ರಾಕಿಂಗ್ ಸ್ಟಾರ್ ಯಶ್ ನಟನೆಯ ‘ರಾಮಾಯಣ’ ಸಿನಿಮಾದ ಗ್ಲಿಂಪ್ಸ್ ಈಗಾಗಲೇ ಬಿಡುಗಡೆ ಆಗಿದ್ದು, ಮೂರು ನಿಮಿಷದ ಗ್ಲಿಂಪ್ಸ್ ನೋಡಿದವರು, ಇದು ಪಕ್ಕಾ ಪ್ಯಾನ್ ವರ್ಲ್ಡ್ ಸಿನಿಮಾ ಆಗಲಿದೆ ಎಂದು ಕೊಂಡಾಡಿದ್ದಾರೆ. ಹೌದು ನಿನ್ನೆ ‘ರಾಮಾಯಣ’ ಗ್ಲಿಂಪ್ಸ್ ಬಿಡುಗಡೆ ಆಗಿದ್ದು ರಾಷ್ಟ್ರದಾದ್ಯಂತ ಹಲವು ನಗರಗಳಲ್ಲಿ ಐಮ್ಯಾಕ್ಸ್ ಸ್ಕ್ರೀನ್ನಲ್ಲಿ ಗ್ಲಿಂಪ್ಸ್ ನೋಡಿ ಪ್ರೇಕ್ಷಕರು ಸಂಭ್ರಮಿಸಿದ್ದಾರೆ.
ಈಗಾಗಲೆ ಯೂಟ್ಯೂಬ್ನಲ್ಲಿ ಕೋಟ್ಯಂತರ ಮಂದಿ ವೀಕ್ಷಣೆ ಮಾಡಿದ್ದು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ರಾಮಾಯಣ ಗ್ಲಿಂಪ್ಸ್ನ ಪೋಸ್ಟರ್ಗಳಲ್ಲಿ, ಸಿನಿಮಾನಲ್ಲಿ ನಟಿಸಿರುವ ಪ್ರಮುಖ ನಟ-ನಟಿಯರು ಅದರಲ್ಲಿ ರಣ್ಬೀರ್ ಕಪೂರ್, ಸಾಯಿ ಪಲ್ಲವಿ, ಸನ್ನಿ ಡಿಯೋಲ್, ರವಿ ದುಬೆ, ನಿರ್ದೇಶಕ ನಿತೀಶ್ ತಿವಾರಿ ಅವರುಗಳು ತಮ್ಮ ಸಹಿಯನ್ನು ಮಾಡಿದ್ದಾರೆ.
ಅದರಂತೆ ನಟ ಯಶ್ ಸಹ ತಮ್ಮ ಸಹಿ ಕನ್ನಡದಲ್ಲಿ ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ . ಇನ್ನು‘ರಾಮಾಯಣ’ ಸಿನಿಮಾನಲ್ಲಿ ಯಶ್, ರಾವಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ ಸಿನಿಮಾಕ್ಕೆ ಬಂಡವಾಳವನ್ನೂ ಸಹ ಹೂಡಿದ್ದಾರೆ. ಇದರ ಜೊತೆಗೆ ‘ಟಾಕ್ಸಿಕ್’ ಸಿನಿಮಾಕ್ಕೂ ಸಹ ಯಶ್ ಬಂಡವಾಳ ಹೂಡಿದ್ದು, ಕವಿಎನ್ ಪ್ರೊಡಕ್ಷನ್ ಜೊತೆಗೆ ಸಹ ನಿರ್ಮಾಣ ಮಾಡಿದ್ದಾರೆ.

