ಬೆಂಗಳೂರು: ಕರ್ನಾಟಕದಲ್ಲಿ ಬಿಯರ್ (Beer) ಮಾರಾಟದಲ್ಲಿ ಮೊದಲ ಬಾರಿಗೆ 3.87 ಕೋಟಿ ಲೀಟರ್ ಬಿಯರ್ ಸೇಲ್ ಮಾಡಿ ಅಬಕಾರಿ ಇಲಾಖೆ (Exise Department) ದಾಖಲೆ ಸೃಷ್ಟಿಸಿದೆ.
ರಾಜ್ಯದಲ್ಲಿ ಬಿಸಿಲ ಝುಳ ಮತ್ತು ಚುನಾವಣೆಗೆ ಬಿಸಿಲ ಪರಿಣಾಮ ಬಾರಿ ಬಿಯರ್ ಸೇಲಾಗಿದೆ. ಕಳೆದ ತಿಂಗಳು (ಏಪ್ರಿಲ್) ತಿಂಗಳಿನಲ್ಲಿ ಬಿಯರ್ ಮಾರಾಟದಲ್ಲಿ ಸಾರ್ವಕಾಲಿಕ ದಾಖಲೆ ಸೃಷ್ಟಿ ಮಾಡಿದ್ದಾರೆ. ಒಂದು ತಿಂಗಳಿನಲ್ಲಿ ಬರೋಬ್ಬರಿ 48.72 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದೆ.

ಏಪ್ರಿಲ್‌ನಲ್ಲಿ 3.87 ಕೋಟಿ ಲೀಟರ್ ಬಿಯರ್ ಮಾರಾಟವಾಗಿದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ 38.59 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿತ್ತು. ಪ್ರಸಕ್ತ ಏಪ್ರಿಲ್‌ನಲ್ಲಿ 11.13 ಲಕ್ಷ ಬಾಕ್ಸ್ ಬಿಯರ್ ಹೆಚ್ಚಾಗಿ ಮಾರಾಟವಾಗುತ್ತಿದೆ. ಇದನ್ನೂ ಓದಿ: ಪ್ರಜ್ವಲ್ ಕೇಳಿದ್ದ ಕಾಲಾವಕಾಶ ಇಂದಿಗೆ ಅಂತ್ಯ
ಯಾವ್ಯಾವ ವರ್ಷ ಏಪ್ರಿಲ್‌ನಲ್ಲಿ, ಎಷ್ಟೆಷ್ಟು ಮಾರಾಟ
2018 ರಲ್ಲಿ 27.39 ಲಕ್ಷ ಬಾಕ್ಸ್
2019 ರಲ್ಲಿ 26.82 ಲಕ್ಷ ಬಾಕ್ಸ್ ಬಿಯರ್ ಮಾರಾಟ
2020 ರ ಏಪ್ರಿಲ್‌ನಲ್ಲಿ ಕೋವಿಡ್ ಲಾಕ್‌ಡೌನ್‌ನಿಂದಾಗಿ ಮದ್ಯ ಮಾರಾಟಕ್ಕೆ ನಿರ್ಬಂಧ
2021 ರಲ್ಲಿ 25.72 ಲಕ್ಷ ಬಾಕ್ಸ್
2022 ರಲ್ಲಿ 36.84 ಲಕ್ಷ ಬಾಕ್ಸ್
ಕಳೆದ ವರ್ಷದ ಏಪ್ರಿಲ್‌ನಲ್ಲಿ 38.59 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದ್ದು, ಇದೀಗ 48.72 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದೆ. ಇದನ್ನೂ ಓದಿ: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಇಂದು ಮಳೆ ಸಾಧ್ಯತೆ