By using this site, you agree to the Privacy Policy and Terms of Use.
Accept
Sampoorna Vaani NewsSampoorna Vaani NewsSampoorna Vaani News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: ಛತ್ತೀಸ್‌ಗಢದಲ್ಲಿ ಹೃದಯವಿದ್ರಾವಕ ಘಟನೆ : ಮಗನ ಸಾವಿನ ನೋವು ತಾಳಲಾರದೆ ದಂಪತಿ ಆತ್ಮಹತ್ಯೆ
Share
Font ResizerAa
Font ResizerAa
Sampoorna Vaani NewsSampoorna Vaani News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.
Sampoorna Vaani News > Blog > ರಾಷ್ಟ್ರೀಯ-National > ಛತ್ತೀಸ್‌ಗಢದಲ್ಲಿ ಹೃದಯವಿದ್ರಾವಕ ಘಟನೆ : ಮಗನ ಸಾವಿನ ನೋವು ತಾಳಲಾರದೆ ದಂಪತಿ ಆತ್ಮಹತ್ಯೆ
ರಾಷ್ಟ್ರೀಯ-NationalLatest

ಛತ್ತೀಸ್‌ಗಢದಲ್ಲಿ ಹೃದಯವಿದ್ರಾವಕ ಘಟನೆ : ಮಗನ ಸಾವಿನ ನೋವು ತಾಳಲಾರದೆ ದಂಪತಿ ಆತ್ಮಹತ್ಯೆ

Heartbreaking incident in Chhattisgarh: Couple commits suicide after son's death

Published February 17, 2026
Share
2 Min Read
SHARE

ಛತ್ತೀಸ್‌ಗಢ, ಫೆಬ್ರವರಿ 17: ಏಕೈಕ ಮಗನ ಸಾವಿನ ಆಘಾತದಿಂದ ಹೊರಬರಲಾರದೆ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ಛತ್ತೀಸ್‌ಗಢದಲ್ಲಿ ನಡೆದಿದೆ. ಅಪಘಾತದಲ್ಲಿ ಮಗನನ್ನು ಕಳೆದುಕೊಂಡ ಬಳಿಕ ಜೀವನದ ಆಸಕ್ತಿ ಕಳೆದುಕೊಂಡಿದ್ದ ಪೋಷಕರು, “ಅವನೇ ನಮ್ಮ ಪ್ರಪಂಚ… ಈಗ ಅವನೇ ಇಲ್ಲದ ಮೇಲೆ ಬದುಕುವುದಕ್ಕೆ ಅರ್ಥವೇನು?” ಎಂದು ನಾಲ್ಕು ಪುಟಗಳ ಡೆತ್‌ನೋಟ್ ಬರೆದಿಟ್ಟು ಜೀವತ್ಯಾಗ ಮಾಡಿದ್ದಾರೆ.

ಜಂಜ್‌ಗೀರ್-ಚಂಪಾ ಜಿಲ್ಲೆಯ ಶಿವರಿನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮನೆಯಲ್ಲಿ ನಿರ್ಮಾನಿಶ್ಯಬ್ಧ ವಾತಾವರಣದ ಮಧ್ಯೆ ಮನೆಯ ಅಂಗಳದಲ್ಲಿರುವ ಬೇವಿನ ಮರದಲ್ಲಿ ಕೃಷ್ಣ ಪಟೇಲ್ (48) ಹಾಗೂ ಪತ್ನಿ ರಮಾ ಬಾಯಿ (47) ಅವರ ಶವಗಳು ನೇತಾಡುತ್ತಿದ್ದವು. ಈ ದೃಶ್ಯ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ದಂಪತಿ ತಮ್ಮ ನಿರ್ಧಾರದ ಕುರಿತು ನಾಲ್ಕು ಪುಟಗಳ ಆತ್ಮಹತ್ಯೆ ಪತ್ರ ಬರೆದಿರುವುದರ ಜೊತೆಗೆ ವಿಡಿಯೋ ಸಂದೇಶವನ್ನೂ ದಾಖಲಿಸಿದ್ದಾರೆ. ಅವರ ಮಾತುಗಳು ಕುಟುಂಬಸ್ಥರನ್ನು ಶೋಕಸಾಗರದಲ್ಲಿ ಮುಳುಗಿಸಿವೆ.

