ಬೆಂಗಳೂರು: ಮಹಿಳಾ ನೌಕರರಿಗೆ (Women Employees) ತಿಂಗಳಿಗೆ ಒಂದು ದಿನ ವೇತನ ಸಹಿತ ಋತುಚಕ್ರ ರಜೆ (Menstrual Leave) ನೀಡುವ ಕುರಿತು ರಾಜ್ಯ ಸರ್ಕಾರ (State Government) ಜಾರಿಗೊಳಿಸಿದ್ದ ಮಹತ್ವದ ಆದೇಶಕ್ಕೆ ಹೈಕೋರ್ಟ್ (High Court) ಮಧ್ಯಂತರ ತಡೆ ನೀಡಿದೆ.
ಸರ್ಕಾರದ ಈ ಆದೇಶವನ್ನು ಪ್ರಶ್ನಿಸಿ ಹೋಟೆಲ್ ಅಸೋಸಿಯೇಷನ್ ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿ, ಚಳಿಗಾಲದ ರಜೆ ಬಳಿಕ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿದೆ. ಇದಾದ ನಂತರದವರೆಗೆ ಆದೇಶದ ಜಾರಿಗೆ ಮಧ್ಯಂತರ ತಡೆ ನೀಡಲಾಗಿದೆ.
2025ರ ನವೆಂಬರ್ 20ರಂದು ಸರ್ಕಾರವು ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಎಲ್ಲಾ ಸಂಸ್ಥೆಗಳಲ್ಲಿ ಮಹಿಳಾ ನೌಕರರಿಗೆ ತಿಂಗಳಿಗೆ ಒಂದು ದಿನ ಕಡ್ಡಾಯವಾಗಿ ವೇತನ ಸಹಿತ ಋತುಚಕ್ರ ರಜೆ ನೀಡಬೇಕು ಎಂದು ಆದೇಶಿಸಿತ್ತು. ಜೊತೆಗೆ ಕೆಲವು ಷರತ್ತುಗಳನ್ನು ವಿಧಿಸಿ ಸಂಸ್ಥೆಗಳು ಈ ರಜೆಯನ್ನು ನೀಡಬೇಕೆಂದು ನಿರ್ದೇಶಿಸಲಾಗಿತ್ತು. ಹೈಕೋರ್ಟ್ ತಡೆಯೊಂದಿಗೆ ಇದೀಗ ಸರ್ಕಾರದ ಆದೇಶದ ಭವಿಷ್ಯ ನ್ಯಾಯಾಲಯದ ಮುಂದಿನ ವಿಚಾರಣೆಗೆ ಕಾಯಬೇಕಾಗಿದೆ.

