ಬೆಂಗಳೂರು : ಕೋರಮಂಗಲದ ಪಿಜಿಯಲ್ಲಿ ಕೊಲೆ ಪ್ರಕರಣ ಬೆನ್ನಲ್ಲೇ ಅಲರ್ಟ್ ಆಗಿರುವ ಪಿಜಿ ಮಾಲೀಕರು ಪಿಜಿಗಳಲ್ಲಿ ಸೆಕ್ಯೂರಿಟಿ ಹೆಚ್ಚಿಸಲು ಮುಂದಾಗಿದ್ದಾರೆ.
ಸಿಸಿಟಿವಿ ಸೆಕ್ಯೂರಿಟಿ ಸೇರಿದಂತೆ ಅಗತ್ಯ ಸುರಕ್ಷತೆಗೆ ಸಂಬಂಧಿಸಿದಂತೆ ಪರೀಶಿಲನೆ ನಡೆಸಲು ಪಿಜಿ ಮಾಲೀಕರಿಗೆ ಅಸೋಸಿಯೇಷನ್ನಿಂದ ಸೂಚನೆ ನೀಡಲಾಗಿದೆ.
ಯಾವೆಲ್ಲಾ ಪಿಜಿಯಲ್ಲಿ ಸಿಸಿಟಿವಿ ಹಾಗೂ ಸೆಕ್ಯುರಿಟಿ ಗಾರ್ಡ್ಗಳಿಲ್ಲವೋ ಅಂತಹ ಪಿಜಿಗಳಲ್ಲಿ ಸೂಕ್ತ ಸೆಕ್ಯುರಿಟಿ ವಹಿಸಲು ಸೂಚನೆ ನೀಡಲಾಗಿದೆ. ಈ ಮಧ್ಯೆ ಬೆಂಗಳೂರಿನ ಪಿಜಿಗಳಿಗೆ ಪೋಷಕರ ಕರೆ ಮಾಡುತ್ತಿದ್ದು ಪಿಜಿ ಸೇಫ್ಟಿ ಬಗ್ಗೆ ವಿಚಾರಿಸುತ್ತಿದ್ದಾರೆ.