ಲಾಸ್ ಏಂಜಲೀಸ್: ವಿಶ್ವವಿಖ್ಯಾತ ಬೌದ್ಧಗುರು ದಲೈಲಾಮಾ ಅವರಿಗೆ ಸಂಗೀತ ಲೋಕದ ಅತ್ಯಂತ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ಲಭಿಸಿದೆ. ತಮ್ಮ ಆಲ್ಬಮ್ ಮೂಲಕ ಜಗತ್ತಿಗೆ ಶಾಂತಿ ಮತ್ತು ಮಾನವೀಯತೆಯ ಸಂದೇಶವನ್ನು ಸಾರಿದ ಹಿನ್ನೆಲೆ ಅವರಿಗೆ ಈ ಗೌರವ ದೊರಕಿದೆ.
ಫೆಬ್ರವರಿ 1ರಂದು ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಲಾಸ್ ಏಂಜಲೀಸ್‌ನಲ್ಲಿ ನಡೆದ ಗ್ರ್ಯಾಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದಲೈಲಾಮಾ ಅವರ ಆಲ್ಬಮ್‌ಗೆ ‘ಬೆಸ್ಟ್ ಆಡಿಯೋ ಬುಕ್, ನರೇಷನ್ ಮತ್ತು ಸ್ಟೋರಿ ಟೆಲ್ಲಿಂಗ್ ರೆಕಾರ್ಡಿಂಗ್’ ವಿಭಾಗದಲ್ಲಿ ಪ್ರಶಸ್ತಿ ನೀಡಲಾಗಿದೆ.
ದಲೈಲಾಮಾ ಅವರು ತಮ್ಮ ಆಲ್ಬಮ್ ಮೂಲಕ ಶಾಂತಿ, ಸಹಾನುಭೂತಿ ಹಾಗೂ ಮಾನವೀಯ ಮೌಲ್ಯಗಳ ಮಹತ್ವವನ್ನು ಜಗತ್ತಿಗೆ ಸಾರಿದ್ದು, ಈ ಕೃತಿ ವಿಶ್ವದಾದ್ಯಂತ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಗೌರವದಿಂದ ದಲೈಲಾಮಾ ಅವರ ಸಂದೇಶಕ್ಕೆ ಮತ್ತಷ್ಟು ಜಾಗತಿಕ ಮೆಚ್ಚುಗೆ ಲಭಿಸಿದೆ.

