ಬೆಂಗಳೂರು: ಸಂಪುಟ ಪುನರಾಚನೆ ಹಾಗೂ ಪವರ್ ಶೇರಿಂಗ್ (power sharing) ವಿಚಾರ ಕುರಿತು ಶಾಸಕರು ಹಾಗೂ ಸಚಿವರು ಬಹಿರಂಗವಾಗಿ ಮಾತಾಡೋದು ಸರಿಯಲ್ಲ ಎಂದು ಸಚಿವ ಸಂತೋಷ ಲಾಡ್ ಪಕ್ಷದ ಶಾಸಕ, ಮಂತ್ರಿಗಳಿಗೆ ಸಲಹೆ ನೀಡಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಒಳಗೆ ಪವರ್ ಶೇರಿಂಗ್ ಮತ್ತು ಸಚಿವ ಸಂಪುಟ ಪುನರಾಚನೆ ಬಗ್ಗೆ ಚರ್ಚೆ ಆಗ್ತಿರೋ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು, ಯಾವುದೇ ಶಾಸಕರು ಇದರ ಬಗ್ಗೆ ಮಾತಾಡಬಾರದು. ಸಿಎಂ ಬದಲಾವಣೆ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತೆ. ನಾವು ಯಾರು ಇದರ ಬಗ್ಗೆ ಮಾತಾಡಬಾರದು ಎಂದು ಹೇಳಿದ್ದಾರೆ.
ಗೊಂದಲ ನಾವು ಸೃಷ್ಟಿ ಮಾಡಬಾರದು. ನಮಗೆ ಏನಾದ್ರು ಬೇಕಾದ್ರೆ ಹೈಕಮಾಂಡ್ ಹೇಳಬೇಕು. ಮಾಧ್ಯಮಗಳಿಗೆ ಹೇಳಬಾರದು. ಏನೇ ಇದ್ದರು ಹೈಕಮಾಂಡ್‌ಗೆ ಬಳಿ ಹೋಗಿ ಹೇಳಲಿ. ಯಾರನ್ನ ಮಂತ್ರಿ ಮಾಡಬೇಕು ಅಂತ ಹೈಕಮಾಂಡ್ ನಿರ್ಧಾರ ಮಾಡುತ್ತೆ. ಯಾವ ಶಾಸಕರು, ಮಂತ್ರಿಗಳು ಬಹಿರಂಗವಾಗಿ ಮಾತಾಡೋದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಸಿಎಂ ಡಿನ್ನರ್ ಮೀಟಿಂಗ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಪ್ರತಿ ವರ್ಷ ಊಟಕ್ಕೆ ಕರೆಯುತ್ತಾರೆ. ಬೇರೆ ವಿಷಯ ಇಲ್ಲ. ಸಂಪುಟ ವಿಸ್ತರಣೆ ಬಗ್ಗೆ ಸಿಎಂ, ಡಿಸಿಎಂ, ಹೈಕಮಾಂಡ್ ತೀರ್ಮಾನ ಮಾಡುತ್ತದೆ ಅಂತ ಸ್ಪಷ್ಟನೆ ನೀಡಿದ್ದಾರೆ.

