ಬೆಳಗಾವಿ : ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ರೈತದಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘಗಳ ಮಹಾಸಂಘ ಒಕ್ಕೂಟ ಹಾಗೂ ಕಾರ್ಖಾನೆಯ ಸದಸ್ಯರು ಹಾಗೂ ರೈತರು ಸೇರಿ ಇಂದು ಅನಿರ್ದಿಷ್ಟ ಅವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭವಾಯಿತು.
2017/ 18 ನೇ ಸಾಲಿನ 394 ಬಾಕಿ ಬಿಲ್ ಪ್ರಸಕ್ತ ವರ್ಷದ ಬಾಕಿ ಬಿಲ್ ಹಾಗೂ ಕಾರ್ಖಾನೆಯಲ್ಲಿ ನಡೆದಂತಹ ಭ್ರಷ್ಟಾಚಾರದ ತನಿಖೆಗಾಗಿ ಆಗ್ರಹಿಸಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಈ ಸಂದರ್ಭದಲ್ಲಿ ಪರಮಪೂಜ್ಯ ಹಜರತ್ ತನ್ವೀರ್ ಮುಜಾವರ್ ಇವರ ಸಾನಿಧ್ಯದಲ್ಲಿ ಹೋರಾಟ ಇಂದು ವಿದ್ಯುಕ್ತವಾಗಿ ಆರಂಭವಾಯಿತು.
ಈ ಸಂದರ್ಭದಲ್ಲಿ ಒಕ್ಕೂಟದ ರಾಜ್ಯಾಧ್ಯಕ್ಷರಾದ ಶ್ರೀ ಬೀರಪ್ಪ ದೇಶನೂರ್ ಬಸವರಾಜ್ ಮುಕಾಸಿ ಬಸನಗೌಡ ಪಾಟೀಲ್ ನಿಂಗಪ್ಪ ಹಣಜಿ ಈರಣ್ಣ ಅಂಗಡಿ ರುದ್ರಪ್ಪ ಕೊಡ್ಲಿ ಮಹಾಂತೇಶ್ ಗೌರಿ ಮಲ್ಲಪ್ಪ ಭಂಗಿ ಅದೃಷ್ ಬೆಳ್ಳಿಕಟ್ಟಿ ಮುಂತಾದ ರೈತ ಮುಖಂಡರು ಹಾಜರಿದ್ದರು
ವರದಿ : ದಯಾನಂದ. ಎಂ.