ಬೆಂಗಳೂರು: ಗುವಾಹಟಿಯಿಂದ ಚೆನ್ನೈಗೆ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನ (6E 6764) ಗುರುವಾರ ಸಂಜೆ ಬೆಂಗಳೂರಿಗೆ ತುರ್ತು ಮಾರ್ಗ ಬದಲಾವಣೆ ಮಾಡಿದೆ. ಇಂಧನ ಮಟ್ಟ ತೀವ್ರವಾಗಿ ಕಡಿಮೆಯಾದ ಕಾರಣ ಪೈಲಟ್ ಅಪರೂಪದ “ಇಂಧನ ಮೇಡೇ” ಕರೆ ನೀಡಿದ ಬಳಿಕ ವಿಮಾನವನ್ನು ಬೆಂಗಳೂರಿನಲ್ಲಿ ಲ್ಯಾಂಡ್ ಮಾಡಲಾಯಿತು ಎಂದು ಹೇಳಲಾಗಿದೆ.
ಗುರುವಾರ ಸಂಜೆ 4.45ಕ್ಕೆ 168 ಪ್ರಯಾಣಿಕರನ್ನು ಹೊತ್ತು ಗುವಾಹಟಿಯಿಂದ ಹೊರಟ ಇಂಡಿಗೋ ವಿಮಾನ ಸಂಜೆ 7.45ರ ವೇಳೆಗೆ ಚೆನ್ನೈ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕಿತ್ತು. ಆದರೆ ಚೆನ್ನೈ ತಲುಪುವ ಸ್ವಲ್ಪ ಸಮಯದ ಮೊದಲು, ಪೈಲಟ್ ಇಂಧನ ಕಡಿಮೆಯಿರುವ ಬಗ್ಗೆ ಗಮನಿಸಿದರು. ಇದು ಗಮ್ಯಸ್ಥಾನದಲ್ಲಿ ಸುರಕ್ಷಿತ ಲ್ಯಾಂಡಿಂಗ್ ಬಗ್ಗೆ ಕಳವಳ ಉಂಟು ಮಾಡಿತ್ತು.
ಪೈಲಟ್ ತಕ್ಷಣ ಚೆನ್ನೈ ವಾಯು ಸಂಚಾರ ನಿಯಂತ್ರಣ (ಎಟಿಸಿ) ಯನ್ನು ಸಂಪರ್ಕಿಸಿದರು. ಈ ವೇಳೆ ಸುರಕ್ಷತಾ ಕಾರಣಗಳಿಗಾಗಿ ವಿಮಾನವನ್ನು ಬೆಂಗಳೂರಿಗೆ ತಿರುಗಿಸಲು ಸೂಚಿಸಲಾಯಿತು. ಜೂನ್ 19ರಂದು ರಾತ್ರಿ 8 ಗಂಟೆ ಸುಮಾರಿಗೆ ವಿಮಾನವು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿದೆ.
“ಮೇಡೇ ಕರೆ ಬಂದ ನಂತರ, ಎಟಿಸಿ (ವಾಯು ಸಂಚಾರ ನಿಯಂತ್ರಣ) ವಿಮಾನ ನಿಲ್ದಾಣದ ಸಿಬ್ಬಂದಿಗೆ ಎಚ್ಚರಿಕೆ ನೀಡಿತು, ಅವರು ಕಾರ್ಯಪ್ರವೃತ್ತರಾದರು. ವೈದ್ಯಕೀಯ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳದಲ್ಲಿದ್ದರು ಎಂದು ಹೇಳಲಾಗಿದೆ. ಇಂಧನದ ಪರೀಕ್ಷೆ ಮಾಡಿಕೊಳ್ಳದೆ ಹಾರಾಟಕ್ಕೆ ಮುಂದಾಗಿದ್ದಕ್ಕೆ ಆ ವಿಮಾನದ ಇಬ್ಬರು ಪೈಲಟ್ಗಳನ್ನೂ ಅಮಾನತುಗೊಳಿಸಲಾಗಿದೆ ಎಂದು ಕೆಲವು ವರದಿಗಳು ತಿಳಿಸಿವೆ. ಆದರೆ ಇಂಡಿಗೋ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
- ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಅಬ್ಬರ – 6 ವಿಕೆಟ್ ಗೆಲುವಿನಿಂದ ಐಪಿಎಲ್‌ಗೆ ಭರ್ಜರಿ ಚಾಲನೆ
- ರಾಜ್ಯದಲ್ಲಿ ಇನ್ನೊಂದು ವಾರ ಭಾರಿ ಮಳೆ ಸಾಧ್ಯತೆ, ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ
- ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ : ತಪ್ಪೊಪ್ಪಿಕೊಂಡ ಆರೋಪಿ ಮೊಹಮ್ಮದ್ ಶಾರೀಕ್
- ಅಮೆರಿಕಾದಾದ್ಯಂತ ‘ನೋ ಕಿಂಗ್ಸ್’ ಪ್ರತಿಭಟನೆ: ಟ್ರಂಪ್ ವಿರುದ್ಧ ಜನರ ಆಕ್ರೋಶ
- ರೇಮಂಡ್ ಕಂಪನಿಯ ಮಾಜಿ ಅಧ್ಯಕ್ಷ ವಿಜಯಪತ್ ಸಿಂಘಾನಿಯಾ ನಿಧನ

