ರಾಜಸ್ಥಾನ: ಜೈಸಲ್ಮೇರ್ ಜಿಲ್ಲೆಯಲ್ಲಿ (Jaislemer) ಗುರುವಾರ ಬೆಳಗ್ಗೆ 10:20ರ ಸುಮಾರಿಗೆ ಮಾನವ (Human) ರಹಿತ ವಿಮಾನವೊಂದು (Aeroplane) ಪತನಗೊಂಡಿದೆ. ಜೈಸಲ್ಮೇರ್‌ನಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ಪಿತಾಲಾ ಗ್ರಾಮದ ಬಳಿ ವಿಮಾನ ಅಪಘಾತ ಸಂಭವಿಸಿದೆ.
“ಭಾರತೀಯ ವಾಯುಪಡೆಯ ರಿಮೋಟ್ ಪೈಲಟ್ ಏರ್‌ಕ್ರಾಫ್ಟ್ ಇಂದು ಜೈಸಲ್ಮೇರ್ ಬಳಿ ದಿನನಿತ್ಯದ ತರಬೇತಿಯ ಸಮಯದಲ್ಲಿ ಅಪಘಾತಕ್ಕೀಡಾಗಿದೆ. ಇದನ್ನೂ ಓದಿ: ಬಿಹಾರದಲ್ಲಿ ಗುಂಡಿಕ್ಕಿ ಜೆಡಿಯು ನಾಯಕನ ಹತ್ಯೆ
ಭಾರತೀಯ ವಾಯುಪಡೆಯ ವಿಚಕ್ಷಣ ವಿಮಾನವು ಜೈಸಲ್ಮೇರ್‌ನ ಸಿಪ್ಲಾ ಗ್ರಾಮ ಪಂಚಾಯತ್‌ನ ಬಹಲ್ ಕಿ ಧನಿ ಬಳಿ ಪತನಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿರ್ಜನ ಪ್ರದೇಶ ಆದರಿಂದ ಯಾವುದೇ ಪ್ರಾಣಹಾನಿಯಾಗಿಲ್ಲ.
. ಘಟನೆ ಕುರಿತು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ನಟಿ ಅಮೂಲ್ಯ ಮಾವ, ಬಿಜೆಪಿ ಮುಖಂಡ ಮನೆ ಮೇಲೆ ಚುನಾವಣಾಧಿಕಾರಿಗಳ ದಾಳಿ