ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜೈಲು ಸೇರಿ ತಿಂಗಳು ಕಳೆದಿದೆ. ಪರಪ್ಪನ ಅಗ್ರಹಾರಕ್ಕೆ ದರ್ಶನ್ ನೋಡಲು ಕುಟುಂಬಸ್ಥರು, ಸ್ನೇಹಿತರು ಬರ್ತಾನೆ ಇದ್ದಾರೆ. ಈವರೆಗೆ ದರ್ಶನ್ ನೋಡಲು ಬಂದವರ ಒಟ್ಟು ಸಂಖ್ಯೆ ಎಷ್ಟು ಗೊತ್ತಾ?
ನಟ ದರ್ಶನ್ ನೋಡಲೆಂದೇ ಪರಪ್ಪನ ಅಗ್ರಹಾರದ ಸೆಂಟ್ರೆಲ್ ಜೈಲಿಗೆ ಅನೇಕರು ಬಂದಿದ್ದಾರೆ. ದರ್ಶನ್ ನೋಡಲು ಬರುವವರಿಗೆಲ್ಲಾ ಅನುಮತಿ ಸಿಗ್ತಿದೆ. ದರ್ಶನ್ ಗಾಗಿ ಜೈಲಾಧಿಕಾರಿಗಳು ರೂಲ್ಸ್ ಬ್ರೇಕ್ ಮಾಡಿದ್ರಾ ಎನ್ನುವ ಮಾತುಗಳು ಕೇಳಿ ಬಂದಿತ್ತು. ಆರ್ ಟಿಐ ಕಾರ್ಯಕರ್ತ ನರಸಿಂಹಮೂರ್ತಿ ಸಲ್ಲಿಸಿದ ಅರ್ಜಿಯಿಂದಾಗಿ ನಟ ದರ್ಶನ್ ಭೇಟಿಗೆ ಬಂದವರ ಲಿಸ್ಟ್ ಹೊರಬಿದ್ದಿದೆ.
ದರ್ಶನ್ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತಾಡಿದ ಆರ್ ಟಿಐ ಕಾರ್ಯಕರ್ತ ನರಸಿಂಹಮೂರ್ತಿ ನಟ ದರ್ಶನ್ ಗಾಗಿ ನಿಯಮ ಉಲ್ಲಂಘನೆ ಮಾಡಲಾಗಿದೆ ಎಂದಿದ್ದಾರೆ. ವಿಚಾರಣಾಧೀನ ಕೈದಿಗಳ ಭೇಟಿಗೆ ಹತ್ತಿರದ ಸಂಬಂಧಿಗಳಿಗೆ ಮಾತ್ರ ಅವಕಾಶಕ್ಕೆ ಕೋರ್ಟ್ ಆದೇಶವಿದೆ ಎಂದ್ರು. ಆದ್ರೆ, ಜೈಲು ಅಧಿಕಾರಿಗಳು ದರ್ಶನ್ ಭೇಟಿಗೆ ತೆರಳುವ ಸ್ನೇಹಿತರಿಗೂ ಅವಕಾಶ ನೀಡಿದ್ದಾರೆ. ಕೋರ್ಟ್ ಆದೇಶದಲ್ಲಿ ಐವರಿಗೆ ಅವಕಾಶ ನೀಡಿ ಅರ್ಧ ಗಂಟೆ ಸಮಯ ನಿಗಧಿ ಮಾಡಿದೆ. ಆದ್ರೆ ಜೈಲು ಅಧಿಕಾರಿಗಳು ಜೈಲು ನಿಯಮಗಳನ್ನ ಗಾಳಿಗೆ ತೂರಿ ಭೇಟಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದರ ಜೊತೆಗೆ ದಾಖಲೆಗಳನ್ನು ಸೃಷ್ಟಿ ಮಾಡಿದ್ದಾರೆ ಎಂದು ಆರೋಪಿಸಿದರು.
ಜೂನ್ 25 ರಿಂದ ಜುಲೈ 26ರ ಅವಧಿಯಲ್ಲಿ 30 ಜನ ಜೈಲಿನಲ್ಲಿರುವ ದರ್ಶನ್ ಅವರನ್ನು ಭೇಟಿ ಆಗಿದ್ದಾರೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ನಾಲ್ಕು ಬಾರಿ ಭೇಟಿಯಾಗಿದ್ದಾರೆ. ದರ್ಶನ್ ತಾಯಿ ಮೀನಾ ತೂಗೂದೀಪ್, ಸಹೋದರ ದಿನಕರ್ ತೂಗುದೀಪ್ ಜುಲೈ 1 ರಂದು ಭೇಟಿ ಆಗಿದ್ರು.
