ಬೆಂಗಳೂರು: ಒಂದು ವಾರದ ನಿರಂತರ ಕುಸಿತದ ಬಳಿಕ ಚಿನ್ನದ ಬೆಲೆ ಇಂದು ಏಕಾಏಕಿ ಭಾರೀ ಏರಿಕೆ ಕಂಡಿದ್ದು, ಚಿನ್ನಾಭರಣ ಪ್ರಿಯರ ಗಮನ ಸೆಳೆದಿದೆ.
24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 3,760 ರೂಪಾಯಿ ಏರಿಕೆ ಕಂಡು 1,46,670 ರೂಪಾಯಿಗೆ ತಲುಪಿದೆ. ಇದೇ ವೇಳೆ, ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 376 ರೂಪಾಯಿ ಹೆಚ್ಚಳದಿಂದ 14,667 ರೂಪಾಯಿಗೆ ಏರಿಕೆಯಾಗಿದೆ.
22 ಕ್ಯಾರೆಟ್ ಚಿನ್ನದ ದರದಲ್ಲೂ ಏರಿಕೆ ಕಂಡುಬಂದಿದ್ದು, ಒಂದು ಗ್ರಾಂಗೆ 345 ರೂಪಾಯಿ ಹೆಚ್ಚಳವಾಗಿ 13,445 ರೂಪಾಯಿಗೆ ತಲುಪಿದೆ. 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 3,450 ರೂಪಾಯಿ ಏರಿಕೆಯಾಗಿ 1,34,450 ರೂಪಾಯಿಯಾಗಿದೆ.
ಇನ್ನೊಂದೆಡೆ, ಬೆಳ್ಳಿ ಬೆಲೆಯಲ್ಲೂ ಗಮನಾರ್ಹ ಏರಿಕೆ ಕಂಡುಬಂದಿದ್ದು, ಪ್ರತಿ ಕಿಲೋಗ್ರಾಂಗೆ 2,50,000 ರೂಪಾಯಿಗೆ ತಲುಪಿದೆ. ಸೋಮವಾರ ಬೆಳ್ಳಿ ಬೆಲೆ 15,000 ರೂಪಾಯಿ ಇಳಿಕೆಯಾಗಿದ್ದರೆ, ಕಳೆದ ವಾರ ಚಿನ್ನ ಮತ್ತು ಬೆಳ್ಳಿ ಎರಡರಲ್ಲೂ ಭಾರೀ ಕುಸಿತ ಕಂಡುಬಂದಿತ್ತು. ಮಾರ್ಚ್ 2ರಂದು 3.15 ಲಕ್ಷ ರೂಪಾಯಿಗೆ ಏರಿದ್ದ ಬೆಳ್ಳಿ ಬೆಲೆ ನಂತರ 2.35 ಲಕ್ಷ ರೂಪಾಯಿಗೆ ಇಳಿಕೆಯಾಗಿತ್ತು.
ಈ ಹಠಾತ್ ಬೆಲೆ ಏರಿಳಿತಕ್ಕೆ ಇರಾನ್-ಅಮೆರಿಕ ಸಂಘರ್ಷ, ಅಂತರರಾಷ್ಟ್ರೀಯ ಮಾರುಕಟ್ಟೆಯ ಅಸ್ಥಿರತೆ ಹಾಗೂ ಡಾಲರ್ ಮೌಲ್ಯದ ಏರಿಳಿತ ಪ್ರಮುಖ ಕಾರಣಗಳಾಗಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

