ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revaana) ಆಶ್ಲೀಲ ವಿಡಿಯೋ ಬಿಡುಗಡೆ ಹಿಂದೆ ಜೆಡಿಎಸ್ (JDS) ರಾಜ್ಯಧ್ಯಕ್ಷ ಹೆಚ್‌ಡಿ. ಕುಮಾರಸ್ವಾಮಿ (Kumaraswamy) ಕೈವಡವಿದೆ ಎಂದು ಬೆಂಗಳೂರು ಗ್ರಾಮಂತರ ಕಾಂಗ್ರೆಸ್ ಸಂಸದ ಡಿಕೆ. ಸುರೇಶ್ (DK.Suresh) ಗಂಭೀರ ಆರೋಪ ಮಾಡಿದ್ದಾರೆ.
ವಿಡಿಯೋ ಬಿಡುಗಡೆ ಹಿಂದೆ ಕುಮಾರಸ್ವಾಮಿ ಹಾಗೂ ಮೈತ್ರಿ ನಾಯಕರ ಕೈವಾಡವಿದೆ ಎಂದರು. ಹೆಣ್ಣು ಮಕ್ಕಳಿಗೆ ಅನ್ಯಾಯ ಆಗಿರುವ ಬಗ್ಗೆ ಗಮನ ಹರಿಸಬೇಕಿದೆ. ಈ ಕೇಸ್ ಬಗ್ಗೆ ಹಗಾಸನ ಜೆಲ್ಲೆಯಲ್ಲಿ ಮೊದಲೇ ಗುಸುಗುಸು ಇತ್ತು. ಹಾಗೆಂದು ವೀಡಿಯೋ ನೋಡಿದವರು ಯಾರೂ ಇರಲಿಲ್ಲ. ನ್ಯಾಯಾಲಯದ ತಡೆಯಾಜ್ಞೆ ತಂದಾಗ ಅದು ಖಚಿತ? ಆಗಿದೆ. ಪೆನ್‌ಡ್ರೈವ್ ಬಿಡುಗಡೆಯಾದಾಗ ಬಹಿರಂಗವಾಗಿ ಚರ್ಚೆ ಆಗಿದೆ. ಈ ವಿಡಿಯೋ ಹಿಂದೆ ಹಾಸನ ಜಿಲ್ಲಾ ನಾಯಕರ ಕೈವಾಡ ಇದೆ ಎಂದರು. ಇದನ್ನೂ ಓದಿ: ರಾಷ್ಟ್ರ ರಾಜಧಾನಿಯಲ್ಲಿ “ಕೈ” ಗೆ ಮತ್ತೊಂದು ಶಾಕ್: ಮತ್ತಿಬ್ಬರು ಇಂದು ರಾಜೀನಾಮೆ
ಸದ್ಯ ಹೆಣ್ಣು ಮಕ್ಕಳಿಗೆ ಅನ್ಯಾಯ ಆಗಿರುವ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಿದೆ. ಡಿಸಿಎಂ ಡಿಕೆಶಿವಕುಮಾರ್ ಹೆಸರು ಹೇಳದಿದ್ದರೆ ಕುಮಾರಸ್ವಾಮಿ ಕುಟುಂಬಕ್ಕೆ ಊಟ ಸೇರುವುದಿಲ್ಲ. ಬಹಳ ದೊಡ್ಡ ಕುಟುಂಬ ಅಲ್ವಾ ಅವರದ್ದು. ಅವರವರ ಉಳಿವಿಗಾಗಿ ಡಿಕೆಶಿಯವರನ್ನು ಬಳಸಿಕೊಳ್ಳುತ್ತಿದ್ದಾರೆ. ಡಿಕೆಶಿಯನ್ನು ಅನಗತ್ಯವಾಗಿ ಎಳೆದು ತರುತ್ತಿದ್ದಾರೆ. ವೀಡಿಯೋ ಬಿಡುಗಡೆ ಹಿಂದೆ ಅವರ ಮೈತ್ರಿ ನಾಯಕರು ಹಾಗೂ ಕುಮಾರಸ್ವಾಮಿ ಕೈವಾಡ ಇದೆ ಎಂದು ಸುರೇಶ್ ಹೇಳಿದರು. ಇದನ್ನೂ ಓದಿ: ಅಶ್ಲೀಲ ವಿಡಿಯೋ ಪ್ರಕರಣ; ಯಾರನ್ನೇ ಆದರೂ ಏಕಾಏಕಿ ಬಂಧಿಸುವುದಿಲ್ಲ- ಜಿ. ಪರಮೇಶ್ವರ್
ಡಿಕೆ ಶಿವಕುಮಾರ್ ಬಳಿ ವಿಡಿಯೋ ಇದ್ದಿದ್ದರೆ ಮುಂಚೆಯೇ ಬಿಡುಗಡೆ ಮಾಡುತ್ತಿದ್ದರು. ಇದರ ಹಿಂದೆ ಹಾಸನ ನಾಯಕರ ಕೈವಾಡ ಇದೆ. ಕುಮಾರಸ್ವಾಮಿ ಕೈವಾಡ ಕೂಡ ಇದೆ ಎಂದು ಅವರು ಆರೋಪಿಸಿದರು. ಇದನ್ನೂ ಓದಿ: ಪತಿಯ ಜೊತೆ ಹೋಗುತ್ತಿದ್ದ ಮಹಿಳೆಗೆ ಪುಂಡರಿಂದ ಲೈಂಗಿಕ ಕಿರುಕುಳ