ಶಿವಮೊಗ್ಗ: ಝಿಕಾ ವೈರಸ್ (Zika Virus) ಸೋಂಕಿನಿಂದ 74 ವರ್ಷದ ವೃದ್ಧರೊಬ್ಬರು ಮೃತಪಟ್ಟ ಘಟನೆ ಶಿವಮೊಗ್ಗದ (Shivamogga) ಗಾಂಧಿನಗರದಲ್ಲಿ ನಡೆದಿದೆ.
ಮೊದಲು ತೀವ್ರ ಜ್ವರದಿಂದ ಬಳುಲುತ್ತಿದ್ದ ಅವರನ್ನ ಜೂ. 19 ರಂದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೂ.21 ರಂದು ನಡೆಸಿದ್ದ ರಕ್ತ ಪರೀಕ್ಷೆಯಲ್ಲಿ ಝಿಕಾ ವೈರಸ್ ಪತ್ತೆ ಆಗಿತ್ತು. ಬಳಿಕ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಇದನ್ನೂ ಓದಿ: ಹತ್ರಾಸ್ ಕಾಲ್ತುಳಿತ ಪ್ರಕರಣ: ಪ್ರಮುಖ ಆರೋಪಿ ದೆಹಲಿ ಪೊಲೀಸರಿಗೆ ಶರಣು
ಗುರುವಾರ ಅವರನ್ನ ಕುಟುಂಬಸ್ಥೃು ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಹೋಗಿದ್ದರು. ಆದರೆ ತೀವ್ರ ಆರೋಗ್ಯ ಸಮಸ್ಯೆಯಿಂದ ಶುಕ್ರವಾರ ರಾತ್ರಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ:ಸ್ಪೈಸ್ ಜೆಟ್ ಏರ್‌ಲೈನ್ಸ್ ಎಡವಟ್ಟಿನಿಂದ 12 ಗಂಟೆ ವಿಮಾನದಲ್ಲೇ ಪ್ರಯಾಣಿಕರು ಲಾಕ್
ಜ್ವರ ಮಾತ್ರವಲ್ಲದೇ ಬೇರೆ ಕಾಯಿಲೆಯಿಂದ ಅವರು ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಇದನ್ನೂ ಓದಿ:ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಯ್ತು ರೌಡಿಶೀಟರ್ ಗಳ ಫ್ಯಾನ್ ಪೇಜ್ ಗಳು