ಬೆಂಗಳೂರು: ರಾಜಧಾನಿ ಬೆಂಗಳೂರು (Bengaluru) ಸೇರಿದಂತೆ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಇಂದು ಕೂಡ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ.
ಐದು ಜಿಲ್ಲೆಗಳಿಗೆ ಭಾರಿ ಮಳೆಯ ಎಚ್ಚರಿಕೆ ನೀಡಿದ್ದು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಮೈಸೂರು & ಹಾವೇರಿ ಜೆಲ್ಲೆಗಳಲ್ಲಿ ಗಂಟೆಗೆ 50 kmph ವೇಗದಲ್ಲಿ ಗುಡುಗು ಸಹಿತ ಭಾರಿ ಮಳೆಯ ಮುನ್ಸೂಚನೆ ನೀಡಿದೆ.

ಇದೇ ವೇಳೆ ಎಲೆಕ್ಟ್ರಿಕ್ (Electric) ಉಪಕರಣಗಳನ್ನ ಆಫ್ ಮಾಡುವಂತೆ ಮನವಿ ಮಾಡಿದ್ದು, ಮಳೆ ಬರುವಾಗ ಶಿಥಿಲ ಕಟ್ಟಡ, ಮರದ ಕೆಳಗಡೆ ನಿಲ್ಲದಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.
ನಿನ್ನೆ ರಾಜ್ಯದಲ್ಲಿ ಎಷ್ಟೆಷ್ಟು ಮಳೆ?
- ಬೆಳಗಾವಿ : 3.0MM
* ಧಾರವಾಡ : 0.8MM
* ಕಾರಾವಾರ : 10.99MM
* ಗದಗ : 3.6MM
* ಹೊನ್ನಾವಾರ : 5.4MM
* ಶಿರಲಿ : 9.4MM
* ಚಿತ್ರದುರ್ಗ : 1.2MM
* ಮಂಗಳೂರು ನಗರ : 122.MM
* ಪಣಂಬೂರು : 8.6MM
* ಮುಲ್ಕಿ : 40MM
* ಮೈಸೂರು : 3.0 MM
* ಗೋಣಿಗೊಪ್ಪಲು : 31.5MM
* ಆಗುಂಬೆ : 73.5 MM

