ಚಿನ್ನ ಪಡೆದು ಮೋಸ ಮಾಡಿದ್ದ ಆರೋಪಿಗಳ ಬಂಧನ
ಚಿನ್ನಾಭರಣ ಮತ್ತು ಬೆಳ್ಳಿಯ ವಸ್ತುಗಳನ್ನು ಕಳವು ಮಾಡಿದ್ದ ಆರೋಪಿಗಳು
22 ಲಕ್ಷ ಮೌಲ್ಯದ 212 ಗ್ರಾಂ ಚಿನ್ನಾಭರಣ ಜಪ್ತಿ
ಹಲಸೂರು ಗೇಟ್ ನಗರ್ತಪೇಟೆಯಲ್ಲಿ ಪೇಟೆಯಲ್ಲಿ ನಡೆದ ಘಟನೆ
ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ನ ಡಿಸಿಪಿ ಕೇಂದ್ರ ವಿಭಾಗದ ಹಲಸೂರು ಗೇಟ್ ಠಾಣೆ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನಂಬಿಕೆ ದ್ರೋಹ ಮತ್ತು ಮೋಸ ಮಾಡಿ ಚಿನ್ನಾಭರಣ ಮತ್ತು ಬೆಳ್ಳಿಯ ವಸ್ತುಗಳನ್ನು ಕಳವು ಮಾಡಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ..
ಹಲಸೂರು ಗೇಟ್ ನಗರ್ತಪೇಟೆಯಲ್ಲಿ ಪೇಟೆಯಲ್ಲಿ ಜ್ಯುವೆಲರಿ ಅಂಗಡಿಯ ಮಾಲೀಕರು 247 ಗ್ರಾಂ ಚಿನ್ನದ ಗಟ್ಟಿಗಳನ್ನು ಓರ್ವ ವ್ಯಕ್ತಿಗೆ ನೀಡಿ ಚಿನ್ನದ ಆಭರಣಗಳನ್ನಾಗಿ ಮಾಡಿಕೊಡುವಂತೆ ನೀಡಿದ್ದು ಚಿನ್ನದ ಗಟ್ಟಿಗಳನ್ನು ಪಡೆದು ಚಿನ್ನದ ಆಭರಣಗಳನ್ನಾಗಿ ಮಾಡಿಕೊಡದೆ ಚಿನ್ನದ ಬಳೆಯನ್ನು ರಿಪೇರಿ ಮಾಡಿಸಿಕೊಂಡು ಬರಲು ನಗರ ಪೇಟೆಗೆ ಕಳುಹಿಸಿದ್ದರು.
ಚಿನ್ನಾಭರಣಗಳನ್ನು ಬ್ಯಾಗಿನಲ್ಲಿ ಇಟ್ಟುಕೊಂಡು ದ್ವಿಚಕ್ರ ವಾಹನದಲ್ಲಿ ಬಂದು ನಗರ ಪೇಟೆಯ ಅಂಗಡಿಯವೊಂದರ ಬಳಿ ಚಿನ್ನಾಭರಣಗಳಿದ್ದ ಬ್ಯಾಗನ್ನು ದ್ವಿಚಕ್ರ ವಾಹನದಲ್ಲಿಟ್ಟು ಬೇರೊಂದು ಅಂಗಡಿಗೆ ಹೋಗಿ ಬರುವಷ್ಟರಲ್ಲಿ ಬ್ಯಾಡ್ನಲ್ಲಿದ್ದ ಚಿನ್ನಾಭರಣಗಳನ್ನು ಮಾಡಿಕೊಂಡು ಹೋಗಿರುತ್ತಾರೆಂದು ತಿಳಿಸಿರುತ್ತಾರೆ.
ಈ ಕುರಿತು ಹಲಸೂರು ಗೇರ್ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಿಸಿರುತ್ತಾರೆ. ಇನ್ನು ಪ್ರಕರಣದ ತನಿಖೆಯನ್ನು ಮುಂದುವರಿಸಿ ಓರ್ವನನ್ನು ಪಶ್ಚಿಮ ಬಂಗಾಳದ ಪುರಾ ಬರ್ದವಾನ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ . ಆರೋಪಿಯು ವಿಚಾರಣೆಯಲ್ಲಿ ಚಿನ್ನದ ಗಟ್ಟಿಗಳನ್ನು ಪಡೆದು ಚಿನ್ನಾಭರಣಗಳನ್ನಾಗಿ ಮಾಡಿಕೊಡದೆ ಮೋಸ ಮಾಡಿರುವುದನ್ನು ಬಾಯಿ ಬಿಟ್ಟಿದ್ದಾನೆ..
ಬೆಂಗಳೂರು ನಗರ ಕೇಂದ್ರ ವಿಭಾಗದ ಡಿಸಿಪಿ ಹೆಚ್. ಟಿ ಶೇಖರ್ ಮತ್ತು ಹಲಸುರ್ ಗೇಟ್ ಉಪ ವಿಭಾಗದ ಎಸಿಪಿ ಶಿವಾನಂದ ಚಲವಾದಿ ಇವರ ಮಾರ್ಗದರ್ಶನ ಹಾಗೂ ಹಲಸೂರು ಗೇಟ್ ಠಾಣೆ ಪೋಲಿಸ್ ಇನ್ಸ್ಪೆಕ್ಟರ್ ಹನುಮಂತ ಕೆ ಭಜಂತ್ರಿ ಅವರ ಸಾರಥ್ಯದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ವಸಂತ ಕಾಳಗಿ ಭಗವಂತರಾಯ ಮತ್ತು ಕೆ ಸಿ ಪ್ರದೀಪ್ ಕೆಎಸ್ಐ ರಂಗನಾಥ ಹಾಗೂ ಕ್ರೈಂ ಸಿಬ್ಬಂದಿಗಳು ಪಾಲ್ಗೊಂದು ಕಾರ್ಯಾಚರಣೆ ಯಶಸ್ವಿಗೊಳಿಸಿದ್ದಾರೆ.
ಇನ್ನು ಹಲಸೂರು ಗೇಟ್ ಪೊಲೀಸ್ ಠಾಣೆ ಪೋಲೀಸರು ವಶಪಡಿಸಿಕೊಂಡಿರುವ ಚಿನ್ನಾಭರಣಗಳನ್ನು ನಗರ ಪೊಲೀಸ್ ಆಯುಕ್ತರಾದ ಬಿ ದಯಾನಂದ ಅವರು ಪರಿಶೀಲನೆ ನಡೆಸಿದರು

