ಕೋಲಾರ : ಕೋಲಾರ ಜಿಲ್ಲಾ ಹುತ್ತೂರು ಹೋಬಳಿ ಸಿಸಂದ್ರ ಗ್ರಾಮದ ಸರ್ವೇ ನಂಬರ್ 139 ರಲ್ಲಿ ಸುಮಾರು ದಲಿತ ಕುಟುಂಬಗಳ ಜಮೀನಿದ್ದು . BGS ವಿದ್ಯಾ ಸಂಸ್ಥೆ ಇದ್ದು 139ಸರ್ವೇ ನಂಬರ್ ನಲ್ಲಿ 112 ಎಕರೆ ಜಮೀನು ಇದೆ ಅದರಲ್ಲಿ ದಲಿತರಿಗೆ ಸೇರುವ ಜಮೀನು ಇದ್ದು BGS ವಿದ್ಯಾ ಸಂಸ್ಥೆ 112 ಏಕರಿಗೂ ಕಂಪೌಂಡ್ ಹಾಕಲಾಗಿದ್ದು ನಮ್ಮ ಜಮೀನಿನಲ್ಲಿ ಹೋಗಲು ರಸ್ತೆ ಬಿಡುತ್ತಿಲ್ಲ. ಎಂದು 112 ಸರ್ವೇ ನಂಬರ್ ಗೆ ಸಂಬಂಧಿಸಿದಂತೆ ರೈತರು ಹಾಗೂ ದಲಿತರು ಕೋಲಾರ ತಾಲೂಕು ಕಚೇರಿ ಮುಂಬಾಗ ಅನಿರ್ದಿಷ್ಟಾವಧಿ ಸತ್ಯಾಗ್ರಹ ಹಮ್ಮಿಕೊಂಡಿದ್ದರು.
ದಲಿತ ಮುಖಂಡರಾದ ಕೀಲೋಲ್ಲಿ ಸತೀಶ್ ರವರು ಮಾತಾಡಿ ಕೂಡಲೇ ಸಿಸಂದ್ರ ಗ್ರಾಮದ ಸರ್ವೇ ನಂಬರ್ 112 ಕ್ಕೆ ಸಂಬಂಧಿಸಿದಂತೆ ಪ್ರತಿಯೊಬ್ಬರಿಗೂ ರಸ್ತೆ ಕಲ್ಪಿಸಿ ಕೊಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟರು.
ಇದಕ್ಕೆ ಸಂಬಂಧಿಸಿದಂತೆ ಕೂಡಲೇ ಎಚ್ಚೆತ್ತುಕೊಂಡ ಕೋಲಾರ ಜಿಲ್ಲಾ ಉಪ ವಿಭಾಗ ಅಧಿಕಾರಿಗಳಾದ ಶ್ರೀಮತಿ ಮೈತ್ರಿ ರವರು ಬಂದು ದಾಖಲೆಗಳನ್ನ ಪರಿಶೀಲಿಸಿ ಸಿಸಂದ್ರ ಗ್ರಾಮದ ಸರ್ವೇ ನಂಬರ್ 139 ರಲ್ಲಿ ಇರುವ ದಲಿತರ ಜಮೀನಿಗಳಿಗೆ ಸೂಕ್ತವಾದ ರಸ್ತೆ ಅದೆಷ್ಟು ಬೇಗ ಸಮಸ್ಯೆ ಯನ್ನ ಬಗೆಹರಿಸಲಾಗುವುದು ಎಂದು ಪ್ರತಿಯೊಬ್ಬರಿಗೂ ಕೂಡ ನ್ಯಾಯವನ್ನು ಕೊಡಿಸುತ್ತೇನೆ ಎಂದು ಭರವಸೆ ಕೊಟ್ಟರು.
ಅರುಣ್ ಕುಮಾರ್ ಬಿ ಎಸ್

