ಗುರುರಾಯರ ಸನ್ನಿಧಾನ ಮಂತ್ರಾಲಯದಲ್ಲಿ ಆನ್‌ಲೈನ್ ಬುಕ್ಕಿಂಗ್ ಹೆಸರಲ್ಲಿ ಹಾಸನ ಜಿಲ್ಲೆಯ ಅರಸೀಕೆರೆ ಮೂಲದ ಅಕ್ಷಿತಾ ಎಂಬುವರಿಗೆ ಸಾವಿರಾರು ರೂ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಂತ್ರಾಲಯ ಮಠದ ವಿಜಯೇಂದ್ರ ವಸತಿ ಗೃಹದ ಹೆಸರಿನಲ್ಲಿ ಆನ್‌ಲೈನ್ ಬುಕಿಂಗ್ ಮೂಲಕ ಮುಂಗಡವಾಗಿ ಎರಡು ಸಾವಿರ ರೂ ಪಡೆದು ವಂಚಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದ್ದು ಈ ಬಗ್ಗೆ ಎಚ್ಚರ ವಹಿಸುವಂತೆ ಮಂತ್ರಾಲಯ ಮಠದಿಂದ ಭಕ್ತರಿಗೆ ಸಲಹೆ ನೀಡಲಾಗಿದೆ.
ಹೌದು ಮಂತ್ರಾಲಯ ಆಡಳಿತ ಮಂಡಳಿ ಶ್ರೀ ರಾಘವೇಂದ್ರ ಸ್ವಾಮಿ ಮಠ, ಮಂತ್ರಾಲಯಕ್ಕೆ ಕೊಠಡಿಗಳು ಅಥವಾ ಸೇವೆಗಳನ್ನು ಕಾಯ್ದಿರಿಸಲು ಮತ್ತು ದೇಣಿಗೆ ಸಂಗ್ರಹಿಸಲು ಯಾವುದೇ ವ್ಯಕ್ತಿ, ಏಜೆನ್ಸಿಗೆ ಅಧಿಕಾರ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಶ್ರೀ ಮಠದ ಪ್ರತಿ ವಸತಿ ಗೃಹಗಳ ಬುಕ್ಕಿಂಗ್ಗೆ www.srsmatha.org. ಮೂಲಕ ಮಾತ್ರ ಬುಕ್ಕಿಂಗ್ ಮಾಡಿಕೊಳ್ಳುವಂತೆ ಭಕ್ತರಿಗೆ ಸಲಹೆ ನೀಡಿದೆ.ಭಕ್ತರಿಗೆ ವಂಚನೆ ಬೆಳಕಿಗೆ ಬೆನ್ನಲ್ಲೇ ಶ್ರೀ ಮಠದಿಂದ ಮಂತ್ರಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

