ಬೆಂಗಳೂರು : ಪತ್ನಿಯನ್ನ ತಾನೇ ಕೊಲೆ ಮಾಡಿ ನಾಟಕ ಆಡ್ತಿದ್ದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ..ಕೂಲಿ ಕೆಲಸ ಮಾಡಿಕೊಂಡು ಪತ್ನಿ ಮಮ್ತಾಜ್ ಜೊತೆ ವಾಸವಿದ್ದ ಮೆಹಬೂಬ್ ಸಾಬ್ ಆ.24ರಂದು ರಾತ್ರಿ 8.30ರ ಸುಮಾರಿನಲ್ಲಿ ಪೊಲೀಸ್ ಠಾಣೆಗೆ ಬಂದು ನನ್ನ ಪತ್ನಿ ಕೊಲೆಯಾಗಿದ್ದಾಳೆ, ಯಾರೋ ನನ್ನ ಹೆಂಡಿತಿಯನ್ನು ಕೊಲೆ ಮಾಡಿದ್ದಾರೆ ಎಂದು ದೂರು ಕೊಟ್ಟಿದ್ದ,
ಆದರೆ ಪೊಲೀಸರಿಗೆ ಈತನ ಮಾತಿನ ಮೇಲೆ ಅನುಮಾನ ಮೂಡುತ್ತೆ,ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಲ್ಲ, ಪತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಅಸಲಿ ಬಣ್ಣ ಬಯಲಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸ ತಂಡ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದಾಗ ದೂರು ಕೊಟ್ಟಿರುವ ವ್ಯಕ್ತಿಯೇ ತನ್ನ ಹೆಂಡತಿಯನ್ನು ಕೊಲೆ ಮಾಡಿರುವುದು ಗೊತ್ತಾಗಿದೆ.

