ಮಂಡ್ಯ: ಕೌಟುಂಬಿಕ ಕಲಹ ಹಿನ್ನಲೆ ವ್ಯಕ್ತಿಯೊಬ್ಬರು ತಮ್ಮ ಮೂರು ಮಕ್ಕಳು ಮತ್ತು ಪತ್ನಿಗೆ ವಿಷ (Poison) ಹಾಕಿ ಕೊಲೆ (killed) ಮಾಡಿರುವ ಘಟನೆ ಶ್ರೀರಂಗಪಟ್ಟನದಲ್ಲಿ (Srirangapatana) ನಡೆದಿದೆ.
ಪತ್ನಿ ಕೀರ್ತನಾ (23) ಮಕ್ಕಳಾದ ಜಯಸಿಂಹ (4) , ರಿಷಿಕಾ (1) ಮೃತರು. ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಆರೋಪಿ ನರಸಿಂಹ ಮನೆಯಲ್ಲಿನ ಕುಡಿಯುವ ನೀರಿಗೆ ವಿಷಬೇರೆಸಿದ್ದಾನೆ. ಆ ನೀರನ್ನು ಮಕ್ಕಳಿಗೆ ಹಾಗೂ ಪತ್ನಿಗೆ ಕುಡಿಸಿದ್ದಾನೆ. ಇದನ್ನೂ ಓದಿ: ಶಿಲ್ಪಾ ಶೆಟ್ಟಿ ದಂಪತಿಗೆ ಇಡಿ ಶಾಕ್ – 98 ಕೋಟಿ ಮೌಲ್ಯದ ಆಸ್ತಿ ವಶಕ್ಕೆ
ನರಸಿಂಹ ಹಾಗೂ ಕೀರ್ತನಾ ಐದು ವರ್ಷದ ಹಿಂದೆ ಮದುವೆಯಾಗಿದ್ದು, ಈ ದಂಪತಿಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಗು ಇತ್ತು. ಸಂಸಾರ ಚೆನ್ನಾಗಿತ್ತು. ಆದ್ರೆ, ಕಟ್ಟಿಂಗ್ ಶಾಪ್ ಇಟ್ಟುಕೊಂಡಿದ್ದ ನರಸಿಂಹನಿಗೆ ಬೇರೆ ಅಕ್ರಮ ಸಂಬAಧ ಇತ್ತು ಎಂದು ಹೆಂಡತಿ ಆರೋಪಿಸಿದ್ದಾಳೆ. ಇದೇ ವಿಚಾರಕ್ಕೆ ಮನೆಯಲ್ಲಿ ಇಬ್ಬರ ನಡುವೆ ಪದೇ ಪದೇ ಗಲಾಟೆಯಾಗುತ್ತಲೇ ಇತ್ತು.ಬಳಿಕ ಸಿಟ್ಟಿನ ಕೈಗೆ ಬುದ್ಧಿ ಕೊಟ್ಟ ನರಸಿಂಹ, ಕುಡಿಯುವ ನೀರಿಗೆ ಕ್ರಿಮಿನಾಶಕ ಹಾಕಿದ್ದಾನೆ. ಬಳಿಕ ಆ ನೀರನ್ನು ತನ್ನಿಬ್ಬರು ಮಕ್ಕಳು ಮತ್ತು ಪತ್ನಿಗೆ ಕುಡಿಸಿದ್ದಾನೆ. ನಂತರ ತಾನೂ ಸಹ ಅದೇ ನೀರು ಸೇವಿಸಿದ್ದಾನೆ. ನಂತರ ತಾನು ಅದೇ ನೀರು ಕುಡಿದ ನರಸಿಂಹ. ಇದನ್ನೂ ಓದಿ: ಗಂಡನ ಮನೆಯವರಿಂದ ಮಕ್ಕಳಾಗಿಲ್ಲ ಎಂದು ಕಿರುಕುಳ- ಮನನೊಂದು ಮಹಿಳೆ ಆತ್ನಹತ್ಯೆ
ನೀರು ಕುಡಿದ ಕೆಲವೇ ಕ್ಷಣಗಳಲ್ಲಿ ಗಂಡ-ಹೆಂಡತಿ ಹಾಗೂ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಅಸ್ವಸ್ಥಗೊಂಡಿದ್ದಾರೆ. ಬಳಿಕ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಎರೆಡು ಸಾವನ್ನಪ್ಪಿವೆ. ಇನ್ನು ಆಸ್ಪತ್ರೆಗೆ ಹೋದ ಬಳಿಕ ಪತ್ನಿ ಕೀರ್ತನಾ ಸಹ ಮೃತಪಟ್ಟಿದ್ದು, ಸದ್ಯ ನರಸಿಂಹಗೆ ನಾಗಮಂಗಲ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಇದನ್ನೂ ಓದಿ: ಜೈಲಿನಲ್ಲಿ ಹಣ ಬೇಡಿಕೆ ಇಟ್ಟ ಜೈಲರ್ ಸಸ್ಪೆಂಡ್