ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಸಂಪುಟ ಸರ್ಜರಿ ಚಲನವಲನ ವೇಗ ಪಡೆದಿದ್ದು, ಹೈಕಮಾಂಡ್ ಈಗಾಗಲೇ ಸಂಪುಟ ಪುನರ್‌ರಚನೆಗೆ ಪ್ರಾಥಮಿಕ ಹಸಿರು ನಿಶಾನೆ ನೀಡಿರುವ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆ ಮಾಜಿ ಮಂತ್ರಿ ರಾಜಣ್ಣ ಅವರು ಪುನಃ ಸಂಪುಟ ಸೇರುವ ಆಸೆ ಸ್ಪಷ್ಟಪಡಿಸಿದ್ದಾರೆ.
ಸಿಎಂ ಭೇಟಿಯಾಗಿ ಬೇಡಿಕೆ :
ಸಂಪುಟ ಸರ್ಜರಿ ಬಗ್ಗೆ ತೀವ್ರ ಚರ್ಚೆಗಳು ನಡೆಯುತ್ತಿರುವ ನಡುವೆ, ರಾಜಣ್ಣ ಅವರು ಇಂದು ಬೆಳಗ್ಗೆ ನೇರವಾಗಿ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ದೆಹಲಿ ಪ್ರಯಾಣಕ್ಕೂ ಮುನ್ನ ಸಿಎಂ ಅವರನ್ನು ಭೇಟಿ
ಕಾವೇರಿ ನಿವಾಸದಲ್ಲಿ ನಡೆದ ಈ ವಿಶೇಷ ಭೇಟಿಯಲ್ಲಿ ಅನೇಕ ರಾಜಕೀಯ ವಿಚಾರಗಳ ಚರ್ಚೆ
ರಾಜಣ್ಣ ಅವರು “ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಿ” ಎಂಬ ಮನವಿಯನ್ನು ಸ್ಪಷ್ಟವಾಗಿ ಮಂಡನೆ
ಹೈಕಮಾಂಡ್ ಜೊತೆ ಮಾತನಾಡುವಂತೆ ಮನವಿ
ಮಾತುಕತೆಯ ವೇಳೆಯಲ್ಲಿ ರಾಜಣ್ಣ ಅವರು, “ವಿರಿಷ್ಠರೊಂದಿಗೆ ನನ್ನ ವಿಷಯವನ್ನು ಚರ್ಚಿಸಿ, ನ್ಯಾಯಯುತ ಅವಕಾಶ ನೀಡಲು ಸಹಕರಿಸಬೇಕು” ಎಂದು ಸಿಎಂ ಅವರಿಗೆ ಮನವಿ ಮಾಡಿದರೆಂದು ಮೂಲಗಳು ತಿಳಿಸುತ್ತಿವೆ.
ಸದ್ಯ ಖರ್ಗೆ ಅಂಗಳದಲ್ಲಿರುವ ಸಂಪುಟ ಸರ್ಜರಿ ಚರ್ಚೆ
ಸದಾ ಚರ್ಚೆಯಲ್ಲಿರುವ ಸಂಪುಟ ವಿಸ್ತರಣೆ – ಸಂಪುಟ ಸರ್ಜರಿ ವಿಷಯ ಈಗ ಮಲ್ಲಿಕಾರ್ಜುನ ಖರ್ಗೆ ಅವರ ಕಡೆಯಲ್ಲಿದೆ ಎನ್ನುವ ಮಾಹಿತಿ. ಯಾವ ಮಂತ್ರಿಗಳನ್ನು ಹೊರಗೆ ಮಾಡಬೇಕು?ಯಾರನ್ನು ಒಳಗೊಂಡು ಹೊಸ ಸಮೀಕರಣ ರೂಪಿಸಬೇಕು? ಪ್ರದೇಶ, ಜಾತಿ, ರಾಜಕೀಯ ಬ್ಯಾಲೆನ್ಸ್ ಹೇಗೆ ನೋಡಿಕೊಳ್ಳಬೇಕು? ಈ ಎಲ್ಲದರ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಅಂತಿಮ ಚರ್ಚೆಗಳು ನಡೆಯುತ್ತಿವೆ.

