ಗೋಕಾಕ : ಅಮೃತ ಭಾರತ ನಿಲ್ದಾಣ ಯೋಜನೆಯಡಿಯಲ್ಲಿ ಪುನರಾಭಿವೃದ್ದಿಗೊಂಡ ಗೋಕಾಕ ರೋಡ ರೈಲು ನಿಲ್ದಾಣ ಉದ್ಗಾಟನೆ ಸಮಾರಂಭವನ್ನು ರಾಜಸ್ಥಾನದ ಬಿಕನೇರನಲ್ಲಿ ಉದ್ಘಾಟನೆಯಲ್ಲಿ ರಾಜ್ಯದಲ್ಲಿ ಆಯ್ಜೆಯಾದ 5 ರೇಲ್ವೆ ಸ್ಟೇಷನಗಳಲ್ಲಿ ಒಂದಾದ ಗೋಕಾಕ ರೋಡ ರೇಲ್ವೆ ನಿಲ್ದಾಣವನ್ನು ಪ್ರಧಾನಿ ಶ್ರೀ ನರೆಂದ್ರ ಮೋದಿಯವರು ವಿಡಿಯೋ ಕಾನ್ಪರೇನ್ಸ್ ಮೂಲಕ ಉದ್ಘಾಟಿಸಿದರು.
ಮುಖ್ಯ ಅಥಿಥಿಯಾಗಿ ಆಗಮಿಸಿದ್ದ ರಾಜ್ಯ ಸಭಾ ಸದಸ್ಯ ಈರಣ್ಣಾ ಕಡಾಡಿ ಜ್ಯೋತಿ ಬೆಳಗಿಸಿ,ಸನ್ಮಾನ ಸ್ವಿಕರಿಸಿ ಸ್ಥಳಿಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಗೋಕಾಕ ರೋಡ ರೈಲು ನಿಲ್ದಾಣವು 16.98 ಕೋಟಿ ರೂ ವೆಚ್ಚದಲ್ಲಿ ವಿಶ್ವದರ್ಜೆಯ ಸೌಲಬ್ಯವಾಗಿ ಪುನರಾಭಿವೃದ್ದಿಗೊಂಡಿದೆ.
ಪ್ರಧಾನಮಂತ್ರಿ ಶ್ರೀ ನರೆಂದ್ತ ಮೋದಿ ಅವರ ದೂರದೃಷ್ಟಿಯ ಮೂಲಸೌಕರ್ಯ ಅಬಿವೃದ್ದಿಯ ಸುವರ್ಣ ಯುಗಕ್ಕೆ ಇವತ್ತು ನಡೆದ ಉದ್ಘಾಟನೆ ಸಾಕ್ಷಿಯಾಗಿದೆ.
ಭಾರತದ ರೈಲ್ವೆ ಮೂಲಸೌಕರ್ಯಕ್ಕೆ ಅತ್ಯಂತ ಮಹತ್ವದ ದಿನ. ಅಮೃತ್ ನಿಲ್ದಾಣಗಳು ಸೌಕರ್ಯ, ಸಂಪರ್ಕವನ್ನು ವೃದ್ಧಿಸುವ ಜೊತೆಗೆ ನಮ್ಮ ವೈಭಯುತ ಸಂಸ್ಕೃತಿಯ ಸಂಭ್ರಮಾಚರಣೆಯಾಗಿದೆ ಎಂದರು, ಇನ್ನು ಅಬಿವೃದ್ದಿ ವಿಷಯದಲ್ಲಿ ಪಕ್ಷಾತಿತವಾಗಿ ನಮ್ಮ ಬೆಂಬಲ ಸದಾ ಇರುತ್ತದೆ, ಅದಕ್ಕೆ ಸ್ಥಳಿಯರು ಪ್ರಧಾನಿ ನರೇಂದ್ರ ಮೋದಿಯವರ ಬೆನ್ನೆಲುಬಾಗಿ ನಿಲ್ಲಬೇಕೆಂದರು.
