ಮಂಡ್ಯ: ಹಿಂದೂ ಕಾರ್ಯಕರ್ತನೊಬ್ಬ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಅನಾಮಿಕ ವ್ಯಕ್ತಿಯ ಹಾಗೆ ಮುಸುಕು ಧರಿಸಿ ಪ್ರತಿಭಟನೆ ಮಾಡಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಈ ವಿಚಾರವಾಗಿ ಪ್ರತಿಭಟನೆ ಮಾಡಿದ್ದು, ನಾನು ಅನಾಮಿಕ ಮುಸುಕುಧಾರಿ ವ್ಯಕ್ತಿ, ಇಲ್ಲಿ ಬುರುಡೆ ತೋರಿಸಲು ಅಲ್ಲ, ಬುರುಡೆ ಬಿಡಲು ಬಂದಿದ್ದೇನೆ ಎಂದು ಬಿಲ್ ಬೋರ್ಡ್ ಹಿಡಿದುಕೊಂಡು ಧರ್ಮಸ್ಥಳದ ಅನಾಮಿಕ ವ್ಯಕ್ತಿಯ ಹಾಗೆ ಮಾಸ್ಕ್ ಧರಿಸಿಕೊಂಡು ಅಣಕಿಸಿದ್ದು, ವಿನೂತನವಾಗಿ ಪ್ರತಿಭಟನೆ ಮಾಡಿದ್ದಾರೆ. ಪ್ರತಿಭಟನೆ ಮಾಡಿದ ವ್ಯಕ್ತಿಗೆ ಇತರ ಕಾರ್ಯಕರ್ತರು ಸಹ ಸಾಥ್ ನೀಡಿದ್ದು, ಅಮಿತ್ ಶಾ ಅವರಿಗೆ ಬರೆದಿದ್ದ ರಕ್ತದಲ್ಲಿ ಬೆರಳಚ್ಚಿನ ಸಹಿ ಹಾಕಿದ ಪತ್ರವನ್ನ ಜಿಲ್ಲಾಧಿಕಾರಿಗೆ ಸಲ್ಲಿಸಿದ್ದಾರೆ.
ಧರ್ಮಸ್ಥಳ ಹಿಂದುಗಳ ಪುಣ್ಯ ಕ್ಷೇತ್ರ. ನಂಬಿಕೆ ಹಾಗೂ ಭಕ್ತಿಗೆ ಹೆಸರುವಾಸಿಯಾದ ಸ್ಥಳವಾಗಿದೆ. ಅನೇಕ ಜನರು ಧರ್ಮಸ್ಥಳದ ಹೆಸರನ್ನ ಕೆಡಿಸಲು, ಪಾವಿತ್ರ್ಯತೆಯನ್ನ ಹಾಳು ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಈ ಎಲ್ಲಾ ಘಟನೆಗಳ ಹಿಂದೆ ಕೇರಳದ ಕಮ್ಯುನಿಸ್ಟ್ ಪಕ್ಷದ ಕೈವಾಡ ಇದೆ ಎಂದು ಬಿಜೆಪಿ ಮುಖಂಡ ಶಿವಕುಮಾರ್ ಅವರು ಆರೋಪ ಮಾಡಿದ್ದಾರೆ. ಇನ್ನು ಧರ್ಮಸ್ಥಳದ ವಿಚಾರವಾಗಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಬೇಕು ಹಾಗೂ ಎನ್‌ಐಎ ತನಿಖೆಗೆ ಆದೇಶ ಮಾಡಬೇಕು ಹಾಗೂ ನ್ಯಾಯ ಒದಗಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.
- ಅಮೆರಿಕಾ-ಇರಾನ್ ಮಾತುಕತೆ : ಇರಾನ್ ಇಂಧನ ತಾಣಗಳ ಮೇಲಿನ ದಾಳಿ ಮುಂದೂಡಿದ ಟ್ರಂಪ್
- ದಾವಣಗೆರೆ ದಕ್ಷಿಣ ಕ್ಷೇತ್ರ ಉಪಚುನಾವಣೆ : ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಸಮರ್ಥ ಶಾಮನೂರು
- ಬಾಗಲಕೋಟೆ ಉಪಚುನಾವಣೆ : ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ನಾಮಪತ್ರ ಸಲ್ಲಿಕೆ
- ಪಶ್ಚಿಮ ಏಷ್ಯಾ ಉದ್ವಿಗ್ನತೆ ನಡುವೆಯೂ ಇಂಧನದ ದೃಷ್ಟಿಯಿಂದ ಭಾರತ ಸುರಕ್ಷಿತವಾಗಿದೆ : ಪ್ರಧಾನಿ ಮೋದಿ
- ವಾಣಿಜ್ಯ ಸಿಲಿಂಡರ್ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಹೋಟೆಲ್ ಉದ್ಯಮಕ್ಕೆ ಕೊನೆಗೂ ರಿಲೀಫ್

