ಹುಬ್ಬಳ್ಳಿ: ನೇಹಾ ಹಿರೇಮಠ (Neha hiremath) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೋಟಕ ವಿಷಯವೊಂದು ಸಿಐಡಿ (CID) ತನಿಖೆಯಲ್ಲಿ ಬಯಲಾಗಿದೆ.
ಸದ್ಯ ಸಿಐಡಿ ಅಧಿಕಾರಿಗಳು ತನಿಖೆ ಶುರುಮಾಡಿದ್ದು, ಆರೋಪಿ ಫಯಾಜ್‌ನನ್ನು 6 ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ. ಕೊಲೆ ಮಾಡುವ ಮುನ್ನ ಫಯಾಜ್ ನೇಹಾ ಹಿರೇಮಠ ಜೊತೆ ಕೆಲವು ದಿನಗಳು ಓಡಾಡಿದ್ದಾನೆ. ಈ ಮೂಲಕ ನೇಹಾ ಚಲನವಲವನ್ನು ಗಮನಿಸಿದ್ದಾನೆ. ನೇಹಾ ಬಗ್ಗೆ ಪ್ರತಿಯೊಂದು ವಿಚಾರಗಲನ್ನು ಗಮನಿಸುತ್ತಿದ್ದ. ಇನ್ನು ಕೊಲೆ ಮಾಡಿವ 5 ದಿನಗಳ ಮುನ್ನವೇ ಚಾಕುವನ್ನು ಖರೀದಿ ಮಾಡಿದ್ದ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ರಾಜಸ್ಥಾನದ ಜೈಸಲ್ಮೇರ್ ಬಳಿ ಬಳಿ ಐಎಎಫ್ ಕಣ್ಗಾವಲು ವಿಮಾನ ಪತನ
ಏಪ್ರಿಲ್ 18 ರಂದು ನೇಹಳ ಪ್ರಾಕ್ಟಿಕಲ್ ಎಕ್ಸಾಂ ಇತ್ತು. ಈ ವಿಚಾರವನ್ನು ತಿಳಿದ ಫಯಾಜ್ ಧಾರವಾಡದಿಂದ ಬೈಕ್‌ನಲ್ಲಿ ಕಾಲೆಜಿಗೆ ಬಂದಿದ್ದ. ಕೊಲೆ ಮಾಡುವ ಉದ್ದೇಶದಿಂದಲೆ ಬೈಕ್ ನಿಲ್ಲಿಸಿ ಪರೀಕ್ಷೆಗೆ ಹೋಗಿದ್ದ. ಇದನ್ನೂ ಓದಿ: ಬರದಿಂದ ಏರಿಕೆಯಾದ ತರಕಾರಿ – ಸೆಂಚುರಿ, ಡಂಬಲ್ ಸೆಂಚುರಿ ದಾಟಿದ ಬೆಳೆ

ನಂತರ ಪರೀಕ್ಷೆ ಮುಗಿದ ನಂತರ ನೇಹಾಳನ್ನು ಫಯಜ್ ಮಾತನಾಡಿಸಲು ಪ್ರಯತ್ನಿಸಿದ್ದಾನೆ. ಆದರೆ ನೇಹಾ ಪ್ರತಿಕ್ರಿಯೆ ನೀಡಿದಿದ್ದಕ್ಕೆ ಆರೋಪಿ ಫಯಾಜ್ ಮತ್ತಷ್ಟು ಕೋಪಗೊಂಡು ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಈ ವೇಳೆ ಪೊಲೀಸರು ಮತ್ತು ಸಾರ್ವಜನಿಕರಿಂದ ಫಯಾಜ್‌ನನ್ನು ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ಬಿಹಾರದಲ್ಲಿ ಗುಂಡಿಕ್ಕಿ ಜೆಡಿಯು ನಾಯಕನ ಹತ್ಯೆ
ಇನ್ನು ಪ್ರಕರಣದಲ್ಲಿ ಒಬ್ಬನೇ ಆರೋಪಿಯನ್ನ ಅರೆಸ್ಟ್ ಮಾಡಿದ್ದಾರೆ. ಆದರೆ ಒಬ್ಬನೇ ಕೊಲೆ ಮಾಡಲು ಸಾಧ್ಯ ಇಲ್ಲ. ಕಾಲೇಜಿನ ಒಳಗಡೆ ಇದ್ದವರು ಆತನಿಗೆ ಮಾಹಿತಿ ನೀಡಿದ್ದಾರೆ ಅಂತಾ ನೇಹಾ ತಂದೆ ಆರೋಪಿಸಿದ್ದಾರೆ. ಇದನ್ನೂ ಓದಿ: ನಟಿ ಅಮೂಲ್ಯ ಮಾವ, ಬಿಜೆಪಿ ಮುಖಂಡ ಮನೆ ಮೇಲೆ ಚುನಾವಣಾಧಿಕಾರಿಗಳ ದಾಳಿ

