ಖ್ಯಾತ ಜನಪದ ಕಲಾವಿದ, ನಟ ಗುರುರಾಜ್ ಹೊಸಕೋಟೆ ಕಾರು ಅಪಘಾತ

ಬಾಗಲಕೋಟೆ : ಖ್ಯಾತ ಜನಪದ ಕಲಾವಿದ, ಚಿತ್ರನಟ ಗುರುರಾಜ್ ಹೊಸಕೋಟೆ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಸೊರಗಾವಿ ಬಳಿ ನಡೆದಿದೆ. ಎದುರಿನಿಂದ ಬರುತ್ತಿದ್ದ ವಾಹನ ತಪ್ಪಿಸಲು ಹೋಗಿ ಕಾರು ರಸ್ತೆ ಪಕ್ಕದ ಬಂಡೆಗಲ್ಲಿಗೆ ಡಿಕ್ಕಿ ಹೊಡೆದಿದೆ. ಕಾರಿನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಸದ್ಯ ಗುರುರಾಜ್ ಹೊಸಕೋಟೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನಲ್ಲಿದ್ದ ಯಾರಿಗೂ ಯಾವುದೇ ತೊಂದರೆಯಾಗಿಲ್ಲ ಎಂದು ತಿಳಿದುಬಂದಿದೆ. ಗುರುರಾಜ್ ಹೊಸಕೋಟೆ ಸಿಂಧನೂರಿನಿದ ಮಹಾಲಿಂಗಪುರಕ್ಕೆ ತೆರಳುತ್ತಿದ್ದರು. ಈ ವೇಳೆ ಈ ಅಪಘಾತ ಸಂಭವಿಸಿದೆ. … Continue reading ಖ್ಯಾತ ಜನಪದ ಕಲಾವಿದ, ನಟ ಗುರುರಾಜ್ ಹೊಸಕೋಟೆ ಕಾರು ಅಪಘಾತ