ಬೆಂಗಳೂರು, ಫೆ. 2: ನಿನ್ನೆ ನಡೆದ ಕೇಂದ್ರ ಬಜೆಟ್‌ಗೆ ಮುನ್ನವೇ ಭಾರೀ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಇಂದೂ ಸಹ ಕುಸಿತ ಮುಂದುವರಿದಿದೆ. ಫೆಬ್ರವರಿ 2ರಂದು ಚಿನ್ನದ ದರದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದ್ದು, ಗ್ರಾಹಕರಿಗೆ ಸ್ವಲ್ಪ ನಿಟ್ಟುಸಿರು ಸಿಕ್ಕಿದೆ.
22 ಕ್ಯಾರಟ್ ಚಿನ್ನದ ಒಂದು ಗ್ರಾಂ ಬೆಲೆಯಲ್ಲಿ ₹830 ಇಳಿಕೆಯಾಗಿದ್ದು, ಇಂದು ₹13,890ಕ್ಕೆ ವಹಿವಾಟು ನಡೆಯುತ್ತಿದೆ. ಅದೇ ರೀತಿ 24 ಕ್ಯಾರಟ್ ಚಿನ್ನದ ಒಂದು ಗ್ರಾಂ ಬೆಲೆಯಲ್ಲಿ ₹905 ಇಳಿಕೆಯಾಗಿದ್ದು, ₹15,153ಕ್ಕೆ ತಲುಪಿದೆ.
22 ಕ್ಯಾರಟ್ ಚಿನ್ನದ ದರದ ವಿವರಗಳಂತೆ,
8 ಗ್ರಾಂಗೆ ₹1,11,120,
10 ಗ್ರಾಂಗೆ ₹1,38,900,
100 ಗ್ರಾಂಗೆ ₹13,89,000 ಪಾವತಿಸಬೇಕಾಗಿದೆ.
24 ಕ್ಯಾರಟ್ ಚಿನ್ನದಲ್ಲಿ,
8 ಗ್ರಾಂಗೆ ₹1,21,224,
10 ಗ್ರಾಂಗೆ ₹1,51,530,
100 ಗ್ರಾಂಗೆ ₹15,15,300 ಪಾವತಿ ಮಾಡಬೇಕಾಗಿದೆ.
ವಿವಿಧ ನಗರಗಳಲ್ಲಿ ಚಿನ್ನದ ದರ (ಪ್ರತಿ ಗ್ರಾಂ):
ಚೆನ್ನೈ – 22 ಕ್ಯಾರಟ್ ₹13,890 | 24 ಕ್ಯಾರಟ್ ₹15,153
ಮುಂಬೈ – 22 ಕ್ಯಾರಟ್ ₹13,890 | 24 ಕ್ಯಾರಟ್ ₹15,153
ದೆಹಲಿ – 22 ಕ್ಯಾರಟ್ ₹13,890 | 24 ಕ್ಯಾರಟ್ ₹15,153
ಕೋಲ್ಕತ್ತಾ – 22 ಕ್ಯಾರಟ್ ₹13,890 | 24 ಕ್ಯಾರಟ್ ₹15,153
ಇನ್ನು ಬೆಳ್ಳಿ ದರದಲ್ಲಿಯೂ ಇಳಿಕೆ ಕಂಡುಬಂದಿದೆ. ಒಂದು ಗ್ರಾಂ ಬೆಳ್ಳಿಗೆ ₹300 ಪಾವತಿಸಬೇಕಿದ್ದು, 10 ಗ್ರಾಂಗೆ ₹3,000 ಹಾಗೂ ಒಂದು ಕಿಲೋ ಬೆಳ್ಳಿಗೆ ₹3,00,000 ದರ ನಿಗದಿಯಾಗಿದೆ.
ಚಿನ್ನ–ಬೆಳ್ಳಿ ದರಗಳಲ್ಲಿನ ಈ ಇಳಿಕೆಯಿಂದ ಆಭರಣ ಖರೀದಿಗೆ ಮುಂದಾಗುವ ಗ್ರಾಹಕರಲ್ಲಿ ಸಂತಸ ಮೂಡಿದೆ.

