ಹರಿಯಾಣ: ಪ್ರಖ್ಯಾತ ಯೂಟ್ಯೂಬರ್ ಆಗಿ ಗುರುತಿಸಿಕೊಂಡಿದ್ದ ಜ್ಯೋತಿ ಮಲ್ಲೋತ್ರಾ ಪಾಕಿಸ್ತಾನದ ಪರವಾಗಿ ಒಳ್ಳೆಯ ಅಭಿಪ್ರಾಯ ಮೂಡುವ ರೀತಿಯ ಸಾಕಷ್ಟು ವ್ಲಾಗ್ ಗಳನ್ನು ಮಾಡಿ ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಹಂಚಿಕೊಂಡಿದ್ದಳು. ಇದೀಗ ಈಕೆಯನ್ನು ಪರವಾಗಿ ಗೂಢಚರ್ಯೆ ನಡೆಸಿದ್ದಾಳೆ ಎಂಬ ಆರೋಪದ ಮೇಲೆ ಬಂಧಿಸಲಾಗಿದೆ.
ಈ ಹಿಂದೆ ಜ್ಯೋತಿ 2023ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ವೇಳೆ, ಜ್ಯೋತಿಯನ್ನು ಪಾಕ್ ರಾಯಭಾರಿ ಕಚೇರಿಯ ಉದ್ಯೋಗಿ ದಾನಿಶ್ ಎಂಬಾತ ಭೇಟಿಯಾಗಿದ್ದ ಎನ್ನಲಾಗಿದೆ. ಮೊನ್ನೆಯಷ್ಟೇ ಭಾರತ ಈತನನ್ನು ಪರ್ಸನಾ ನಾನ್ ಗ್ರೆಟಾ ಎಂದು ಘೋಷಿಸಿ ಭಾರತದಿಂದ ಹೊರಹಾಕಿತ್ತು.
ಈತನ ಸಮೋರ್ಕಕ್ಕೆ ಬಂದ ಬಳಿಕ ಜ್ಯೋತಿ ಪಾಕಿಸ್ತಾನದ ISI ಜೊತೆಗೆ ಸಂಪರ್ಕಕ್ಕೆ ಬಂದಿದ್ದು, ಆ ನಂತರ ಕೆಲವು ಸೀಕ್ರೆಟ್ ಅಪ್ಲಿಕೇಶನ್ ಗಳ ಮೂಲಕ ಭಾರತ ಸೂಕ್ಷ್ಮ ಪ್ರದೇಶಗಳ ಮಾಹಿತಿಯನ್ನು ಪಾಕಿಸ್ತಾನಕ್ಕೆ ನೀಡಿ ಗೂಢಚಾರಿಕೆ ಮಾಡಿದ್ದಾಳೆ ಎನ್ನಲಾಗಿದೆ.ಹೀಗಾಗಿ ಈಕೆಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.
ಈಕೆ ತನ್ನ ‘ಟ್ರಾವೆಲ್ ವಿಥ್ ಜೋ’ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಲಕ್ಷಾಂತರ ಫಾಲೋವರ್ಸ್ ಗಳನ್ನು ಹೊಂದಿದ್ದಾಳೆ.ಆದ್ರೆ ಈ ಮಹಿಳೆ ಪಾಕಿಸ್ತಾನದ ಜೊತೆಗೆ ಭಾರತದ ಸೂಕ್ಷ್ಮ ಮಾಹಿತಿ ಹಂಚಿಕೊಳ್ಳುತ್ತಿದ್ದಳು ಎಂಬ ಆರೋಪ ಕೇಳಿಬಂದಿದೆ.

