ಶ್ರೀರಂಗಪಟ್ಟಣ : ಪ್ರವಾಹದಿಂದ ತುಂಬಿ ಹರಿಯುತ್ತಿದ್ದ ಇಲ್ಲಿನ ಕಾವೇರಿ ನದಿಗೆ ಹಾರಿ ಸರ್ಕಾರಿ ನೌಕರನೋರ್ವ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೈಸೂರು ಮೂಲದ ಅರಣ್ಯ ಇಲಾಖೆ ನೌಕರ ರೇವಣ್ಣ (53)ಮೃತ ವ್ಯಕ್ತಿಯಾಗಿದ್ದು, ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಸೇತುವೆ ಮೇಲಿಂದ ತುಂಬಿದ ಕಾವೇರಿ ನದಿಗೆ ಜಿಗಿದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನದಿಗೆ ಬಿದ್ದು ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯ ಶವವನ್ನು ಗಾಂಜಾಂ ಬಳಿಯ ನಿಮಿಷಾಂಬ ದೇಗುಲದ ಬಳಿ ಕಾರ್ಯಾಚರಣೆ ಮೂಲಕ ಅಗ್ನಿಶಾಮಕ ಸಿಬ್ಬಂದಿಗಳು
ಶವವನ್ನು ಮೇಲೇತ್ತಿದ್ದಾರೆ.
ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

