ಬೆಂಗಳೂರು : : ರಾಜ್ಯ ಸರ್ಕಾರ ಆಗಾಗ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡುತ್ತಲಿರುತ್ತದೆ. ಹಾಗೆಯೇ ಇದೀಗ ದಿಢೀರ್ 10 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ವರ್ಗಾವಣೆಗೊಂಡ ಅಧಿಕಾರಿಗಳ ವಿವರ :
ಮೋಹನ್ ರಾಜ್ ಕೆ.ಪಿ: ವ್ಯವಸ್ಥಾಪಕ ನಿರ್ದೇಶಕರು, ಕೃಷ್ಣಾ ಜಲ ಭಾಗ್ಯ ನಿಗಮ ಇವರಿಗೆ ಆಯುಕ್ತರು, ಕೃಷ್ಣಾ ಮೇಲ್ದಂಡೆ ಯೋಜನೆಯ ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ ನಿರ್ಮಾಣ.
ಶಿವನಗೌಡ ಪಾಟೀಲ್: ಆಯುಕ್ತರು, ಕೃಷಿ ಇಲಾಖೆ ಇವರಿಗೆ ತೋಟಗಾರಿಕೆ ಹಾಗೂ ರಾಷ್ಟ್ರೀಯ ತೋಟಗಾರಿಕಾ ಮಿಷನ್‌ನ ನಿರ್ದೇಶಕ.
ಡಾ.ಗೋಪಾಲ ಕೃಷ್ಣ ಎಚ್.ಎನ್: ಆಯುಕ್ತರು, ಕಾರ್ಮಿಕ ಇಲಾಖೆ ಇವರಿಗೆ ಆಯುಕ್ತರು, ಇಎಸ್ಐಎಸ್ ಕಾರ್ಮಿಕ ಇಲಾಖೆ.
ಡಾ.ರಾಜೇಂದ್ರ ಕೆ.ವಿ: ಆಯುಕ್ತರು, ಬೆಂಗಳೂರು ಪಶ್ಚಿಮ ನಗರ ಪಾಲಿಕೆ, ಇವರಿಗೆ ವ್ಯವಸ್ಥಾಪಕ ನಿರ್ದೇಶಕರು, ಪ್ರವಾಸೋದ್ಯ, ಅಭಿವೃದ್ಧಿ ನಿಗಮ.
ಮುಲ್ಲೈ ಮುಗಿಲನ್: ಆಯುಕ್ತರು, ಮುದ್ರಾಂಕ ಮತ್ತು ನೋಂದಣಿ ಇಲಾಖೆ, ಇವರಿಗೆ ಕಂದಾಯ ಆಯುಕ್ತರು (ಭೂ ಸ್ವಾಧೀನ, ಪುನರ್ವಸತಿ ಮತ್ತು ಪುನರ್ ನಿರ್ಮಾಣ ಮತ್ತು ಸಾಮಾಜಿಕ ಭದ್ರತೆ)
ವೆಂಕಟರಾಜ: ಜಿಲ್ಲಾಧಿಕಾರಿ ಕೊಡಗು, ಇವರಿಗೆ ಪ್ರಾದೇಶಿಕ ಆಯುಕ್ತರು ಮೈಸೂರು ವಲಯ.
ನಳಿನ್ ಅತುಲ್: ಕಾರ್ಯದರ್ಶಿ, ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ ಇವರಿಗೆ ಹೆಚ್ಚುವರಿ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ ಕಲಬುರಗಿ.
ಲೊಖಂಡೆ ಸ್ನೇಹಲ್ ಸುಧಾಕರ್: ಹೆಚ್ಚುವರಿ ಆಯುಕ್ತರು, ಬೆಂಗಳೂರು ಪೂರ್ವ ನಗರ ಪಾಲಿಕೆ ಇವರಿಗೆ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ವಿದ್ಯುತ್ ಕಾರ್ಖನೆ.
ಭರತ್ ಎಸ್: ನಿರ್ದೇಶಕರು, ಪಿಯು ಶಿಕ್ಷಣ ಇಲಾಖೆ ಇವರಿಗೆ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಹುದ್ದೆ.
ರಾಹುಲ್ ಶರಣಪ್ಪ ಸಂಕನೂರು: ಹೆಚ್ಚುವರಿ ಆಯುಕ್ತರು, ಬೆಂಗಳೂರು ಕೇಂದ್ರ ನಗರ ಪಾಲಿಕೆ ಇವರಿಗೆ ಕೆಪಿಎಸ್‌ಸಿಯ ಪರೀಕ್ಷಾ ಜಂಟಿ ನಿರ್ದೇಶಕ ಹುದ್ದೆ.
ದಲ್ಜೀತ್ ಕುಮಾರ್: ಉಪ ಕಾರ್ಯದರ್ಶಿ, ಐಟಿ-ಬಿಟಿ, ಇವರಿಗೆ ಪ್ರಭಾರವಾಗಿ ನಿರ್ದೇಶಕರು, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ.

