ಹಾಸನ: 12 ವರ್ಷದ ಬಾಲಕನ ಬರ್ಬರವಾಗಿ ಕೊಲೆ (Murder) ಮಾಡಿ ರೈಲ್ವೆ ಹಳಿ (Railway Track) ಬಳಿ ಶವ ಎಸೆದು ಹೋಗಿರುವ ಘಟನೆ ಹಾಸನ ಜಿಲ್ಲೆಯ ಹೊರವಲಯದ ಬಸವನಹಳ್ಳಿ ಬಳಿ ನಡೆದಿದೆ.
ಮೃತ ಬಾಲಕನನ್ನು ಕುಶಾಲ್ ಗೌಡ ಎಂದು ಗುರುತಿಸಲಾಗಿದೆ. ಚಿಕ್ಕಹೊನ್ನೇನಹಳ್ಳಿಯ ವೆಂಕಟೇಶ್ ಹಾಗೂ ರೂಪಾ ದಂಪತಿಯ ಪುತ್ರನಾಗಿರುವ ಕುಶಾಲ್ ಆಟವಾಡುವ ವೇಳೆ ಕಾಣೆಯಾಗಿದ್ದಾನೆ. ಇದನ್ನೂ ಓದಿ: ದರ್ಶನ್ ಭೇಟಿಗೆ ಪರಪ್ಪನ ಅಗ್ರಹಾರಕ್ಕೆ ಮಗನ ಜೊತೆ ಬಂದ ವಿಜಯಲಕ್ಷ್ಮಿ

ಮಂಗಳವಾರ (ಜು.09) ಸಂಜೆ ಮಕ್ಕಳ ಜೊತೆ ಕಣ್ಣಾಮುಚ್ಚಾಲೆ ಆಡುತ್ತಿದ್ದ ವೇಳೆ ಬಚ್ಚಿಟ್ಟುಕೊಳ್ಳಲು ಹೋಗಿ ಕಾಣೆಯಾಗಿದ್ದನಂತೆ. ಸಂಜೆಯಾದರೂ ಮಗ ವಾಪಸ್ ಬಾರದ ಹಿನ್ನೆಲೆ ಪೋಷಕರು ಹುಡುಕಾಟ ನಡೆಸಿದ್ದಾರೆ. ಇತ್ತೀಚೆಗೆ ಚಿರತೆ ಕಾಟ ಕೂಡ ಹೆಚ್ಚಾದ ಹಿನ್ನಲೆ ಅದೇ ಹೊತ್ತೊಯ್ದಿರಬಹುದೆಂದು ಪೋಷಕರ ಜೊತೆ ಅರಣ್ಯ ಇಲಾಖೆ ಸಿಬ್ಬಂದಿ ಕೂಡ ಸೇರಿಕೊಂಡು ಶೋಧ ನಡೆಸಿದ್ದರು. ಆದರೆ, ಎಲ್ಲಿಯೂ ಪತ್ತೆಯಾಗಿರಲಿಲ್ಲ.
ಇಂದು(ಜು.10) ಮಧ್ಯಾಹ್ನ ಪೊದೆಯೊಂದರಲ್ಲಿ ಕುಶಾಲ್ ಗೌಡ ಮೃತದೇಹ ಪತ್ತೆಯಾಗಿದ್ದು, ರೈಲು ಡಿಕ್ಕಿಯಾಗಿ ಸತ್ತಿದ್ದಾನೆಂದು ಬಿಂಬಿಸಲು ಶವ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಇನ್ನು ವಿಷಯ ತಿಳಿದು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: AAP ಪಕ್ಷದ ಮಾಜಿ ಸಚಿವ ರಾಜ್ಕುಮಾರ್ ಆನಂದ್ ಕಮಲ ಸೇರ್ಪಡೆ
ಈ ಕುರಿತು ಹಾಸನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಮನೆ ಉಟಕ್ಕೆ ಅವಕಾಶ ನೀಡುವಂತೆ ಸಲ್ಲಿಸಿದ ಅರ್ಜಿ ವಿಚಾರಣೆ ಮುಂದುಡಿಕೆ- ಜುಲೈ 18ರವರೆಗೆ ದರ್ಶನ್ಗೆ ಜೈಲೂಟವೇ ಗತಿ