ದಂಪತಿಯ ಏಕೈಕ ಪುತ್ರ ಆದಿತ್ಯ (21) 2024ರಲ್ಲಿ ಮಸ್ತೂರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ. ವೃತ್ತಿಯಲ್ಲಿ ಮೇಸ್ತ್ರಿಯಾಗಿದ್ದ ಕೃಷ್ಣ ಪಟೇಲ್ ಹಾಗೂ ರಮಾ ಬಾಯಿ ಅವರಿಗೆ ಆದಿತ್ಯನೇ ಪ್ರಪಂಚವಾಗಿದ್ದನು. ಅಪಘಾತದ ಬಳಿಕ ಕುಟುಂಬದ ಮೇಲೆ ಸಿಡಿಲು ಬಡಿದಂತಾಗಿತ್ತು.

ಆ ದಿನ ಆದಿತ್ಯ ದೇವಸ್ಥಾನದ ಕೆಲಸ ಹಾಗೂ ಯಜ್ಞಕ್ಕೆ ಸಹಾಯ ಮಾಡಲು ಗ್ರಾಮದ ಪುರೋಹಿತರೊಂದಿಗೆ ಹೊರಟಿದ್ದನೆಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. “ಅಂದು ಅವನು ಹೋಗುವುದಿಲ್ಲ ಎಂದರೂ ನಾನು ಬಲವಂತವಾಗಿ ಕಳುಹಿಸಿದೆ. ಅದೇ ನನ್ನ ದೊಡ್ಡ ತಪ್ಪು. ಮಗ ಶಾಶ್ವತವಾಗಿ ನಮ್ಮನ್ನು ಬಿಟ್ಟು ಹೋಗಿದ್ದಾನೆ. ನಾವು ಮಾತ್ರ ಜೀವಂತವಾಗಿದ್ದೇವೆ,” ಎಂದು ಕೃಷ್ಣ ಪಟೇಲ್ ಬರೆದಿದ್ದಾರೆ.

ಭಾನುವಾರ ತಡರಾತ್ರಿ ತಮ್ಮ ಮನೆಯ ಅಂಗಳದಲ್ಲಿಯೇ ಸೀರೆ ಕಟ್ಟಿ ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಸ್ಥಳದಲ್ಲಿ ಆತ್ಮಹತ್ಯೆ ಪತ್ರ ಪತ್ತೆಯಾಗಿದೆ ಎಂದು ಹೊರಠಾಣೆ ಉಸ್ತುವಾರಿ ಸತ್ಯಂ ಚೌಹಾಣ್ ತಿಳಿಸಿದ್ದಾರೆ.

“ಮಗನನ್ನು ಕಳೆದುಕೊಂಡ ದಿನದಿಂದ ಅವರ ಮುಖದಲ್ಲಿ ನಗುವೇ ಕಾಣಿಸಿರಲಿಲ್ಲ. ದೀರ್ಘಕಾಲದ ನೋವಿನ ಬಳಿಕ ನನ್ನ ಮನಸ್ಸು ಈಗ ಶಾಂತವಾಗಿದೆ. ನಾನು ಕೂಡಾ ಅವನೊಂದಿಗೆ ಹೋಗುತ್ತಿದ್ದೇನೆ,” ಎಂದು ಪತ್ರದಲ್ಲಿ ಬರೆದಿದ್ದಾರೆ.

ಇದಲ್ಲದೆ, ಆದಿತ್ಯನ ಅಪಘಾತದ ಬಳಿಕ ಬಂದ ಪರಿಹಾರದ ಹಣವನ್ನು ತಮ್ಮ ಹಿರಿಯ ಸಹೋದರರಾದ ಕುಲಭರ ಪಟೇಲ್ ಹಾಗೂ ಜಲಭರ ಪಟೇಲ್ ಅವರಿಗೆ ವರ್ಗಾಯಿಸಬೇಕೆಂದು ಅವರು ವಿನಂತಿಸಿದ್ದಾರೆ. “ನಾವು ಪ್ರಜ್ಞಾಪೂರ್ವಕವಾಗಿ ಮತ್ತು ಸ್ವಇಚ್ಛೆಯಿಂದ ನಮ್ಮನ್ನು ಶಿವನಿಗೆ ಅರ್ಪಿಸಿಕೊಳ್ಳುತ್ತಿದ್ದೇವೆ. ಇದಕ್ಕೆ ಯಾರೂ ಹೊಣೆಯಲ್ಲ. ಸಂತೋಷದಿಂದ ನಮ್ಮನ್ನು ಕಳುಹಿಸಿಕೊಡಿ,” ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಪೊಲೀಸರು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

