By using this site, you agree to the Privacy Policy and Terms of Use.
Accept
Sampoorna Vaani NewsSampoorna Vaani NewsSampoorna Vaani News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: ಇಂದು ನಡೆದ ರಾಜ್ಯದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು
Share
Font ResizerAa
Font ResizerAa
Sampoorna Vaani NewsSampoorna Vaani News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.
Sampoorna Vaani News > Blog > ರಾಜ್ಯ-Karnataka > ಇಂದು ನಡೆದ ರಾಜ್ಯದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು
ರಾಜ್ಯ-KarnatakaLatest

ಇಂದು ನಡೆದ ರಾಜ್ಯದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು

Important decisions of the state cabinet meeting held today

Published September 11, 2025
Share
8 Min Read
Cabinet Meeting
SHARE

•”ಕರ್ನಾಟಕ ಉಪಖನಿಜ ರಿಯಾಯಿತಿ (ತಿದ್ದುಪಡಿ) ನಿಯಮಗಳು, 2025″ಕ್ಕೆ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಧರಿಸಿದೆ.

•ಸಾರ್ವಜನಿಕ ಸರ್ಕಾರಿ ಕಾರ್ಯಕ್ರಮಗಳಲ್ಲಿ ಆಹ್ವಾನಪತ್ರಿಕೆ ಮತ್ತು ವೇದಿಕೆ ಮೇಲೆ ಆಸೀನರಾಗುವ ಗಣ್ಯರು ಸೇರಿದಂತೆ ವಿವಿಧ ಶಿಷ್ಟಾಚಾರದ ಬಗ್ಗೆ ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಲು ಸಚಿವ ಸಂಪುಟ ಅನುಮೋದಿಸಿದೆ.

•PM KUSUM-B ಯೋಜನೆಯಡಿ Stand-alone / off Grid Solar Pump ಸ್ಥಾಪನೆಗೆ ಹಿಂದಿನ ಸರ್ಕಾರಿ ಆದೇಶದ ಮಾರ್ಪಾಡು ಮಾಡುವ ಬಗ್ಗೆ- ವಿದ್ಯುತ್ ಜಾಲದಿಂದ ಪಂಪ್ ಸೆಟ್ ಇರುವ ದೂರವನ್ನು ಲೆಕ್ಕಿಸದೆ ಕಾರ್ಯಗತಗೊಳಿಸಲಾದ ಪಂಪ್ ಸೆಟ್ಗಳ ವೆಚ್ಚದ ಶೇ.50 ರಷ್ಟನ್ನು ರಾಜ್ಯ ಸರ್ಕಾರದ ಸಹಾಯಧನ ಆಗಿರಬೇಕು ಎಂದು ಸಚಿವ ಸಂಪುಟ ನಿರ್ಣಯಿಸಿದೆ.

•“ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆಯು ಪರಿಶೋಧಿಸಿ, (vetted) ನೀಡಿರುವ ಇದರೊಂದಿಗೆ ಲಗತ್ತಿಸಿರುವ ಅನುಬಂಧದಲ್ಲಿರುವÀ “The Bio-Diesel (B-100) Blending with High Speed Diesel for Transportation Purposes (Licensing) Order, 2022 ರ ಕರಡು ಅಧಿಸೂಚನೆಗೆ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಣಯಿಸಿದೆ.

•ಮಾಲೂರು, ಕೊರಟಗೆರೆ, ಮಾಗಡಿ, ಕುಶಾಲನಗರ, ಜಗಳೂರು, ಸವಣೂರು, ರಾಮದುರ್ಗ ಮತ್ತು ಸವದತ್ತಿ ತಾಲ್ಲೂಕು ಮಟ್ಟದ ಆಸ್ಪತ್ರೆಗಳನ್ನು ಹಾಗೂ ದಾವಣಗೆರೆ ಜಿಲ್ಲಾ ಆಸ್ಪತ್ರೆ ಮತ್ತು ಮಂಗಳೂರಿನ ವೆನ್ಹಾಕ್ ಆಸ್ಪತ್ರೆಗಳ ನವೀಕರಣ ಕಾಮಗಾರಿಗಳನ್ನು ಒಟ್ಟು ರೂ.542.00 ಕೋಟಿಗಳ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಅನುಮೋದನೆ ನೀಡಲಾಗಿದೆ.

