ದಿನೇದಿನೇ ಹಾರ್ಟ್ ಅಟ್ಯಾಕ್ ಎಲ್ಲರ ಎದೆಯಲ್ಲಿ ನಡುಕ ಹುಟ್ಟಿಸ್ತಿದೆ.. ಈ ಕ್ಷಣ ಇದ್ದವರು ಮರು ಕ್ಷಣದಲ್ಲಿ ಉಸಿರು ನಿಲ್ಲಿಸ್ತಿದ್ದಾರೆ.. ಯಾಕೆ ಏನು ಅನ್ನೋದು ಮಾತ್ರ ನಿಗೂಢ.. ಈಗ ಸಿಎಂ ಸಿದ್ದರಾಮಯ್ಯ ಹೊಸ ಅನುಮಾನ ಹೊರಹಾಕಿದ್ದಾರೆ.. ಇದೇ ಹೊತ್ತಿನ ವಿಶೇಷ.. ನಿಲ್ಲದ ‘ಹೃದಯಾಘಾತ’ ಮರಣ ಮೃದಂಗ! ಸಾವಿಗೆ ಕೋವಿಡ್ ಲಸಿಕೆ ಕಾರಣವೇ?
ರಾಜ್ಯದಲ್ಲಿ ಏನಾಗ್ತಿದೆ ಅನ್ನೋದೆ ಗೋತ್ತಾಗ್ತಿಲ್ಲ.. ಕರುನಾಡಿನ ಮೂಲೆ ಮೂಲೆಯಲ್ಲಿ ಹಾರ್ಟ್ ಅಟ್ಯಾಕ್.. ಹಾರ್ಟ್ ಅಟ್ಯಾಕ್ ಅನ್ನೋ ಶಬ್ಧನೇ ಕೆಲಿಸ್ತಿದೆ.. ಮಹಾಮಾರಿ ಹೃದಯಾಘಾತ ಅನ್ನೋದು ಎಲ್ಲರನ್ನ ನಿದ್ದೆಯಲ್ಲೂ ಬಿಚ್ಚಿಬೀಳಿಸ್ತಿದೆ.. ಹೌದು ರಾಜ್ಯದಲ್ಲಿ ಹಾರ್ಟ್ ಅಟ್ಯಾಕ್ ಅನ್ನೋ ಶಬ್ಧ ಸೃಷ್ಟಿಸಿರೋ ಆತಂಕ ಎಲ್ಲರ ನಿದ್ದೆಗೆಡಿಸಿದೆ. ನಿಂತಲ್ಲಿ-ಕುಂತಲ್ಲಿ ಜನ ಎದೆ ಹಿಡಿದು ಬೀಳುತ್ತಿರುವ ದೃಶ್ಯ ಭಯಹುಟ್ಟಿಸುತ್ತಿದೆ. ಹಾಸನದಲ್ಲಿ ಹೃದಯಾಘಾತದ ಮರಣ ಮೃದಂಗ ನಿಲ್ಲದಾಗಿದ್ದು ಇದು ಬೇರೆ ಜಿಲ್ಲೆಗಳಲ್ಲೂ ಆತಂಕ ಮೂಡಿಸಿದೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಮತ್ತೊಂದು ಭಯ ಹುಟ್ಟಿಸುವ ಅನುಮಾನ ಹೊರಹಾಕಿದ್ದಾರೆ.
ಇನ್ನು ಬಾಳಿ ಬದುಕಬೇಕಿದ್ದವರ ಹೃದಯ ಬಡಿತವೇ ಅರ್ಧದಲ್ಲಿ ನಿಂತೋಗ್ತಿದೆ.. ಏನು ಕಾರಣ.. ಯಾಕೆ ಹೀಗೆ ಆಗ್ತಿದೆ ಅನ್ನೋದೆ ಗೊತ್ತಾಗ್ತಿಲ್ಲ.. ಜಿಲ್ಲೆ ಜಿಲ್ಲೆಯಲ್ಲಿ ಹೃದಯಾಘಾತ ಹೆಮ್ಮಾರಿ ಅಟ್ಯಾಕ್ ಮಾಡ್ತಿದೆ.. ಅದ್ಯಾಕೋ ಮನುಷ್ಯನ ಇಂಜಿನ್.. ಹಾರ್ಟ್ ಅಂತಾರಲ್ಲ ಇದು ಪದೇ ಪದೆ ಕೈ ಕೊಡ್ತಿದೆ. ಜನರು ನಿಂತಲ್ಲೇ ಎದೆ ಹಿಡಿದುಕೊಂಡು ಇಹಲೋಕ ತೈಜಿಸುತ್ತಿದ್ದಾರೆ. ಆರೋಗ್ಯವಾಗಿದ್ದವರನ್ನೂ ಹಾರ್ಟ್ ಅಟ್ಯಾಕ್ ಅನ್ನೋ ಭೂತ ಬಲಿ ಪಡೆಯುತ್ತಿದೆ.. ಹಾಸನದಲ್ಲಿ ಹೃದಯಾಘಾತಕ್ಕೆ ಬಲಿಯಾದವರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ.
ಹಾರ್ಟ್ ಅಟ್ಯಾಕ್ನಿಂದ ಸಾಲು ಸಾವು ಸಾವಾಗ್ತಿರೋ ಬಗ್ಗೆ ಸಿಎಂ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ. ಇದು ಕೋವಿಡ್ ಲಸಿಕೆಯ ದುಷ್ಪರಿಣಾಮಗಳೇನಾದರೂ ಇರಬಹುದೇ? ಅಂತ ಸಿದ್ದರಾಮಯ್ಯ ಟ್ವೀಟ್ ಮೂಲಕ ಅನುಮಾನ ವ್ಯಕ್ತಪಡಿಸಿದ್ದಾರೆ.
ಹೃದಯಾಘಾತ ಕೇಸ್ಗಳು ಹೆಚ್ಚಳ ಆಗ್ತಿರೋ ಬಗ್ಗೆ ಯಾವುದೇ ಭಯ ಬೇಡ ಅಂತ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ವರದಿ ಬರಲಿ ಬಂದಮೇಲೆ ಈ ಬಗ್ಗೆ ಕ್ರಮ ಅಂತ ಹೇಳಿದ್ದಾರೆ. ಒಟ್ನಲ್ಲಿ ರಾಜ್ಯದಲ್ಲಿ ಹಾರ್ಟ್ ಅಟ್ಯಾಕ್ ಅನ್ನೋ ಹಲ್ಚಲ್ ಸೃಷ್ಟಿಸಿರೋ ಆತಂಕ ಸದ್ಯ ಎಲ್ಲರ ನಿದ್ದೆಗೆಡಿಸಿದೆ.. ಬ್ಯಾಕ್ ಟು ಬ್ಯಾಕ್ ಹೃದಯಾಘಾತಕ್ಕೆ ಕಾರಣವೇನು ಅನ್ನೋ ಪ್ರಶ್ನೆಗೆ ತಜ್ಞರ ಸಮಿತಿಯೇ ಉತ್ತರಿಸಬೇಕಿದೆ.
ಒಟ್ನಲ್ಲಿ ಕ್ಯಾನ್ಸರ್ ಗಿಂತ ಮಾರಕವಾಗ್ತಿರೋ ಹೃದಯಘಾತದ ಬಗ್ಗೆ ಎಲ್ಲರು ಎಚ್ಚರದಿಂದ ಇರಬೇಕಿದೆ.. ಭಯ ಪಡದೆ ಎನರ್ಜಿ ಫುಡ್ ತಿಂದು ಆರೋಗ್ಯವಂತರಾಗಿರಬೇಕಿದೆ..

