ಬೆಂಗಳೂರು : ಮುಂದಿನ ನಾಲ್ಕು ದಿನ ರಾಜ್ಯದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ, ಬೆಂಗಳೂರಲ್ಲಿ ಗುಡುಗು-ಮಿಂಚು ಸಹಿತ ಭಾರಿ ಮಳೆ ಸುರಿಯುವ ಮುನ್ಸೂಚನೆಯಿದ್ದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಅದರಲ್ಲೂ ಕರ್ನಾಟಕದ ಮಲೆನಾಡು ಶಿವಮೊಗ್ಗ, ಚಿಕ್ಕಮಗಳೂರು & ಕೊಡಗು, ಹಾಸನದ ಕೆಲವು ಭಾಗ ಸೇರಿದಂತೆ ಕರಾವಳಿ ಕರ್ನಾಟಕದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಸೀಮಿತವಾಗಿದ್ದ ಮಳೆಯ ಆರ್ಭಟ ಇದೀಗ ಕರ್ನಾಟಕದ ಒಳ ಭಾಗಗಳಿಗೂ ಆವರಿಸಲು ಸಜ್ಜಾಗಿದೆ.
ಮುಂಗಾರು ಮಳೆ ಮಾರುತಗಳು ಮತ್ತಷ್ಟ ಉಗ್ರರೂಪ ತಾಳಿವೆ. ಹೀಗಾಗಿ ನೈರುತ್ಯ ಮುಂಗಾರು ಮಳೆ 2 ವಾರದ ನಂತರ ಮತ್ತೆ ಚುರುಕಾಗಿದೆ. ಹೀಗೆ ಕರ್ನಾಟಕದ ಒಳನಾಡಿನಲ್ಲಿ ಮುಂದಿನ 5 ದಿನ ಭಾರಿ ಭರ್ಜರಿ ಮಳೆ ಬೀಳಲಿದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ. ಅಲ್ಲದೆ ಗುಡುಗು & ಸಿಡಿಲು ಸಹಿತ ಮಳೆಯಿಂದ ರಕ್ಷಿಸಿಕೊಳ್ಳಲು ಎಚ್ಚರಿಕೆಯ ವಹಿಸುವಂತೆ ಸೂಚಿಸಲಾಗಿದೆ.

