ಲಕ್ನೋ: ವಾರಣಾಸಿ (Varanasi) ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ದಶಾಶ್ವಮೇಧ ಘಾಟ್‌ನಲ್ಲಿ (Dasaswamedh Ghat) ಗಂಗಾ ಆರತಿಯನ್ನ ಪ್ರಧಾನಿ ನರೇಂದ್ರ ಮೋದಿ (Narendra Modi) ನೆರವೇರಿಸಿದರು.

ಮೋದಿಯವರು 2024 ರ ಲೋಕಸಭಾ ಚುನಾವಣೆಗೆ 11:40 ಕ್ಕೆ ನಾಮಪತ್ರ ಸಲ್ಲಿಸಲಿದ್ದು, ಅದಕ್ಕು ಮುನ್ನ ಅವರು ಗಾಂಗಾ ನದಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಹರ್ ಹರ್ ಮಹಾದೇವ್ ಘೋಷಣೆಯ ಹೇಳುತ್ತ ಗಂಗಾ ಪೂಜೆಯನ್ನು ಪೂರ್ಣಗೊಳಿಸಿದರು. ಗಾಂಗಾ ಮಾತೆಗೆ ವೇದ ಮಂತ್ರಗಳ ಪಠಣದ ಜೊತೆಗೆ ದಶಾಶ್ವಮೇಧ್ ಘಾಟ್‌ನಲ್ಲಿ ಮೋದಿ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಹೆಣ್ಣುಮಗು ಜನಿಸಿದ್ದಕೆ ಪತ್ನಿ ಬಿಟ್ಟು ಪತಿ ಪರಾರಿ: ಅನೇಕ ಹೆಣ್ಮಕ್ಕಳಿಗೆ ಮೋಸ
ಇಂದು ಗಂಗಾ ಸಪ್ತಮಿ, ಈ ದಿನ ಗಂಗಾ ಮಾತೆಗೆ ಪೂಜೆ ಸಲ್ಲಿಸುವುದು ವಿಶೇಷ ಮಹತ್ವವನ್ನು ಹೊಂದಿದೆ ಎಂದು ಜ್ಯೋತಿಷಿ ಪಂಡಿತ್ ರಿಷಿ ದ್ವಿವೇದಿ ಹೇಳಿದ್ದಾರೆ. ಅದರಂತೆ ಪ್ರಧಾನಿಯವರು ಇಂದು ಗಂಗಾರತಿ ಬೆಳಗಿದ್ದಾರೆ. ಇದನ್ನೂ ಓದಿ: 11 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಹಾಡುಗಾರ ಜಿ.ವಿ ಪ್ರಕಾಶ್

ಇದಕ್ಕೂ ಮುನ್ ತಮ್ಮ ಎಕ್ಸ್ ನಲ್ಲಿ, ಕಾಶಿಯೊಂದಿಗಿನ ನನ್ನ ಸಂಬಂಧವು ಅದ್ಭುತವಾಗಿದೆ. ಅದನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ಅಲ್ಲದೇ 10 ವರ್ಷಗಳ ಹಿಂದೆ ನಾನು ಕಾಶಿಗೆ ಬಂದಾಗ, ಗಂಗಾ ಮಾತೆ ನನ್ನನ್ನು ಕರೆದಿದ್ದಾಳೆ ಎಂದು ಹೇಳಿದ್ದೆ. ಆದರೆ ಕಳೆದ 10 ವರ್ಷಗಳಲ್ಲಿ ಗಂಗೆ ನನ್ನನ್ನು ದತ್ತು ತೆಗೆದುಕೊಂಡಿದ್ದಾಳೆ ಎಂದು ಪ್ರಧಾನಿ ಮೋದಿ ಹೇಳಿದರು. ಇದನ್ನೂ ಓದಿ: ನಿಯಂತ್ರಣ ತಪ್ಪಿ ಟ್ರಕ್‌ಗೆ ಕಾರು ಡಿಕ್ಕಿ- ಸ್ಥಳದಲ್ಲೇ 6 ಮಂದಿ ದಾರುಣ ಸಾವು

