ಆರ್.ಆರ್ ನಗರ (R.R.Nagar) ಮತ ಕೇಂದ್ರಕ್ಕೆ ಪತಿ ಸಮೇತ ಆಗಮಿಸಿದ ನಟಿ ಅಮೂಲ್ಯ (Amulya) ಅವರು ಸರದಿ ಸಾಲಿನಲ್ಲಿ ಅರ್ಧ ಗಂಟೆಗೂ ಹೆಚ್ಚು ಸಮಯ ನಿಂತೂ ತಮ್ಮ ಮತದಾನದ ಹಕ್ಕು ಚಲಾಹಿಸಿದ್ದಾರೆ. ನಂತರ ಅವರು ಸಾಲಿನಲ್ಲಿ ನಿಂತಿದ್ದವರಿಗೆ ಬೇಗ ವೋಟು (Vote) ಮಾಡುವಂತೆ ಮನವಿ ಮಾಡಿದ್ದಾರೆ.
ಮತದಾನದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಂಬಾ ಕ್ಯೂ ಇದೆ. ಜನ ನೋಡಿ ಖುಷಿಯಾಯಿತ್ತು. ಮಕ್ಕಳು ಇರುವುದರಿಂದ ರಿಕ್ವೆಸ್ಟ ಮಾಡಿದೆ. ಬಳಿಕ ಬೇಗ ಬಿಟ್ರು. ಆದ್ರು ಅರ್ಧ ಗಂಟೆ ಇದ್ದೆ. ಇದು ನಮ್ಮ ಹಕ್ಕು, ನಾವು ವೋಟ್ ಮಾಡಲೇಬೇಕು. ಸಮಯ ವ್ಯರ್ಥ ಮಾಡದೆ ವೋಟ್ ಹಾಕಬೇಕು. ಈ ಬಾರಿ ಹೆಚ್ಚು ಮತದಾನ ಆಗುತ್ತೆ ಅಂತ ಅಂದುಕೊAಡಿದ್ದೇನೆ ಎಂದರು.