ದರ್ಶನ್ ಸಹೋದರ ದಿನಕರ್ ತೂಗದೀಪ್ 3 ಬಾರಿ ಜೈಲಿಗೆ ಬಂದು ದರ್ಶನ್ ಅವರನ್ನು ಭೇಟಿ ಆಗಿದ್ದಾರೆ. ಆರ್ ಟಿ ಐ ಅರ್ಜಿಯಲ್ಲಿ ದರ್ಶನ್ ಭೇಟಿ ಲಿಸ್ಟ್ ಹೊರಬಿದ್ದಿದೆ. ಜೂನ್ 24 ರಂದು ಪತ್ನಿ ವಿಜಯಲಕ್ಷ್ಮಿ ಬಂದಿದ್ರು. ಬಳಿಕ ಜೂನ್ 29 ನಟಿ ರಕ್ಷಿತಾ ಅವರು ಬುಕ್ ನಲ್ಲಿ ಸ್ನೇಹಿತೆ ಎಂದು ನಮೂದಿಸಿ ಭೇಟಿಯಾಗಿದ್ದಾರೆ.
ಜುಲೈ 1ರಂದು ದರ್ಶನ್ ತಾಯಿ ಹಾಗೂ ದಿನಕರ್ ಭೇಟಿಯಾಗಿದ್ದು, ಜುಲೈ 2 ರಂದು ಪವಿತ್ರಾ ಗೌಡ ಗೆಳತಿ ಸಮತಾ ಭೇಟಿ ದರ್ಶನ್ ಅವರನ್ನು ಭೇಟಿಯಾಗಿದ್ರು. ಜೈಲಾಧಿಕಾರಿಗಳ ಪುಸ್ತಕದಲ್ಲಿ ದರ್ಶನ್ ತಂಗಿ ಎಂದು ನಮೂದಿಸಿ ಭೇಟಿಯಾಗಿದ್ದಾರೆ ಎನ್ನಲಾಗ್ತಿದೆ.
ಜುಲೈ 10 ರಂದು ಪತ್ನಿ ವಿಜಯಲಕ್ಷ್ಮಿ, ಮಗ ಹಾಗೂ ಸುಶಾಂತ್ ಭೇಟಿಯಾಗಿದ್ರು. ಜುಲೈ 11 ರಂದು ನಟ ಧನ್ವಿರ್, ಚಂದ್ರಶೇಖರ್, ನಾಗೇಶ್, ಸುನೀಲ್, ಶಿವಕುಮಾರ್ ದರ್ಶನ್ ಅವರನ್ನು ಭೇಟಿಯಾಗಿದ್ರು. ಮತ್ತೆ ಜುಲೈ15 ರಂದು ಪತ್ನಿ ವಿಜಯಲಕ್ಷ್ಮಿ, ನಿತೀನ್, ದಿನಕರ್, ಅನುಶ್ ಶೆಟ್ಟಿ ದರ್ಶನ್ ಅವರನ್ನು ಭೇಟಿಯಾದ್ರು.
ಜುಲೈ19 ರಂದು ದರ್ಶನ್ ಪುಟ್ಣಣ್ಣಯ್ಯ, ರಾಘವ, ನಿರ್ದೇಶಕ ತರುಣ್ ಕಿಶೋರ್ ಜೊತೆಗೆ ಹೇಮಂತ, ನವೀನ, ಕಿರ್ತನ್, ಕುಮಾರ್ ಎಂಬುವರು ನಟ ದರ್ಶನ್ ಅವರನ್ನು ಜೈಲಿನಲ್ಲಿ ಭೇಟಿಯಾಗಿದ್ರು. ಜುಲೈ 22 ರಂದು ವಿನೋದ್, ದಿನಕರ್, ಸುಶಾಂತ ನಾಯ್ಡು, ಶ್ರೀನಿವಾಸ್, ವಿಜಯಲಕ್ಷ್ಮಿ ಭೇಟಿ ಮಾಡಿದ್ರು.
ಜುಲೈ 25 ರಂದು ಸಾಧುಕೋಕಿಲ, ಸಚ್ಚಿದಾನಂದ, ಹರಿಕೃಷ್ಣ, ರಾಮಮೂರ್ತಿ, ಭೋಜರಾಜ ಭೇಟಿಯಾಗಿದ್ದಾರೆ. ಒಟ್ಟು 30 ಮಂದಿಯಿಂದ ದರ್ಶನ್ ಭೇಟಿಯಾಗಿದೆ. ಆರ್ ಟಿಐ ಕಾರ್ಯಕರ್ತ ನರಸಿಂಹಮೂರ್ತಿ ಸಲ್ಲಿಸಿದ ಆರ್ ಟಿಐ ಅರ್ಜಿಗೆ ಜೈಲು ಅಧಿಕಾರಿಗಳು ಉತ್ತರ ನೀಡಿದ್ದಾರೆ.
.