ಬೆಂಗಳೂರು : ರಾಜ್ಯದಲ್ಲಿ ಆಹಾರ ಸುರಕ್ಷತೆ ದೃಷ್ಟಿಯಿಂದ ಅನೇಕ ಆಹಾರ ಪದಾರ್ಥಗಳು ನಿಷೇಧದ ಬೆನ್ನಲ್ಲೇ ಬೆಂಗಳೂರಿನಲ್ಲಿ ಆರಂಭವಾಗಲಿದೆ ಫುಡ್ ಟೆಸ್ಟಿಂಗ್ ಲ್ಯಾಬ್ ಆರಂಭವಾಗಲಿದೆ.
ಏನೂ ತಿನ್ನಬೇಕು ಏನೂ ತಿನ್ನಬಾರದು ಎಂದು ಶುರುವಾಗಿದ್ದ ಗೊಂದಲಕ್ಕೆ ತೆರೆ ಎಳೆಯಲು ಆರೋಗ್ಯ ಇಲಾಖೆ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಬೆಂಗಳೂರಿನಲ್ಲಿ ಫುಡ್ ಟೆಸ್ಟಿಂಗ್ ಲ್ಯಾಬ್ ಆರಂಭಿಸಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದ್ದು ಜೊತೆಗೆ ಬೆಂಗಳೂರಿನ ಜನರಿಗೆ ಆರೋಗ್ಯ ಇಲಾಖೆಯಿಂದಲೇ ಫುಡ್ ಟೆಸ್ಟಿಂಗ್ ಕಿಟ್ ನೀಡಲು ಚಿಂತನೆ ನಡೆಸಿದೆ.
ಹೋಟೆಲ್ ಹಾಗೂ ಆಹಾರ ಪದಾರ್ಥಗಳು ಹೆಚ್ಚಾಗಿರುವ ಪ್ರದೇಶದಲ್ಲಿ ಲ್ಯಾಬ್ ತೆರೆಯಲು ನಿರ್ಧಾರ ಮಾಡಲಾಗಿದ್ದು ಈ ಬಗ್ಗೆ ಈಗಾಗಲೇ ಹೋಟೆಲ್ ಮಾಲೀಕರ ಬಳಿ ಮಾತುಕತೆ ನಡೆಸಿರು ಇಲಾಖೆ ಸೇವಿಸೋ ಆಹಾರದ ಮೇಲೆ ಅನುಮಾನವಿದ್ದರೆ ಗ್ರಾಹಕರಿಗೆ ಪರೀಶಿಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ಲ್ಯಾಬ್ ಗಳು ಆಹಾರದ ಗುಣಮಟ್ಟ ಹಾಗೂ ಸುರಕ್ಷತೆ ಬಗ್ಗೆ ತಕ್ಷಣ ರಿಪೋರ್ಟ್ ನೀಡಲಿವೆ.