ನವದೆಹಲಿ: ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆ ಮಾಲ್ಡೀವ್ಸ್ (Maldives) ವಿದೇಶಾಂಗ ಸಚಿವ ಮೂಸಾ ಜಮೀರ್(Moosa Zamer) ಭಾರತಕ್ಕೆ ಅಧಿಕೃತ ಭೇಟಿ ನೀಡಿದ್ದು, ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಚರ್ಚಿಸಿದ್ದಾರೆ.
ಭಾರತಕ್ಕೆ ಅಧಿಕೃತ ಭೇಟಿ ನೀಡಿದ ಮಾಲ್ಡೀವ್ಸ್ನ ಸಚಿವ ಮೂಸಾ ಜಮೀರ್ ಅವರಿಗೆ ಆತ್ಮೀಯ ಸ್ವಾಗತ. ದ್ವಿಪಕ್ಷೀಯ ಮತ್ತು ಪ್ರಾದೇಶಿಕ ವಿಷಯಗಳ ಕುರಿತು ಚರ್ಚೆ ನಡೆಸುವುದು ಮತ್ತು ಉಭಯ ದೇಶಗಳ ಉತ್ತಮ ಬಾಂಧವ್ಯ ಕಾಪಾಡಲು ಇದು ಸೌಹಾರ್ಧ ಭೇಟಿಯಾಗಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಎಕ್ಸ್ನಲ್ಲಿ ಪೋಸ್ಟ್ ಹಾಕಿದೆ. ಇದನ್ನೂ ಓದಿ: ದೇವೇಗೌಡ, ಕುಮಾರಸ್ವಾಮಿ ನೇತೃತ್ವದಲ್ಲಿ ಇಂದು ಜೆಡಿಎಸ್ ಕೋರ್ ಕಮಿಟಿ ಸಭೆ
ಭಾರತಕ್ಕೆ ನನ್ನ ಮೊದಲ ದ್ವಿಪಕ್ಷೀಯ ಅಧಿಕೃತ ಭೇಟಿಯ ಸಂದರ್ಭದಲ್ಲಿ ನವದೆಹಲಿಗೆ ಆಗಮಿಸಿದ್ದೇನೆ. ಉತ್ಪಾದಕ ಚರ್ಚೆಗಳು, ಸಂಬಂಧಗಳನ್ನು ಬಲಪಡಿಸುವುದು ಮತ್ತು ಭಾರತದ ರೋಮಾಂಚಕ ಸಂಸ್ಕೃತಿಯನ್ನು ಅನುಭವಿಸಲು ಎದುರು ನೋಡುತ್ತಿದ್ದೇನೆ ಎಂದು ಮಾಲ್ಡೀವ್ಸ್ ವಿದೇಶಾಂಗ ಸಚಿವ ಮೂಸಾ ಜಮೀರ್ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಲೇಡಿಸ್ ಟಾಯ್ಲೆಟ್ನಲ್ಲಿ ಮೊಬೈಲ್ಯಿಟ್ಟು ಚಿತ್ರೀಕರಣಕ್ಕೆ ಯತ್ನ-ಪೊಲೀಸರಿಂದ ಅಪ್ರಾಪ್ತನ ಬಂಧನ
ಮಾಲ್ಡೀವಿಯನ್ ಸಚಿವರು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಪರಸ್ಪರ ಹಿತಾಸಕ್ತಿಯ ದ್ವಿಪಕ್ಷೀಯ ಮತ್ತು ಪ್ರಾದೇಶಿಕ ಸಮಸ್ಯೆಗಳನ್ನು ಚರ್ಚಿಸಲು ಇಂದು ಸಭೆ ನಡೆಸಲಿದ್ದಾರೆ ಎಂದು ತಿಳಿಸಿದೆ. ಇದನ್ನೂ ಓದಿ: ಡಿಕೆ ಶಿವಕುಮಾರ್ ಜತೆ ಪೋನ್ನಲ್ಲಿ ಮಾತಾಡಿದ್ದು ನಿಜ: ಶಿವರಾಮೇಗೌಡ
ಮಾಲ್ಡೀವ್ಸ್ನ ವಿದೇಶಾಂಗ ವ್ಯವಹಾರಗಳ ಸಚಿವರಾದ ಮೂಸಾ ಜಮೀರ್ ಅವರು ಗುರುವಾರ ಅಧಿಕೃತ ಭೇಟಿಗಾಗಿ ಭಾರತಕ್ಕೆ ಬರಲಿದ್ದಾರೆ ಎಂದು ಎಂಇಎ ತಿಳಿಸಿತ್ತು. ಇದನ್ನೂ ಓದಿ: ಕಿಡ್ನಾಪ್ ಪ್ರಕರಣ: ರೇವಣ್ಣ ಜೈಲುಪಾಲು