ತುಮಕೂರು : ಊಟ ಕೊಟ್ಟಿಲ್ಲ ಅಂತ ಅಡುಗೆ ಭಟ್ಟನಿಗೆ ಚಾಕು ಇರಿದು ಹೋಟೆಲ್ ಮಾಲೀಕನಿಗೆ ಮನಬಂದಂತೆ ಥಳಿಸಿ ಪುಂಡಾಟ ನಡೆಸಿದ ಘಟನೆ ರಾಜ್ಯ ಹೆದ್ದಾರಿ 33 ರ ಭಕ್ತರಹಳ್ಳಿ ಬಳಿಯಿರುವ ಹೈವೆ ಟೂರಿಸ್ಟ್ ಡಾಬಾದಲ್ಲಿ ನಡೆದಿದೆ.
ಕುಡುಕರು ಹಲ್ಲೆ ನಡೆಸುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನಲ್ಲಿರುವ ಭಕ್ತರಹಳ್ಳಿ ಬಳಿ ಬುಧವಾರ ತಡರಾತ್ರಿ 12.30 ರ ಸುಮಾರಿಗೆ 8 ಜನ ಪುಂಡರ ಗ್ಯಾಂಗ್ ಕಂಠ ಪೂರ್ತಿ ಕುಡಿದು ಹೈವೆ ಟೂರಿಸ್ಟ್ ಡಾಬಾಗೆ ತೆರಳಿದ್ರು.
ಊಟ ಸರಿಯಾಗಿ ಕೊಟ್ಟಿಲ್ಲ ಅಂತ ಅಡುಗೆ ಭಟ್ಟ ಶರತ್ ಹಾಗೂ ಡಾಬಾ ಮಾಲೀಕನ ಜೊತೆ ಕಿರಿಕ್ ಮಾಡಿ ಅಡುಗೆ ಭಟ್ಟ ಶರತ್ ಗೆ ಚಾಕುವಿನಿಂದ ಇರಿದು ಡಾಬಾ ಮಾಲೀಕನಿಗೆ ಮನಬಂದಂತೆ ಥಳಿಸಿ ಕುಡುಕರ ಗ್ಯಾಂಗ್ ಪುಂಡಾಟ ಮಾಡಿದೆ.
ಹಲ್ಲೆ ನಡೆಸುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಘಟನೆ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಹಲ್ಲೆ ನಡೆಸಿ ಪುಂಡಾಟ ಮೇರೆದಿದ್ದ ನಾಲ್ವರು ಕುಡುಕರು ಅರೆಸ್ಟ್ ಆಗಿದ್ದು
ಅರುಣ್ ಕುಮಾರ್, ಹನುಮಂತು, ದೇವರಾಜು, ಅಂಜನ್, ಹನುಮಂತಯ್ಯ ಬಂಧಿತ ಆರೋಪಿಗಳು. ಇನ್ನುಳಿದ ಆರೋಪಿಗಳಿಗೆ ಪೊಲೀಸರು ಹುಡುಕಾಟ ಮುಂದುವರೆಸಿದ್ದು ಗಾಯಾಳು ಅಡುಗೆ ಭಟ್ಟ ಶರತ್ ಗೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.