ಬೆಳಗಾವಿ: ಹುಬ್ಬಳ್ಳಿಯ (Hubbli) ವಿದ್ಯಾರ್ಥಿನಿ ನೇಹಾ (Neha) ಹಿರೇಮಠ ಕೊಲೆ ಪ್ರಕರಣ ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಇದೀಗ ನೇಹಾ ಕೊಲೆ ಮಾಡಿದ್ದ ಆರೋಪಿ ಫಯಾಜ್ ಕುರಿತು ಸ್ಫೋಟಕ ವಿಚಾರವೊಂದು ಬೆಳಕಿಗೆ ಬಂದಿದೆ.
ಮುರು ತಿಂಗಳ ಹಿಂದೆ ಆಸ್ತಿ ವಿಚಾರವಾಗಿ ಆರೋಪಿ ಫಯಾಜ್ ಪೋಷಕರ (Parents) ಮಧ್ಯೆ ಗಲಾಟೆ ನಡೆದಿತ್ತು. ಈ ವೇಳೆ ಆರೋಪಿ ಫಯಾಜ್ ತಾಯಿ ಪರವಾಗಿ ನಿಂತು, ತಂದೆಯೊಂದಿಗೆ ಜಗಳವಾಡಿದ್ದನು. ಇದನ್ನೂ ಓದಿ: ನೇಹಾ ಕೊಲೆಗೆ ಡಿಂಪಲ್ ಕ್ವೀನ್ ಗರಂ: ಕೊಲೆಗಾರನನ್ನ ಜನಸಾಮಾನ್ಯರಿಗೆ ಒಪ್ಪಿಸಿ ಎಂದ ರಚಿತಾ
ಜಗಳ ತಾರಕಕ್ಕೆ ಏರಿದ್ದು, ಆರೋಪಿ ಫಯಾಜ್ ತಂದೆ ಬಾಬುಸಾಹೇಬ್ ಅವರ ಮೇಲೆಯೇ ಹಲ್ಲೆ ಮಆಡಿದ್ದನು. ಆಗ ಅವರು ಮಗನಿಣದ ರಕ್ಷಣೆ ಕೊಡಿ ಎಂದು ಠಾಣೆ ಮೆಟ್ಟಿಲೇರಿದ್ದರು. ಇದನ್ನೂ ಓದಿ: ನೇಹಾ ಹತ್ಯೆ ಪ್ರಕರಣ; ಸತ್ಯ ಮುಚ್ಚಿಡಲು ಸಾಧ್ಯವಿಲ್ಲ : ಪರಮೇಶ್ವರ್
ಈ ವೇಳೆ ಸವದತ್ತಿ ಪೊಲೀಸ್ ಠಾಣೆ ಆನಂದ ಆರೋಪಿ ಕುಟುಂಬವನ್ನು ಪೊಲೀಸ್ ಠಾಣೆಗೆ ಕರೆಸಿ ಬುದ್ದಿವಾದ ಹೇಳಿದ್ದರು. ಆರೋಪಿ ಫಯಾಜ್ ಬುದ್ದಿವಾದ ಹೇಳಿ, ಮುಚ್ಚಳಿಕೆ ಬರೆಯಿಸಿಕೊಂಡು ಕಳಸಿದ್ದರು. ಮತ್ತೆನಾದರೂ ತಂದೆ ಮೇಲೆ ಹಲ್ಲೆ ಮಾಡಿದರೆ ಜೈಲಿಗೆ ಕಳುಹಿಸುವುದಾಗಿ ಎಚ್ಚರಿಕೆ ನೀಡಿದ್ದರು. ಇದನ್ನೂ ಓದಿ: ನನ್ನ ಮಗನ ತಪ್ಪಿಗೆ ಕರ್ನಾಟಕದ ಜನತೆ, ನೇಹಾ ತಂದೆ-ತಾಯಿ ಬಳಿ ಕ್ಷಮೆಯಾಚಿಸುತ್ತೇನೆ: ಕೊಲೆಗಾರ ತಾಯಿ ಕಣ್ಣೀರು
ಇನ್ನು ಆರೋಪಿ ಫಯಾಜ್ ತಂದೆ ಬಾಬಾಸಾಬ್ ಕಾಣೆಯಾಗಿದ್ದಾರೆ. ಬಾಬಾಸಾಬ್ ನಿನ್ನೆ (ಏ.19) ಸಂಜೆಯಿಂದ ಕಾಣೆಯಾಗಿದ್ದು, ಬೆಳಗಾವಿ ಮತ್ತು ಹುಬ್ಬಳ್ಳಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಬಾಬಾಸಾಬ್ ಪೋನ್ ಸ್ವಿಚ್ ಆಫ್ ಮಾಡಿಕೊಂಡು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಇದನ್ನೂ ಓದಿ: ನೇಹಾ ಹತ್ಯೆ ಕೇಸ್ – ಗೃಹಸಚಿವರ ಮನೆ ಮುತ್ತಿಗೆಗೆ ಎಬಿವಿಪಿಯಿಂದ ಯತ್ನ

