ನವದೆಹಲಿ: ಭಾರತ ರಷ್ಯಾದಿಂದ ತೈಲ ಖರೀದಿಸಬಾರದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ತಾಕೀತು ಮಾಡಿದ್ದ ಬೆನ್ನಿಗೇ ಭಾರತದ ತೈಲ ಸಂಸ್ಕರಣಾಗಾರರು ರಷ್ಯಾದ ತೈಲ ಉತ್ಪಾದಕರಿಂದ ತೈಲ ಖರೀದಿಸುವುದನ್ನು ಮುಂದುವರಿಸಿದ್ದಾರೆ ಎನ್ನುವ ಸಂಗತಿ ಮುನ್ನೆಲೆಗೆ ಬಂದಿದೆ. ಭಾರತೀಯ ತೈಲ ಸಂಸ್ಕರಣಾಗಾರರು ರಷ್ಯಾದ ಪೂರೈಕೆದಾರರಿಂದ ತೈಲ ಪಡೆಯುವುದನ್ನು ಮುಂದುವರಿಸಿದ್ದು, ಪೂರೈಕೆ ನಿರ್ಣಯಗಳು ಬೆಲೆ, ಕಚ್ಚಾತೈಲದ ಗುಣಮಟ್ಟ, ದಾಸ್ತಾನು, ಸಾಗಾಟ ಮತ್ತು ಇತರ ಆರ್ಥಿಕ ಅಂಶಗಳನ್ನು ಅವಲಂಬಿಸಿದೆ ಎಂದು ಮೂಲಗಳು ತಿಳಿಸಿವೆ.
ರಷ್ಯಾದಿಂದ ತೈಲ ಖರೀದಿಸದಂತೆ ಅಥವಾ ಹೊಸ ಪೂರೈಕೆದಾರರನ್ನು ಹುಡುಕುವಂತೆ ಭಾರತ ತನ್ನ ಸಂಸ್ಕರಣಾಗಾರಗಳಿಗೆ ಯಾವುದೇ ಆದೇಶ ನೀಡಿಲ್ಲ ಎಂಬುದಾಗಿ ರಷ್ಯಾದ ಮಾಧ್ಯಮವೊಂದು ವರದಿ ಮಾಡಿದೆ. ‘ಭಾರತ ರಷ್ಯಾದ ತೈಲ ಖರೀದಿಸುವುನ್ನು ನಿಲ್ಲಿಸಿದೆ ಎಂದು ಕೇಳಿದ್ದೇನೆ, ಅದು ಸರಿಯೋ ತಪ್ಪೋ ಗೊತ್ತಿಲ್ಲ, ಆ ಸುದ್ದಿ ಖಚಿತವಾಗಿದ್ದರೆ ಅದು ಉತ್ತಮ ಹೆಜ್ಜೆ’ ಎಂದು ಟ್ರಂಪ್ ಶನಿವಾರ ವಾಷಿಂಗ್ಟನ್ನಲ್ಲಿ ಸುದ್ದಿಗಾರರಿಗೆ ಹೇಳಿದ್ದರು. ಅದಾಗ್ಯೂ ಭಾರತ ರಷ್ಯಾದ ತೈಲ ಖರೀದಿಸುವುದನ್ನು ಮುಂದುವರಿಸಿರುವುದು ಗಮನ ಸೆಳೆದಿದೆ.
- ನಟಿ ಕೃತಿ ಗೌಡ ಜೊತೆ ದಾಂಪತ್ಯಕ್ಕೆ ಕಾಲಿಡಲು ಸಜ್ಜಾದ ‘ಗಿಚ್ಚಿ ಗಿಲಿ ಗಿಲಿ’ ಖ್ಯಾತಿಯ ಪ್ರಶಾಂತ್ ಗೌಡ
- ರಾಜ್ಯದಲ್ಲಿ ಈ ವಾರ ಭಾರಿ ಬಿಸಿಲು, ತಾಪಮಾನ 45 ಡಿಗ್ರಿ ಸೆಲ್ಸಿಯಸ್ಗೆ ಏರುವ ಸಾಧ್ಯತೆ
- ಸೆಪ್ಟೆಂಬರ್‌ನಲ್ಲಿ ಟಿಮ್ ಕುಕ್ ನಿವೃತ್ತಿ, ಆ್ಯಪಲ್ ಹೊಸ ಸಿಇಒ ಆಗಿ ಜಾನ್ ಟೆರ್ನಸ್ ನೇಮಕ
- ರಾಜ್ಯದಲ್ಲಿ ಇಂದಿನಿಂದ ಜನಗಣತಿ ಆರಂಭ
- ಆಟಿಕೆ ಕಾರು ಬಳಸಿ ದೆಹಲಿಯಲ್ಲಿ ಸ್ಫೋಟಕ್ಕೆ ಸಂಚು ಮಾಡಿದ್ದ ನಾಲ್ವರು ಶಂಕಿತ ಉಗ್ರರ ಬಂಧನ

