ರಾಜ್‌ಕೋಟ್ : ಭಾರತ ಮತ್ತು ಐರ್ಲೆಂಡ್ ಮಹಿಳಾ ಕ್ರಿಕೆಟ್ ತಂಡಗಳ ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯ ಭಾನುವಾರ ರಾಜ್‌ಕೋಟ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಭಾರತ ತಂಡ ರನ್ ಮಳೆ ಸುರಿಸಿದೆ. ಟೀಮ್ ಇಂಡಿಯಾ ತನ್ನ ಎಲ್ಲಾ ದಾಖಲೆಗಳನ್ನು ಮುರಿದು ಏಕದಿನದಲ್ಲಿ ತನ್ನ ಗರಿಷ್ಠ ಸ್ಕೋರ್ ಕಲೆ ಹಾಕಿದೆ. ಭಾರತದ ವನಿತೆಯರು ಐರ್ಲೆಂಡ್‌ನ ಬೌಲರ್‌ಗಳಿಗೆ ಬೆವರಿಳಿಸಿ 50 ಓವರ್‌ಗಳಲ್ಲಿ 5 ವಿಕೆಟ್‌ಗೆ 370 ರನ್ ಗಳಿಸಿದ್ದಾರೆ.
ಭಾರತದ ಪರ ಜೆಮಿಮಾ ರೊಡ್ರಿಗಸ್ 102 (91) ರನ್ ಗಳಿಸಿದರೆ, ಹರ್ಲೀನ್ ಡಿಯೋಲ್ 89 (84) ರನ್ ಗಳಿಸಿದರು. ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಹಿಂದಿನ ಅತ್ಯಧಿಕ ಮೊತ್ತ 358 ಆಗಿದ್ದು, ಇದನ್ನು ಅವರು ಎರಡು ಬಾರಿ ದಾಖಲಿಸಿದ್ದಾರೆ. 2017 ರಲ್ಲಿ ಒಮ್ಮೆ ಮತ್ತು 2024ರಲ್ಲಿ ಮತ್ತೊಮ್ಮೆ.
ಜೆಮಿಮಾ ರೋಡ್ರಿಗಸ್ ಅವರ ಮೊದಲ ಶತಕ ಮತ್ತು ನಾಯಕಿ ಸ್ಮೃತಿ ಮಂಧಾನ, ಪ್ರತೀಕ್ ರಾವ್ಲಾ ಮತ್ತು ಹರ್ಲೀನ್ ಡಿಯೋಲ್ ಅವರ ಅರ್ಧಶತಕಗಳ ನೆರವಿನಿಂದ ಭಾರತ ಮಹಿಳಾ ತಂಡವು ಏಕದಿನ ಕ್ರಿಕೆಟ್‌ನಲ್ಲಿ ತನ್ನ ಗರಿಷ್ಠ ಸ್ಕೋರ್ ಕಲೆ ಹಾಕಿದೆ. ಈ ಹಿಂದೆ ಐರ್ಲೆಂಡ್ ವಿರುದ್ಧ ಭಾರತ 358 ರನ್‌ಗಳ ಅತ್ಯುತ್ತಮ ಏಕದಿನ ಸ್ಕೋರನ್ನು ಗಳಿಸಿತ್ತು.

