ತಿರುಪತಿ : ತಿರುಮಲ ತಿರುಪತಿ ದೇವಸ್ಥಾನದ ಶ್ರೀ ವೆಂಕಟೇಶ್ವರ ಪ್ರಾಣದಾನ ಟ್ರಸ್ಟ್ ಗೆ 1 ಕೋಟಿ ರೂ. ದೇಣಿಗೆಯನ್ನು ಗೂಗಲ್ ಉಪಾಧ್ಯಕ್ಷ ತೋಟ ಚಂದ್ರಶೇಖರ್ ಅವರು ಗುರುವಾರದಂದು ಸಮರ್ಪಿಸಿದ್ದಾರೆ. ತಿರುಮಲದಲ್ಲಿರುವ ದೇಗುಲದ ಪ್ರಧಾನ ಕಚೇರಿಯಲ್ಲಿ ಈ ಚೆಕ್‌ನ್ನು ಟಿಟಿಡಿ ಮುಖ್ಯಸ್ಥ ಬಿ.ಆರ್.ನಾಯ್ಡು ಅವರಿಗೆ ಚಂದ್ರಶೇಖರ್ ಅವರು ಹಸ್ತಾಂತರಿಸಿದ್ದಾರೆ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಪತಿ ತಿರುಮಲ ದೇವಸ್ಥಾನವು ಸುತ್ತಲೂ ಬೆಟ್ಟಗಳಿಂದ ನೆಲೆಗೊಂಡಿರುವ ಪ್ರಸಿದ್ಧ ಹಿಂದೂ ದೇವಾಲಯ. ವಿಶ್ವದ ಅತ್ಯಂತ ಶ್ರೀಮಂತ ಹಿಂದೂ ದೇವಾಲಯ ಎಂದು ಪ್ರಸಿದ್ದಿಯನ್ನು ಪಡೆದಿದ್ದು, ಪ್ರತಿನಿತ್ಯವೂ ಲಕ್ಷಂತರ ಭಕ್ತಾದಿಗಳು ತಿರುಮಲ ದರ್ಶನ ಪಡೆಯಲು ತಿರುಪತಿ ಆಗಮಮಿಸುತ್ತಾರೆ.
ವಿಶ್ವದ ಅತ್ಯಂತ ತಿರುಪತಿ ತಿರುಮಲ ದೇವಾಲಯವು ಇಂದು ಅತ್ಯಂತ ಶ್ರೀಮಂತ ದೇವಾಲಯ ಟ್ರಸ್ಟ್ ಆಗಿದೆ. ವರದಿಯ ಪ್ರಕಾರ 2024ರ ದೇವಾಲಯದ ಟ್ರಸ್ಟ್ 1161 ಕೋಟಿ ರೂಪಾಯಿಗಳ ನೂತನ ನಿಗದಿತ ಠೇವಣಿಯನ್ನು (FD) ಮಾಡಿದೆ ಇದು ಇತಿಹಾಸದಲ್ಲಿನ ಅತ್ಯಧಿಕ ಎಫ್‌ಡಿ ಮೊತ್ತವಾಗಿದೆ. ತಿರುಮಲ ದೇವಸ್ಥಾನಕ್ಕೆ ಕಳೆದ 12 ವರ್ಷಗಳಿಂ ಪ್ರತಿವರ್ಷ 500 ಕೋಟಿ ರೂಪಾಯಿಗಳಷ್ಟು ಅಥವಾ ಅದಕ್ಕಿಂತ ಹೆಚ್ಚು ಹಣವನ್ನು ಎಫ್ ಡಿ ಆಗಿ ನಿಗದಿತ ಮಾಡುತ್ತಿರುವ ಭಾರತದ ಏಕೈಕ ದೇವಾಲಯ ಇದಾಗಿದೆ. ವೈಕುಂಠ ಏಕಾದಶಿಯಂದು ಜನಸಾಗರವೇ ಸೇರುತ್ತದೆ.
- ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಅಬ್ಬರ – 6 ವಿಕೆಟ್ ಗೆಲುವಿನಿಂದ ಐಪಿಎಲ್‌ಗೆ ಭರ್ಜರಿ ಚಾಲನೆ
- ರಾಜ್ಯದಲ್ಲಿ ಇನ್ನೊಂದು ವಾರ ಭಾರಿ ಮಳೆ ಸಾಧ್ಯತೆ, ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ
- ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ : ತಪ್ಪೊಪ್ಪಿಕೊಂಡ ಆರೋಪಿ ಮೊಹಮ್ಮದ್ ಶಾರೀಕ್
- ಅಮೆರಿಕಾದಾದ್ಯಂತ ‘ನೋ ಕಿಂಗ್ಸ್’ ಪ್ರತಿಭಟನೆ: ಟ್ರಂಪ್ ವಿರುದ್ಧ ಜನರ ಆಕ್ರೋಶ
- ರೇಮಂಡ್ ಕಂಪನಿಯ ಮಾಜಿ ಅಧ್ಯಕ್ಷ ವಿಜಯಪತ್ ಸಿಂಘಾನಿಯಾ ನಿಧನ

