದ್ದಾರೆ, ಅವರು ಯಾರೆಂದು ನಾನು ಹೇಳಲ್ಲ, ನಿನಗೆ ಕೇಡು ಆಗದಂತೆ ನೋಡಿಕೊಳ್ಳುವೆ, ನನಗೆ ಸೇವೆ ನೀಡುವ ಹರಕೆ ಹೇಳಿಕೋ 5 ತಿಂಗಳಲ್ಲಿ ಒಳ್ಳೆದು ಮಾಡುತ್ತೇನೆ ಎಂದು ಅಭಯ ನೀಡಿದೆ.
ಈ ಮೂಲಕ ಕೈಮುಗಿದು ಬೇಡಿಕೊಂಡ ರಿಷಬ್ ದಂಪತಿಗೆ ವಾರಾಹಿ ಪಂಜುರ್ಲಿ ದೈವದ ಅಭಯ ಸಿಕ್ಕಿದೆ. ಇಬ್ಬರು ಮಕ್ಕಳೊಂದಿಗೆ ಬೆಂಗಳೂರಿನಿಂದಲೇ ದೈವದ ಉತ್ಸವಕ್ಕೆ ಹೋಗಿದ್ದರು ನಟ ರಿಷಬ್ ಶೆಟ್ಟಿ ದಂಪತಿ.ನಸುಕಿನ ಜಾವ 4 ಗಂಟೆವರೆಗೂ ದೈವದ ಉತ್ಸವದಲ್ಲಿ ರಿಷಬ್ ಶೆಟ್ಟಿ ಮತ್ತು ಕುಟುಂಬ ಭಾಗಿ ಆಗಿದ್ದರು.
ಮಂಗಳೂರಿನಲ್ಲಿ ಕದ್ರಿ ಬಾರೆಬೈಲ್ ವಾರಾಹಿ ಪಂಜುರ್ಲಿ, ಜಾರಂದಾಯ ದೈವದ ಉತ್ಸವದಲ್ಲಿ ರಿಷಬ್ ಶೆಟ್ಟಿ ದಂಪತಿ ಮತ್ತು ಮಕ್ಕಳು ಭಾಗಿಯಾದರು.ಗಂಡಾಂತರ ಬಂದಿದೆಯೆಂದು ಬಂದಿದ್ದೀಯಾ, ನಂಬಿದ ದೈವ ಕೈಬಿಡಲ್ಲ. ಯಾರು ನಿನಗೆ ಕೇಡು ಬಗೆದಿದ್ದಾರೆಂದು ಈಗ ಹೇಳಲ್ಲ, ನೋಡಿಕೊಳ್ತೇನೆ. ಹರಕೆ ಮಾಡಿಕೊ.. ಐದು ತಿಂಗಳ ಗಡುವಲ್ಲಿ ಒಳ್ಳೇದು ಮಾಡುತ್ತೇನೆ ಎಂದು ದೈವ ಅಭಯ ನೀಡಿದೆ.