•ವಿಜಯಪುರ ಜಿಲ್ಲೆಯಲ್ಲಿ ಅಭಿವೃದ್ಧಿಪಡಿಸುತ್ತಿರುವ ವಿಜಯಪುರ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣದ ಕಾಮಗಾರಿಗಳ ಕೋಟಿಗಳ ಪರಿಷ್ಕೃತ ಅಭಿವೃದ್ಧಿ ಕಾಮಗಾರಿಗಳ ಒಟ್ಟು 618.75 ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಮೊದಲು ಸರ್ಕಾರದ ಮುಖ್ಯಕಾರ್ಯದರ್ಶಿಗಳಿಂದ ಯೋಜನೆಯ ಪ್ರಗತಿ ಪರಿಶೀಲನಾ ವರದಿಯನ್ನು ಸಚಿವ ಸಂಪುಟಕ್ಕೆ ನೀಡಲು ಸೂಚನೆ ನೀಡಲಾಗಿದೆ.

•35 ಸಂಚಾರಿ ಆರೋಗ್ಯ ಘಟಕಗಳ ದುರಸ್ತಿಯನ್ನು ಕೈಗೊಂಡು ಹೊಸದಾಗಿ ವೈದ್ಯಕೀಯ ಉಪಕರಣಗಳನ್ನು ಅಳವಡಿಸಿ, ಸದರಿ ವಾಹನಗಳನ್ನು Connected Health Eco-System ಸಂಚಾರಿ ಆರೋಗ್ಯ ಘಟಕಗಳಾಗಿ ರೂ. 12.25 ಕೋಟಿಗಳ ವೆಚ್ಚದಲ್ಲಿ ಪರಿವರ್ತಿಸಲು ಹಾಗೂ ರೂ. 14.70 ಕೋಟಿಗಳ ಅಂದಾಜು ಮೊತ್ತದಲ್ಲಿ ಸದರಿ ವಾಹನಗಳ ವಾರ್ಷಿಕ ನಿರ್ವಹಣೆ ಮಾಡಲು ಅನುಮೋದನೆ ನೀಡಲಾಗಿದೆ.

•ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಯ ಸುಂಕ ಸಂಗ್ರಹಣೆಯನ್ನು ಹೆಚ್ಚಿಸಲು “Labour Cess Tracking & Monitoring System Software” ಎಂಬ ನೂತನ ತಂತ್ರಾಂಶವನ್ನು 28.19 ಕೋಟಿಗಳ ಅಂದಾಜು ಮೊತ್ತದಲ್ಲಿ ಅಭಿವೃದ್ಧಿಪಡಿಸುವ ಬಗ್ಗೆ ಸಚಿವ ಸಂಪುಟ ಮಂಜೂರಾತಿ ನೀಡಿ, ಈ ವೆಚ್ಚದ ಬಗ್ಗೆ ಪುನರ್ ಪರಿಶೀಲನೆ ನಡೆಸಲು ಸೂಚಿಸಲಾಯಿತು.

•ರಾಜ್ಯಾದ್ಯಂತ “ಜಿಲ್ಲಾ ಕಾರ್ಮಿಕರ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘ (ನಿಯಮಿತ) ವನ್ನು ಸ್ಥಾಪಿಸಲು ಹಾಗೂ ಸದರಿ ಸಂಘಗಳನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ರಚಿಸಲು ಹಾಗೂ ಎಲ್ಲಾ ಜಿಲ್ಲೆಗಳಲ್ಲಿ ರಚಿಸುವ’’ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘನಿ.ಕ್ಕೆ ಆರ್ಥಿಕ ಇಲಾಖೆಯಿಂದ ಕೆಟಿಪಿಪಿ ಕಾಯ್ದೆಯನ್ವಯ 4ಜಿ ವಿನಾಯ್ತಿ ನೀಡಲು ಸಚಿವ ಸಂಪುಟ ನಿರ್ಧರಿಸಿದೆ.

•ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ 1000 ಹಾಸಿಗೆ ಸಾಮರ್ಥ್ಯದ ಹೆಚ್ಚುವರಿ ವಾರ್ಡ್ಗಳಿಗೆ ಅವಶ್ಯವಿರುವ ಉಪಕರಣಗಳು, ಪೀಠೋಪಕರಣಗಳನ್ನು ರೂ. 20.05 ಕೋಟಿಗಳ ಅಂದಾಜು ಮೊತ್ತದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

•ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ರಾಜ್ಯದ ಕ್ಷೇತ್ರಗಳಲ್ಲಿ ವಿವಿಧ ವಿಧಾನಸಭಾಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರು ವಾಸಿಸುತ್ತಿರುವ ನಗರ ಪ್ರದೇಶಗಳಲ್ಲಿನ ಅತೀ ಹಿಂದುಳಿದ ಕಾಲೋನಿಗಳನ್ನು ಮಾದರಿ ಕಾಲೋನಿಗಳನ್ನಾಗಿ ಅಭಿವೃದ್ಧಿ ಪಡಿಸಲು ರೂ. 398.00 ಕೋಟಿಗಳ ಅಂದಾಜು ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

•ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ರಾವಂದೂರು ಬೆಟ್ಟದಪುರ ರಸ್ತೆಯ ಸರಪಳಿ 34.30 ಕೀ.ಮೀ ರಿಂದ (ಬೆಟ್ಟದಪಾದ) ಶ್ರೀ ಶಿಡ್ಲು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನಕ್ಕೆ ರಸ್ತೆ ನಿರ್ಮಾಣ ಕಾಮಗಾರಿಯನ್ನು ರೂ.50.00 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆಯನ್ನು ಸಚಿವ ಸಂಪುಟ ನೀಡಿದೆ.

•ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಹಂತ-5 ಘಟ್ಟ-1 ರಡಿಯಲ್ಲಿ 467 ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ರೂ. 4,000.00 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲಾಗಿದ್ದು, ರಸ್ತೆ ನಿರ್ಮಾಣದ ನಂತರ 6ನೇ ವರ್ಷದಲ್ಲಿ ಡಾಂಬರು ಮೇಲ್ಪದರವನ್ನು ಅಳವಡಿಸಲು ಪ್ರಾವಧಾನ ಮಾಡಲಾಗಿರುವ ಅಂಶವನ್ನು ಕೈಬಿಡಲು ಸಚಿವ ಸಂಪುಟ ಒಪ್ಪಲಿಲ್ಲ. ಆದರೆ ಆಯಾ ಕಾಮಗಾರಿಗಳ ಅಡಿಯಲ್ಲಿ ಸ್ಥಳದ ಅವಶ್ಯಕತೆಗೆ ಅನುಗುಣವಾಗಿ ಹೆಚ್ಚುವರಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಅನುಮೋದನೆ ನೀಡಲಾಗಿದೆ.

•ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಗುಳ್ಳಾಪುರ ಗ್ರಾಮದಿಂದ ಹೆಗ್ಗಾರ ಗ್ರಾಮಕ್ಕೆ ಸಂಪರ್ಕಿಸುವ ಜಿಲ್ಲಾ ಮುಖ್ಯ ರಸ್ತೆಯ ಗಂಗಾವಳಿ ನದಿಗೆ ಸೇತುವೆ ನಿರ್ಮಾಣ ಕಾಮಗಾರಿಯನ್ನು ರೂ.35.00 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
•ಬೆಂಗಳೂರಿನ ಮಾಗಡಿ ಮುಖ್ಯ ರಸ್ತೆಯಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರದ ಸಜ್ಜೆಪಾಳ್ಯ ಗ್ರಾಮದಲ್ಲಿರುವ ಸರ್ವೆ ನಂಬರ್ 04ರಲ್ಲಿ ಲಭ್ಯವಿರುವ ಜಮೀನಿನಲ್ಲಿ 5 ಎಕರೆ ಜಮೀನನ್ನು ಪರಿಶಿಷ್ಟ ಪಂಗಡಗಳ ನಿರ್ದೇಶನಾಲಯ, ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಕೇಂದ್ರ ಕಛೇರಿಗಳಿಗೆ ಸ್ಥಳಾವಕಾಶ ಕಲ್ಪಿಸಲು “ಶ್ರೀ ಮಹರ್ಷಿ ವಾಲ್ಮೀಕಿ ಸೌಧ” ನಿರ್ಮಾಣ ಮಾಡಲು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗೆ ಗುತ್ತಿಗೆ ಆಧಾರದ ಮೇಲೆ ನೀಡಲು ಸಚಿವ ಸಂಪುಟ ಒಪ್ಪಿದೆ.
•ಮೆ|| ಗೇಲ್ ಇಂಡಿಯಾ ಲಿಮಿಟೆಡ್ ಸಂಸ್ಥೆ ವತಿಯಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ದಿನ ಉತ್ಪತ್ತಿಯಾಗುವ ಘನತ್ಯಾಜ್ಯದ ಪೈಕಿ 300 ಮೆಟ್ರಿಕ್ ಟನ್ ಹಸಿ ತ್ಯಾಜ್ಯವನ್ನು ಪಯೋಗಿಸಿಕೊಂಡು Compressed Bio-Gas Plant ಅನ್ನು ಸ್ಥಾಪಿಸಲು ಹರಳಗುಂಟೆ ಗ್ರಾಮದ (KCDC ಸಂಸ್ಕರಣಾ ಘಟಕ) ಸರ್ವೆ ನಂ: 39, 40, 45 ಮತ್ತು 46ರಲ್ಲಿ ಲಭ್ಯವಿರುವ ಸುಮಾರು 18.00 ಎಕರೆ ಜಾಗವನ್ನು ಸೀಮಿತ ಬಳಕೆಗೋಸ್ಕರ ಮಾತ್ರ (For permissive use only) ಆಧಾರದಲ್ಲಿ 25 ವರ್ಷಗಳ ಅವಧಿಗೆ ಮೆ|| ಗೇಲ್ ಇಂಡಿಯಾ ಲಿಮಿಟೆಡ್ ಸಂಸ್ಥೆಗೆ ನೀಡಲು ಸರ್ಕಾರಿ ಆದೇಶ ದಿನಾಂಕ: 30.12.2022 ನ್ನು ಪರಿಷ್ಕರಿಸಲು ಅನುಮೋದನೆ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

•ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಬೈರಮಂಗಲ ಕೆರೆಯ ದಡದಲ್ಲಿ 100 ದಶಲಕ್ಷ ಲೀಟರ್ ಸಾಮರ್ಥ್ಯದ ದ್ವಿತೀಯ ಹಂತದ ತ್ಯಾಜ್ಯ ನೀರು ಶುದ್ದೀಕರಣ ಘಟಕ ಹಾಗೂ 25 ದಶಲಕ್ಷ ಲೀಟರ್ ಸಾಮರ್ಥ್ಯದ ತೃತೀಯ ಹಂತದ ತ್ಯಾಜ್ಯ ನೀರು ಶುದ್ದೀಕರಣ ಘಟಕ ನಿರ್ಮಾಣ ಕಾಮಗಾರಿ ಮತ್ತು ಈ ಘಟಕಗಳ 07 ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆ (O&M)ಯನ್ನು ಒಟ್ಟು ರೂ. 391.82 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

•ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕು ಶಿಗ್ಗಾಂವ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ವ್ಯವಸ್ಥೆಗಾಗಿ ನಾಗನೂರ ಕೆರೆ ಅಭಿವೃದ್ಧಿ ಕಾಮಗಾರಿಗಳನ್ನು ರೂ.105.19 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

•ಹಾವೇರಿ ಜಿಲ್ಲೆಯ ಬಂಕಾಪುರ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ತೆವರಮಳ್ಳಿಹಳ್ಳಿ ಕೆರೆ ಸುಧಾರಣಾ ಕಾಮಗಾರಿಗಳನ್ನು ರೂ.92.84 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ಒಪ್ಪಿದೆ.

•ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಸವಣೂರು ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ವ್ಯವಸ್ಥೆಗಾಗಿ ಮೋತಿ ತಲಾಬ ಕರೆ ಸುಧಾರಣಾ ಕಾಮಗಾರಿಗಳನ್ನು ರೂ.153.20 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಿದೆ.

•ಬಾಗಲಕೋಟೆ ಜಿಲ್ಲೆಯ ಲೋಕಾಪುರ ಪಟ್ಟಣ ಪಂಚಾಯತಿಯ ಸಾರ್ವಜನಿಕ ಉದ್ದೇಶಕ್ಕಾಗಿ ಕಾಯ್ದಿರಿಸಿದ ಆಸ್ತಿ ನಂ.3741, ಕ್ಷೇತ್ರ-400.63 ಚ.ಮೀಟರ್ ನಿವೇಶನವನ್ನು, ಕಾಂಗ್ರೆಸ್ ಭವನ ಟ್ರಸ್ಟ್ , ಬೆಂಗಳೂರು ಇವರಿಗೆ 30 ವರ್ಷಗಳವರೆಗೆ ಗುತ್ತಿಗೆ ಆಧಾರದ ಮೇಲೆ ನೀಡಲು ಸಚಿವ ಸಂಪುಟ ಒಪ್ಪಿದೆ.