You Might Also Like

ಆರ್​ಸಿಬಿ ವಿಜಯೋತ್ಸವ ಕಾಲ್ತುಳಿತ ಪ್ರಕರಣದಲ್ಲಿ ನಾಲ್ವರ ಬಂಧನ

ವೆಂಕಟೇಶ್ವರ ಸ್ವಾಮಿಯ ಕ್ಷಮೆ ಕೋರಿ 11 ದಿನದ ಪ್ರಾಯಶ್ಚಿತ ದೀಕ್ಷೆ ಕೈಗೊಂಡ ಡಿಸಿಎಂ ಪವನ್ ಕಲ್ಯಾಣ್

ಕುಡಿದ ಮತ್ತಿನಲ್ಲಿ ಸ್ಕೂಟರ್‌ಗೆ ಕಾರು ಡಿಕ್ಕಿ : ಇಬ್ಬರು ಬಿಜೆಪಿ ಕಾರ್ಯಕರ್ತರು ಸಾವು

ಆರೋಗ್ಯ ಸಮಸ್ಯೆ ಹಿನ್ನೆಲೆ ಜಾಮೀನು ವಿಸ್ತರಣೆ ಕೋರಿ ಕೇಜ್ರಿವಾಲ್ ಅರ್ಜಿ; ತುರ್ತು ವಿಚಾರಣೆಗೆ ನಿರಾಕರಿಸಿದ ಸುಪ್ರೀಂ

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು

TAGGED:Chhattisgarh
Share This Article
Facebook Copy Link Print
Previous Article ಹಿಂದೂ ಮನೆಯ ಮೇಲೆ ಕಲ್ಲು ತೂರಾಟ, ಚಿಕ್ಕಮಗಳೂರು ನಗರದಲ್ಲಿ ಉದ್ವಿಗ್ನ
Next Article ಆರ್‌ಎಸ್‌ಎಸ್ ಅಕ್ರಮ ಹಣ ಸಂಗ್ರಹ ಆರೋಪ : ಪ್ರಿಯಾಂಕ್ ಖರ್ಗೆಗೆ ವಿ.ಸೋಮಣ್ಣ ತಿರುಗೇಟು
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

ಕುಂದಾನಗರಿ ಬೆಳಗಾವಿಯಲ್ಲಿ ‘ಅಕ್ಕ ಪಡೆ’ಗೆ ಅದ್ಧೂರಿ ಚಾಲನೆ
ಬೆಳಗಾವಿ-Belagavi
February 17, 2026
ಚಿಕ್ಕಮಗಳೂರು ಕಲ್ಲು ತೂರಾಟ ಪ್ರಕರಣ : ಕಠಿಣ ಕ್ರಮಕ್ಕೆ ಸಿ.ಟಿ. ರವಿ ಆಗ್ರಹ
ರಾಜ್ಯ-Karnataka
February 17, 2026
DK Suresh
ಕಟ್ಟಾ ಕಾಂಗ್ರೆಸಿಗರು ನಿಯತ್ತಿನ ನಾಯಿಗಳು: ಸಚಿವ ಹೆಚ್.ಸಿ. ಮಹದೇವಪ್ಪಗೆ ಡಿ.ಕೆ. ಸುರೇಶ್ ತಿರುಗೇಟು
ರಾಜಕೀಯ | Politics
February 17, 2026
ಇಲಕಲ್ಲಿನಲ್ಲಿ ಬೈಕ್ ಗ್ಯಾರೇಜ್‌ಗೆ ಬೆಂಕಿ : 8ಕ್ಕೂ ಹೆಚ್ಚು ಬೈಕ್‌ಗಳು ಭಸ್ಮ
ರಾಜ್ಯ-Karnataka
February 17, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up