ಕೋಲಾರ : ಮುಳಬಾಗಿಲು ತಾಲ್ಲೂಕು ಎಚ್ ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಶಂಕರಪುರದಲ್ಲಿ ಗೋಶಾಲೆ ಪ್ರಾರಂಭ. ಬುನಾಥ ರವರು ಮಾತನಾಡಿ ಶಂಕರಾಪುರ ಗ್ರಾಮದಲ್ಲಿ ಗೋಶಾಲೆ ಪ್ರಾರಂಭ ಮಾಡಲು ತುಂಬಾ ಕಷ್ಟ ಆಯಿತು.
ಯಾಕೆಂದರೆ ಚಿಕ್ಕ ವಯಸ್ಸು ನಲ್ಲಿ ತಾಯಿಯನ್ನು ಕಳೆದುಕೊಂಡು ತಂದೆ ಇದ್ದರು ಇಲ್ಲದಂಗೆ ನನ್ನ ಜೀವನ.ನಾನು ತುಂಬಾ ಬಡ ಕುಟುಂಬದಲ್ಲಿ ಹುಟ್ಟಿ ತಿನ್ನಕ್ಕೆ ಅನ್ನ ಇಲ್ಲದೆ ಸಮಯದಲ್ಲೂ ಕೂಡ ನಾನು ಹಿಂಜರಿಗಿಲ್ಲ.ಏನಾದರು ಸಾಧನೆ ಮಾಡಲೇ ಬೇಕು ಅಂತ ತುಂಬಾ ಧೈರ್ಯದಿಂದ ನನ್ನ ಪಾಲಿಗೆ ಬಂದಿರುವ ಜಮೀನುನಲ್ಲಿ ಚಿಕ್ಕದಾಗಿ ಗೋಶಾಲೆ ಪ್ರಾರಂಭ ಮಾಡಿದೆ.
ಹೀಗ ಸುಮಾರು 35 ಹಸುಗಳು ಇವೆ. ಈ ಹಸುಗಳಿಗೆ ಪ್ರತಿದಿನ ಕಾಡಿಗೆ ಕಳಸಿ ಮೇವು ತಿಂದು ಸಂಜೆ ಗೋಶಾಲೆ ಗೆ ಬರುತ್ತವೆ.ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಸಾಯಿ ಗೆ ಹೋಗುವ ಹಸುಗಳನ್ನ ತಡೆದು ನಾನು ನಮ್ಮ ಗೋಶಾಲೆಗೆ ಕರಕೊಂಡು ಹೋಗುತ್ತೇನೆ ಎಂದು ಬುನಾಥ್ ತಿಳಿಸಿದರು
ಒಟ್ಟಾರೆಯಾಗಿ ಮುಳಬಾಗಿಲು ತಾಲ್ಲೂಕು ದುಗ್ಗಸಂದ್ರ ಹೋಬಳಿ ಎಚ್ ಗೊಲ್ಲಹಳ್ಳಿ ಪಂಚಾಯಿತಿ ಶಂಕರಪುರ ಗ್ರಾಮದಲ್ಲಿ ಗೋಶಾಲೆ ಪ್ರಾರಂಭ ಮಾಡಿ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಟ್ಟಿದ್ದಾರೆ.
ವರದಿ : ಅರುಣ್ ಕುಮಾರ್ ಬಿ ಎಸ್