•ರಾಯಚೂರು ಜಿಲ್ಲೆ, ಮಾನ್ಸಿ ತಾಲ್ಲೂಕಿನ ಯಡವಿಹಾಳ ಗ್ರಾಮದ ಬಳಿ ತುಂಗಭದ್ರಾ ನದಿಯಿಂದ ನೀರನ್ನೆತ್ತಿ, ತುಂಗಭದ್ರಾ ಎಡದಂಡೆ ಕಾಲುವೆಯ ವಿತರಣಾ ಕಾಲುವೆ 76ರಡಿ ಸುಮಾರು 10,000 ಎಕರೆ ಬಾಧಿತ ಅಚ್ಚು ಕಟ್ಟಿಗೆ ನೀರೊದಗಿಸುವ ರೂ.109.10 ಕೋಟಿಗಳ ಅಂದಾಜು ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

•ಮಂಡ್ಯ ಜಿಲ್ಲೆಯ ಮಳವಳ್ಳಿ ಮತ್ತು ಮದ್ದೂರು ತಾಲ್ಲೂಕಿನ ವಿಶ್ವೇಶ್ವರಯ್ಯ ನಾಲಾ ಜಾಲದಡಿಯಲ್ಲಿ ಬರುವ ಹೆಬ್ಬಕವಾಡಿ ಶಾಖಾ ನಾಲೆ ಮತ್ತು ನಿಡಘಟ್ಟ ಶಾಖಾ ನಾಲೆಯ ಅಭಿವೃದ್ಧಿ ಕಾಮಗಾರಿಯ 2ನೇ ಹಂತದ ಕಾಮಗಾರಿಯನ್ನು ರೂ.293.47 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

•ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕಿನ ಹೊಸಹೊಳಲು ಎಡದಂಡೆ ನಾಲೆ ಸರಪಳಿ 11.00ಕಿ.ಮೀ. ನಿಂದ 16.00 ಕಿ.ಮೀ. ವರೆಗೆ ಉಳಿಕೆ ಕಾಮಗಾರಿ ಹಾಗೂ ಆಧುನೀಕರಣ ಕಾಮಗಾರಿಯನ್ನು ರೂ. 21.50 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಸಚಿವ ಸಂಪುಟ ನೀಡಿದೆ.

•ಬೆಳಗಾವಿ ಜಿಲ್ಲೆಯ ಖಾನಪುರ ತಾಲ್ಲೂಕಿನ ಚಿಕ್ಕಹಟ್ಟಿಹೊಳಿ ಗ್ರಾಮದ ಹತ್ತಿರ ಮಲಪ್ರಭಾ ನದಿಗೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ ಮತ್ತು ನದಿ ದಂಡೆಯಲ್ಲಿ ರಕ್ಷಣಾ ಗೋಡೆ ನಿರ್ಮಾಣ ಕಾಮಗಾರಿಯನ್ನು ರೂ.50.00 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

•”ಕರ್ನಾಟಕ ಭೌಗೋಳಿಕ ಮಾಹಿತಿ ವ್ಯವಸ್ಥೆ ಆವೃತ್ತಿ 2.0 (ಕೆ-ಜಿಐಎಸ್ 2.0)”ನ್ನು ರೂ.150 ಕೋಟಿಗಳ ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

•ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಎಲ್ಲಾ 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗೆ (ESIS ಲಾಭ ಪಡೆಯುವವರನ್ನು ಸೇರಿಸಿ) ವಯೋ ವಂದನಾ ಯೋಜನೆಯನುಸಾರ ಆರೋಗ್ಯ ಸೇವೆಗಳನ್ನು ವಿಸ್ತರಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

•ಬೆಂಗಳೂರಿನ ಯಲಹಂಕ ಬೆಳ್ಳಹಳ್ಳಿಯಲ್ಲಿ ಮತ್ತು ತಾಲ್ಲೂಕು, ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಪಶುಸಂಗೋಪನೆ ಮತ್ತು ಕೃಷಿ ಇಲಾಖೆ ಆವರಣದಲ್ಲಿ ತಲಾ ರೂ.50 ಕೋಟಿಗಳ ಅಂದಾಜು ಮೊತ್ತದಲ್ಲಿ ಪ್ರತ್ಯೇಕವಾಗಿ 100 ಹಾಸಿಗೆಗಳ ಸಾಮರ್ಥ್ಯದ ಎರಡು ಅತ್ಯಾಧುನಿಕ ಮತ್ತು ಸುಸಜ್ಜಿತ ಆಸ್ಪತ್ರೆಗಳ ಕಟ್ಟಡಗಳನ್ನು (ಒಟ್ಟು ರೂ.100 ಕೋಟಿಗಳು) ನಿರ್ಮಿಸಲು ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.