ಇದರ ಜೊತೆಯಲ್ಲಿ ರೇಲ್ವೆ ಇಲಾಖೆ ಹಮ್ಮಿಕೊಂಡಿದ್ದ ವಿವಿದ ಸ್ಪರ್ದೆಯಲ್ಲಿ ವಿಜೇತರಾದ ಶಾಂತಿಸಾಗರ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಹಾಗೂ ಇನ್ನೂಳಿದವರಿಗೆ ಬಹುಮಾನ ನೀಡಿ ಶುಭ ಹಾರೈಸಿದರು.
ಸ್ಥಳಿಯರು ವೇದಿಕೆಗೆ ಆಗಮಿಸಿ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿಯವರಿಗೆ ಗೋಕಾಕ ರೋಡ ರೇಲ್ವೆ ಸ್ಟೇಷನನಲ್ಲಿ ಎಕ್ಸಪ್ರೇಸ್ ರೈಲು ನಿಲುಗಡೆಗೆ ಒತ್ತಾಯಿಸಿ ಮನವಿ ನೀಡಿದರು.
ಇನ್ನು ಸಿನಿಯರ ಸೇಪ್ಟಿ ಆಫೀಸರ್ ಕಾರ್ತೀಕ್ ಎಚ್ ಮಾತನಾಡಿ 103 ಅಮೃತ ರೇಲ್ವೆ ಯೋಜನೆಯಲ್ಲಿ ನಮ್ಮ ರಾಜ್ಯದ ಗೋಕಾಕ ರೋಡ ಆಯ್ಕೆಯಾಗಿದ್ದು ಎಲ್ಲರಂತೆ ನನಗೂ ಕೂಡ ಹೆಮ್ಮೆಯಾದ ವಿಷಯ,ಈ ರೇಲ್ವೆ ಸ್ಟೇಷನನಲ್ಲಿ ಸಾರ್ವಜನಿಕರಿಗೆ ಬೇಕಾಗುವ ಎಲ್ಲ ಸೌಲಬ್ಯಗಳು ಇದ್ದು ಎಲ್ಲರೂ ಅಬಿವೃದ್ದಿ ಮಾಡಲು ಸಹಕಾರ ನೀಡಿದ್ದಕ್ಕೆ ಅಭಿನಂದಿಸಿದರು.
ಈ ಸಂದರ್ಬದಲ್ಲಿ ರೇಲ್ವೆ ನಇಲಾಖೆಯ ,,ಚೀಪ್ ಕಮರ್ಷಿಯಲ್ ಮ್ಯಾನೆಜರ,ಅನುಪ ದಯಾನಾಂದ ಸಾದು,ಬಿಜೆಪಿ ಬೆಳಗಾವಿ ಜಿಲ್ಲಾದಕ್ಷ ಸುಭಾಸ ಪಾಟೀಲ, ಹಿರಿಯ ಮುಖಂಡ ಸುರೇಶ ಪಾಟೀಲ, ಸೇರಿದಂತೆ ಇನ್ನೂಳಿದ ಮುಖಂಡರು, ಸ್ಥಳಿಯ ಮುಖಂಡರು, ಶಾಲಾ ಶಿಕ್ಷಕಿಯರು, ಗ್ರಾಮ ಪಂಚಾಯತಿ ಸದಸ್ಯರುಗಳು ಉಪಸ್ಥಿತರಿದ್ದರು, ಅದರ ಜೊತೆಯಲ್ಲಿ ಗೋಕಾಕ ಸಿಪಿಆಯ್, ಗ್ರಾಮೀಣ ಪಿಎಸ್ಐ, ಹಲವಾರು ಪೋಲಿಸ್ ಸಿಬ್ಬಂದಿಗಳು ಬಂದೊಬಸ್ತ ಮಾಡಿದ್ದರು.

