ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ (Silicon City) ಈಗಾಗಲೇ ತಾಪಮಾನ ಏರಿಕೆಯಾಗುತ್ತಿದ್ದು, ಬಿರು ಬಿಸಿಲು ನಿಮ್ಮ ಕಿಡ್ನಿ ಡ್ಯಾಮೇಜ್ ಮಾಡುತ್ತಿದ್ದರೆ ಎಚ್ಚೆತುಕೊಳ್ಳುವುದು ಒಳ್ಳೆಯದು. ನಗರದಲ್ಲಿ ತಾಮಪಾನ ಏರಿಕೆಯಿಂದ ಕೇವಲ ಚಿಕ್ಕ ಮಕ್ಕಳಲ್ಲ ದೊಡ್ಡವರಿಗೆ ಸಹ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದ್ದು ಆದರಲ್ಲಿ ಕಿಡ್ನಿ ಸಮಸ್ಯೆ (Kidney Problems) ಪ್ರಕರಣಗಳು ಅತೀ ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗಿದೆ.
ಬಿಸಿಲು ಹೆಚ್ಚಾಗಿರುವುದರಿಂದ ಕಿಡ್ನಿ ಸ್ಟೋನ್ ಪ್ರಕರಣಗಳು ಹೆಚ್ಚಾಗುತ್ತಿವೆ. ಹಾಗಾದರೇ ಕಿಡ್ನಿ ಸ್ಟೋನ್‌ಗೆ ಬಿರು ಬಿಸಿಲಿಗೆ ಇರುವ ನಂಟೇನು? ಬೇಸಿಗೆಯಲ್ಲಿ ಕಿಡ್ನಿ ಸ್ಟೋನ್ ಉಂಟಾಗಲು ಪ್ರಮುಖ ಕಾರಣವೆಂದು ನೋಡುವುದದಾದರೇ, ಮೊದಲನೆಯ ಪ್ರಮುಖ ಕಾರಣವೆಂದರೆ ದೇಹದಲ್ಲಿನ ನಿರ್ಜಲೀಕರಣ. ಸಾಮನ್ಯಾವಗಿ ಮನುಷ್ಯನ ದೇಹಕ್ಕೆ ದಿನವೊಂದಕ್ಕೆ 3ರಿಂದ 4 ಲೀ. ನೀರು ಅಗತ್ಯವಿರುತ್ತದೆ. ಜೊತೆಗೆ ಬೇಸಿಗೆಯಲ್ಲಿ ಬೆವರು ಹೆಚ್ಚಾಗಿ ಹೋಗುವ ಜೊತೆಗೆ ದೇಹದಲ್ಲಿರುವ ನೀರಿನ ಅಂಶವನ್ನು ಕಸಿದುಕೊಳ್ಳುತ್ತದೆ. ಇದು ನೇರವಾಗಿ ಮೂತ್ರದ ಸೋಂಕು ಹಾಗೂ ಕಿಡ್ನಿ ಸ್ಟೊನ್‌ಗೆ ಕಾರಣವಾಗುತ್ತದೆ.
ಮೂತ್ರದಿಂದ ಫಿಲ್ಟರ್ ಮಾಡಲಾದ ಕ್ಯಾಲ್ಸಿಯಂ ಮತ್ತು ಇತರ ವಸ್ತುಗಳಿಂದ ಕಿಡ್ನಿಸ್ಟೋನ್ ರೂಪುಗೊಳ್ಳುತ್ತವೆ. ವಿಶೇಷವಾಗಿ ಮಹಿಳೆಯರಲ್ಲಿ ಉರಿ ಮೂತ್ರದ ಸಮಸ್ಯೆ ಹೆಚ್ಚಾಗಿ ಇರುತ್ತದೆ. ಆದರೆ ಪುರುಷರಲ್ಲಿ ಹೆಚ್ಚಾಗಿ ಕಿಡ್ನಿ ಸ್ಟೋನ್ ಕಾಣಿಸಿಕೊಳ್ಳುತ್ತದೆ.
ಕ್ರಮಗಳೇನು?
-ಮೊದಲನೇಯದಾಗಿ ಮೂತ್ರ ವಿಸರ್ಜನೆಯನ್ನು ತಡೆಯಬಾರದು.
-ದಿನಕ್ಕೆ 2ರಿಂದ 3 ಲೀ.ನಷ್ಟು ನೀರು ಅವಶ್ಯವಾಗಿ ಕುಡಿಯಬೇಕು.
ಸುಮಾರು 49 ರಿಂದ 50% ಕೇಸುಗಳ ಸಂಖ್ಯೆ ಹೆಚ್ಚಾಗಿದ್ದು, ಸಾಮಾನ್ಯ ಅವಧಿಗಿಂತ ಬೇಸಿಗೆಯಲ್ಲಿ ಶೇ.50 ರಷ್ಟು ಪ್ರಕರಣ ಹೆಚ್ಚು ಕಂಡು ಬಂದಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ತಜ್ಙ ವೈದ್ಯರು ಸದ್ಯ ಎಚ್ಚರವಾಗಿರ ಬೇಕು ಎಂದು ಸಲಹೆ ನೀಡಿದ್ದಾರೆ.