•”ಮಧ್ಯಸ್ಥಿಕೆ ಮತ್ತು ಸಮನ್ವಯ ಕೇಂದ್ರ (ತಿದ್ದುಪಡಿ) ನಿಯಮಗಳು,2025 ಕ್ಕೆ ತಿದ್ದುಪಡಿ ತಂದಿದ್ದು, ಸಚಿವ ಸಂಪುಟ ಅನುಮೋದನೆ ನೀಡಿದೆ.

•ರಾಜ್ಯದಲ್ಲಿ ಡಿಜಿ ಕಂದಾಯ ಯೋಜನೆಯಡಿ ಸೇವೆಗಳನ್ನು ನೀಡಲು ರಾಜಸ್ವ/ ಕಂದಾಯ ನಿರೀಕ್ಷಕರಿಗೆ ಮತ್ತು ಗ್ರಾಮ ಆಡಳಿತ ಅಧಿಕಾರಿಗಳಿಗೆ ರೂ. 19.25 ಕೋಟಿಗಳ ಅಂದಾಜು ಮೊತ್ತದಲ್ಲಿ 3500 Chromebook ಗಳನ್ನು ಒದಗಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

•11 ಅರಣ್ಯ/ ಅರಣ್ಯಾಧಾರಿತ/ ಸೂಕ್ಷ್ಮ ಸಮುದಾಯದ ವಸತಿ ರಹಿತ 6,856 ಕುಟುಂಬಗಳಿಗೆ 4.50 ಲಕ್ಷ ಘಟಕ ವೆಚ್ಚದಲ್ಲಿ (ಸೋಲಿಗ, ಹಸಲರು, ಗೌಡಲು, ಸಿದ್ಧಿ, ಕುಡಿಯ, ಮಲೆಕುಡಿಯ, ಕಾಡುಕುರುಬ, ಇರುಳಿಗ, ಬೆಟ್ಟ, ಕುರುಬ, ಯರವ, ಪಣಿಯನ್ ಇತ್ಯಾದಿ) ಒಟ್ಟು ರೂ.160.00 ಕೋಟಿಗಳ ಅಂದಾಜು ಮೊತ್ತದಲ್ಲಿ ಮನೆಗಳನ್ನು ನಿರ್ಮಾಣ ಮಾಡಲು ಹಾಗೂ ಸದರಿ ಯೋಜನೆಗೆ “ಮುಖ್ಯಮಂತ್ರಿಗಳ ಆದಿವಾಸಿ ಗೃಹ ಭಾಗ್ಯ ಯೋಜನೆ” ಎಂದು ಕರೆಯಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
•”ಕರ್ನಾಟಕ ಉಪ ಖನಿಜ ರಿಯಾಯಿತಿ (ತಿದ್ದುಪಡಿ) ನಿಯಮಗಳು, 2025″ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ.

•”ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾ ಪದ್ಧತಿ (ನಿಯಂತ್ರಣ) (ತಿದ್ದುಪಡಿ) ಆದೇಶ, 2025 ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ.

•ದುರಸ್ತಿ ಅಗತ್ಯವಿರುವ ಜಿಲ್ಲಾ ಆಸ್ಪತ್ರೆ ಮತ್ತು ತಾಲ್ಲೂಕು ಆಸ್ಪತ್ರೆಗಳ 149 ಕಾಮಗಾರಿಗಳನ್ನು ಒಟ್ಟು ರೂ.183.00 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.

