ಬೆಂಗಳೂರು: ಹಾಟ್ ಸಿಟಿಯಾಗಿದ ಬೆಂಗಳೂರು ಈಗ ಕೂಲ್ ಸಿಟಿಯಾಗಿ ಬದಲಾಗಿದೆ. ನಗರದಲ್ಲಿ ಮಳೆ (Rain) ಅಬ್ಬರ ಜೋರಾಗಿದ್ದು, ಮರಗಳು (Trees) ರಸ್ತೆಗೆ ಉರುಳಿದ್ದು, ಮನೆಗಳಿಗೆ ನೀರು (Water) ನುಗ್ಗಿದೆ. ಇದರಿಂದಾಗಿ ಜನರು ಮತ್ತೆ ಪರದಾಡುವಂತಗಿದೆ.
ನಗರದ ಹಲವೆಡೆ ಮಳೆ ಅಬ್ಬರ ಜೋರಾಗಿದೆ. ಆರ್.ಆರ್. ನಗರ ಜ್ಞಾನಭಾರತಿ, ಏಪೋರ್ಟ್ ರಸ್ತೆ, ಸುಂಕದಕಟ್ಟೆ ಸೇರಿದಂತೆ ಹಲವೆಡೆ ರಸ್ತೆಗಳಲ್ಲಿ ಮಳೆ ನೀರು ತುಂಬಿ ಹರಿದಿದೆ.
ತಡರಾತ್ರಿ ಸುರಿದ ಮಳೆಗೆ ನಗರದ ವಾಸಿಗಳು ಹೈರಾಣಾಗಿದ್ದರೆ. ಸದ್ಯ ಇನ್ನು ಎರಡು ದಿನ ಮಳೆಯಾಗುವ ಸಾಧ್ಯತೆ ಇದೆ ಹವಾಮಾನ ಇಲಾಖೆ ತಿಳಿಸಿದೆ.
ಅನ್ನಪೂರ್ಣೇಶ್ವರಿ ನಗರದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ನಿದ್ದೆಯಿಲ್ಲದೇ ಸ್ಥಳೀಯರು ರಾತ್ರಿಯೆಲ್ಲ ನೀರನ್ನು ಹೊರಹಾಕುವ ಕೆಲಸ ಮಾಡಿದರು. ಮನೆಯ ವಸ್ತುಗಳೆಲ್ಲ ಮಳೆಗೆ ತೊಯ್ದಿವೆ.
ನಗರದ ಎಲ್ಲೆಲ್ಲಿ ಎಷ್ಟೆಷ್ಟು ಮಳೆ?
ಕೆಂಗೇರಿ – 89 ಮಿಮೀ.
ಪೀಣ್ಯ ಇಂಡಸ್ಟ್ರಿಯಲ್ ಏರಿಯಾ – 62 ಮಿಮೀ
ನಾಯಂಡನಹಳ್ಳಿ- 61.5 ಮಿಮೀ
ಹೆಮ್ಮಿಗೆಪುರ – 61 ಮಿಮೀ
ಆರ್.ಆರ್. ನಗರ – 60 ಮಿಮೀ
ಮಾರುತಿ ಮಂದಿರ – 51.50 ಮಿಮೀ
ವಿದ್ಯಾಪೀಠ – 50 ಮಿಮೀ
ಉತ್ತರಹಳ್ಳಿ- 42 ಮಿಮೀ
ಹಂಪಿನಗರ – 39 ಮಿಮೀ
ಯಲಹಂಕ- 38.50 ಮಿಮೀ
ಜಕ್ಕೂರು – 38 ಮಿಮೀ
ಕೊಟ್ಟಿಗೆಪಾಳ್ಯ – 33 ಮಿಮೀ
ಕೊಡಿಗೆಹಳ್ಳಿ – 28.50 ಮಿಮೀ
ನಂದಿನಿ ಲೇಔಟ್ – 28 ಮಿಮೀ