ತಮಿಳುನಾಡು : ತಮಿಳು ನಟ ಮತ್ತು ತಮಿಳಿಗ ವೆಟ್ರಿ ಕಳಗಂ ರಾಜಕೀಯ ಪಕ್ಷದ ಅಧ್ಯಕ್ಷ ವಿಜಯ್ ವಿರುದ್ದ ಅಖಿಲ ಭಾರತ ಮುಸ್ಲಿಂ ಜಮಾತ್ ಫತ್ವ ಹೊರಡಿಸಿದ್ದು. ವಿಜಯ್ ತಮ್ಮ ಸಿನಿಮಾಗಳಲ್ಲಿ ಮುಸ್ಲಿಂರನ್ನು ಭಯೋತ್ಪಾದಕರ ರೀತಿ ಬಿಂಬಿಸಿದ್ದಾರೆ. ಆದ್ದರಿಂದ ವಿಜಯ್ ಜೊತೆ ಮುಸ್ಲಿಂಮರು ನಿಲ್ಲದಂತೆ ಈ ಫತ್ವಾ ಹೊರಡಿಸಲಾಗಿದೆ.
ತಮಿಳಿಗ ವೆಟ್ರಿ ಕಳಗಂ ಎಂಬ ರಾಜಕೀಯ ಪಕ್ಷ ಸ್ಥಾಪನೆ ಮಾಡಿರುವ ವಿಜಯ್, ತಮಿಳು ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ. ರಾಷ್ಟ್ರೀಯತೆ ಜೊತೆಗೆ ತಮಿಳು ಅಸ್ಮಿತೆಯನ್ನು ತಮ್ಮ ಪಕ್ಷದ ಭಾಗವಾಗಿ ಮಾಡಿಕೊಂಡಿರುವ ವಿಜಯ್. ಮುಸ್ಲಿಂರ ಜೊತೆಗೂ ತಮ್ಮನ್ನು ತಾವೂ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ರಂಜಾನ್ ಸಮಯದಲ್ಲಿ ಇಫ್ತಾರ್ ಕೂಟವನ್ನು ವಿಜಯ್ ಆಯೋಜಿಸಿದ್ದರು.
ಆದರೆ ಈ ಇಫ್ತಾರ್ ಕೂಟಕ್ಕೆ ವಿಜಯ್ ಜೂಜುಕೋರರು ಮತ್ತು ಮದ್ಯ ಗ್ರಾಹಕರನ್ನು ಆಹ್ವಾನಿಸಿದ್ದು. ಇದು ಮುಸ್ಲಿಂರಿಗೆ ಅವಮಾನಕರ ಘಟನೆ ಎಂದು ವಿಜಯ್ ವಿರುದ್ದ ಫತ್ವಾ ಹೊರಡಿಸಲಾಗಿದೆ. ಈ ಕುರಿತು ಆಲ್ ಇಂಡಿಯಾ ಮುಸ್ಲಿಂ ಜಮಾತ್ ಅಧ್ಯಕ್ಷ ಶಹಬುದ್ದೀನ್ ರಿಜ್ವಿ ಹೇಳಿಕೆ ನೀಡಿದ್ದು. ‘ವಿಜಯ್ ಅವರು ತಮ್ಮ ಚಲನಚಿತ್ರಗಳಲ್ಲಿ ಮುಸ್ಲಿಮರನ್ನು ಭಯೋತ್ಪಾದನೆ ಹರಡುವವರಂತೆ ನಕಾರಾತ್ಮಕ ರೀತಿಯಲ್ಲಿ ಬಿಂಬಿಸಿದ್ದರು’ ಎಂದು ಆರೋಪಿಸಿದ್ದಾರೆ.
ವಿಜಯ್ ತಮ್ಮ ‘ಕಥಿ’ ಮತ್ತು ‘ಬೀಸ್ಟ್’ ಚಿತ್ರಗಳಲ್ಲಿ ಮುಸ್ಲಿಮರನ್ನು ನಕಾರಾತ್ಮಕವಾಗಿ ತೋರಿಸಿದ್ದಾರೆ. ಆದ್ದರಿಂದ, ನಟನಿಗೆ ಮುಸ್ಲಿಮರಿಂದ ಬೆದರಿಕೆ ಬರಬಹುದು ಎಂದು ವಿಜಯ್ ಮತ್ತು ಟಿವಿಕೆ, ಗೃಹ ಸಚಿವಾಲಯದಿಂದ ಕೇಂದ್ರ ಸರ್ಕಾರಕ್ಕೆ Y+ ಭದ್ರತೆ ರಕ್ಷಣೆ ಕೋರಿದ್ದಾರೆ ಎಂದು ವಿಸಿಕೆ ವಕ್ತಾರ ವನ್ನಿಯರಸು ಹೇಳಿದ್ದರು.