•Electronic Monitoring and Enforcement Road Safety ಯೋಜನೆಯಡಿ of ದಾವಣಗೆರೆ, ಧಾರವಾಡ, ಕಲಬುರಗಿ, ಬೆಳಗಾವಿ, ಚಿತ್ರದುರ್ಗ, ಹಾವೇರಿ, ಹೊಸಪೇಟೆ, ಬಳ್ಳಾರಿ, ವಿಜಯಪುರ, ದಕ್ಷಿಣ ಕನ್ನಡ ಜಿಲ್ಲೆಗಳ ಒಟ್ಟು 60 ಸ್ಥಳಗಳಲ್ಲಿ AI ಆಧಾರಿತ ವಿದ್ಯುನ್ಮಾನ ಕ್ಯಾಮೆರಾಗಳು ಮತ್ತು ಇನ್ನಿತರೆ ಎಲೆಕ್ಟ್ರಾನಿಕ್ ಸಾಧನಗಳನ್ನು ಒಟ್ಟು ರೂ.49.89 ಕೋಟಿಗಳ ಅಂದಾಜು ಮೊತ್ತದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

•ಕಲಬುರಗಿ ನಗರದ ಸೂಪರ್ ಮಾರ್ಕೆಟ್ ಸಿಟಿ ಬಸ್ ಸ್ಟ್ಯಾಂಡ್ ಹತ್ತಿರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪುತ್ಥಳಿ ಸ್ಥಾಪನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ

•ಕರ್ನಾಟಕ ರಾಜ್ಯದಲ್ಲಿ ದಿನಾಂಕ: 15.09.2025 ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಿಸಲು ಸಚಿವ ಸಂಪುಟ ನಿರ್ಣಯಿಸಿದೆ.

You Might Also Like

ಅಂತಾರಾಷ್ಟ್ರೀಯ ಯೋಗ ದಿನ: ಭಾರತ-ಪಾಕಿಸ್ತಾನ ಗಡಿಯಲ್ಲಿ ಯೋಗ ಪ್ರದರ್ಶನ

ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಮುಂದುವರೆಯುತ್ತಾರೆ : BS Yediyurappa

ಮನೆಯಲ್ಲಿ ಅನುಮಾನಾಸ್ಪದ ಸ್ಫೋಟ, ದಂಪತಿಗಳಿಗೆ ಗಂಭೀರ ಗಾಯ

ಜಾಮೀನು ರದ್ದಾದ ಬೆನ್ನಲ್ಲೇ ದರ್ಶನ್‌-ಪವಿತ್ರ ಅರೆಸ್ಟ್, ನ್ಯಾಯಾಧೀಶರ ಮುಂದೆ ದರ್ಶನ್‌ ಹಾಜರ್

ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದಾಳಿ ಖಂಡಿಸಿ ಭಾರತದಲ್ಲಿ ಪ್ರತಿಭಟನೆ

Share This Article
Facebook Copy Link Print
Previous Article ಡಾ.ವಿಷ್ಣುವರ್ಧನ್ ಮತ್ತು ಸರೋಜಾದೇವಿಗೆ ಕರ್ನಾಟಕ ರತ್ನ ನೀಡಲು ರಾಜ್ಯ ಸಚಿವ ಸಂಪುಟ ನಿರ್ಣಯ
Next Article ಮಳೆ ಹಾನಿಗೊಳಗಾದ ಉತ್ತರಾಖಂಡಕ್ಕೆ 1,200 ಕೋಟಿ ರೂ.ನೆರವು ಘೋಷಿಸಿದ ಪ್ರಧಾನಿ ಮೋದಿ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

ಮನರೇಗಾ ಮರುಸ್ಥಾಪಿಸುವ ಬಗ್ಗೆ ವಿಧಾನಸಭೆಯಲ್ಲಿ ಸರ್ಕಾರ ಮಹತ್ವದ ನಿರ್ಣಯ
ರಾಜ್ಯ-Karnataka
February 3, 2026
‘ಲ್ಯಾಂಡ್ ಲಾರ್ಡ್’ ಚಿತ್ರಕ್ಕೆ ರಾಜ್ಯ ಸರ್ಕಾರದಿಂದ ತೆರಿಗೆ ವಿನಾಯಿತಿ
ಸ್ಯಾಂಡಲ್​ವುಡ್-Sandalwood
February 3, 2026
ನಸೀರ್‌ಗೆ ಸಹಿಸಲಾಗದ ಸಂಕಟ: ಸಿ.ಟಿ ರವಿ ಖಡಕ್ ಕೌಂಟರ್..!
ರಾಜ್ಯ-Karnataka
February 3, 2026
‘ಸರಳ ಸುಬ್ಬರಾವ್‌’ ಸಿನಿಮಾ ಟ್ರೇಲರ್‌ ಲಾಂಚ್‌
ಸ್ಯಾಂಡಲ್​ವುಡ್-Sandalwood
February 3, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up